ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ಸಿನಿಮಾ ಮದಗಜ.. ಈಗಾಗಲೇ ಟ್ರೈಲರು ಮತ್ತು ಸಾಂಗ್ಸ್ಗಳಿಂದ ಪ್ರೇಕ್ಷಕರಿಗೆ ನಿರೀಕ್ಷೆಯ ಮತ್ತೇರಿಸಿದ ಮದಗಜ.. ಈ ಶುಕ್ರವಾರ ಪ್ರೇಕ್ಷಕರ ಮುಂದೆ ಬರೋ ಮುಂಚೆ ಸೆನ್ಸಾರ್ ಅಗ್ನಿ ಪರೀಕ್ಷೆಯನ್ನ ಎದುರಿಸಿ ಬಂದಿದೆ ಮದಗಜ ಸಿನಿಮಾ.. ಹಾಗಾದ್ರೆ ಸೆನ್ಸಾರ್ ಪರೀಕ್ಷೆಯಲ್ಲಿ ಮದಗಜ ಜಸ್ಟ್ ಪಾಸಾ ? ಫಸ್ಟ್ ಕ್ಲಾಸ್ನಲ್ಲಿ ಪಾಸಾ..?
ಖಡಕ್ ಆ್ಯಕ್ಷನ್, ರಗಡ್ ಲುಕ್ , ಒಂದೊಳ್ಳೆ ಲವ್ ಸ್ಟೋರಿ , ಮನ ಮುಟ್ಟೋ ಸಾಂಗ್ಸ್ , ಒಂದೊಳ್ಳೆ ಹಾರ್ಟ್ ಟಚ್ಚಿಂಗ್ ಸ್ಟೋರಿ ಇವೆಲ್ಲ ಸೇರಿದ್ರಾಗೋದು ಮದಗಜ.. ಹಂಗತ್ತೇಳಿ ನಾವೇನ್ ಮದಗಜ ಸಿನಿಮಾವನ್ನ ಪೂರ್ತಿಯಾಗಿ ನೋಡಿಲ್ಲ ಕೊಂಚ ಕೊಂಚ ಮೇಲ್ನೋಟದ ಮುನ್ನೋಟ ಗೊತ್ತು ಅಷ್ಟೆ. ಒಂದು ಮಾಸ್ ಮನೋರಂಜನೆಗೆ ಬೇಕಾಗೋ ಎಲ್ಲಾ ಅಂಶಗಳನ್ನ ಇಟ್ಕೊಂಡು ಚಿತ್ರಪ್ರೇಮಿಗಳಾದ ನಿಮ್ಮ ಮುಂದೆ ಬರಲು ಸಜ್ಜಾಗಿರುವ ಸಿನಿಮಾ ಮದಗಜ.
ಅಂದುಕೊಂಡಂಗೆ ಸಿದ್ಧವಾಗಿ ಅದ್ದೂರಿಯಾಗಿಯೇ ಬರುತ್ತಿದೆ ಮದಗಜ ಸಿನಿಮಾ.. ಆದ್ರೆ ನಿರ್ದೇಶಕ ನಿರ್ಮಾಪಕ ನಟ ನಟಿಯರೆಲ್ಲ ಅಂದುಕೊಂಡಂಗೆ ಸಿನಿಮಾ ಬಂದಿದ್ದರು ಅದು ಸೆನ್ಸಾರ್ ಮಂಡಳಿಗೆ ಇಷ್ಟವಾಗ ಬೇಕಲ್ಲ.. ಸೆನ್ಸಾರ್ ಆಫೀಸರ್ಸ್ ಸಿನಿಮಾ ನೋಡಿ ಈ ಸಿನಿಮಾ ಜನರು ನೋಡಬಹುದು ಎಂದಾಗಲೇ ಒಂದು ಸಿನಿಮಾ ಅಧಿಕೃತವಾಗಿ ಪ್ರೇಕ್ಷಕ ಮಹಾ ಪ್ರಭುಗಳ ಮುಂದೆ ಬಂದು ನಿಲ್ಲೋಕೆ ಸಾಧ್ಯ.. ಈಗ ಸೆನ್ಸಾರ್ ವಿಷಯದಲ್ಲಿ ಮದಗಜ ಪರೀಕ್ಷೆ ಪಾಸ್ ಮಾಡಿದೆ..
ಸೆನ್ಸಾರ್ ಪರೀಕ್ಷೆಯನ್ನ ಪಾಸ್ ಮಾಡಿದ ಮದಗಜ
ಮಾಸ್ ‘ಮದಗಜ’ನಿಗೆ ಸಿಕ್ಕಿದೆ U/A ಸರ್ಟಿಫಿಕೆಟ್
ಹೌದು.. ಮದಗಜ ಸಿನಿಮಾ ಸೆನ್ಸಾರ್ ಅಗ್ನಿಪರೀಕ್ಷೆಯನ್ನ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಮಾಡಿದೆ.. ಪಕ್ಕಾ ಆ್ಯಕ್ಷನ್ ಎಂಟರ್ಟೈನ್ಮೆಂಟ್ ಆಗಿರುವ ಮದಗಜ ಚಿತ್ರಕ್ಕೆ U ಬಾರ್ A ಸರ್ಟಿಫಿಕೆಟ್ ಪ್ರಾಪ್ತಿಯಾಗಿದೆ. ಸೆನ್ಸಾರ್ ಮಂಡಳಿಯ ನಿರ್ಣಯಕ್ಕೆ ಮದಗಜ ಫಿಲ್ಮ್ ಟೀಮ್ ದಿಲ್ ಖುಷ್ ಆಗಿದ್ದು ಈ ವಾರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿತ್ತಿದೆ.
ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಆಶಿಕಾ ರಂಗನಾಥ್ ಹೀರೋಯಿನ್ ಆಗಿರುವ ಜಗಪತಿ ಬಾಬು , ಗರುಡ ರಾಮ್ ವಿಲನ್ಸ್ ಆಗಿರುವ ಚಿಕ್ಕಣ್ಣ , ಧರ್ಮಣ್ಣ ಮುಂತಾದವರ ಕಾಮಿಡಿ ಕಚಗುಳಿರುವ ಮದಗಜ ಸಿನಿಮಾ ಈಗಾಲೇ ರಿಲೀಸ್ ಗೂ ಮೆಂಚೆಯ ಒಳ್ಳೆಯ ಬ್ಯುಸ್ನೆಸ್ ಮಾಡಿದೆ.. ಡಬ್ಬಿಂಗ್ ರೈಟ್ಸ್ , ಆಡಿಯೋ ರೈಟ್ , ಟಿವಿ ರೈಟ್ಸ್ , ಒಟಿಟಿ ರೈಟ್ಸ್ ಗಳಿಂದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಜೋಳಿಗೆ ತುಂಬಿದೆ.. ಸಿನಿಮಾಕ್ಕೆ ರಿಲೀಸ್ಗೂ ಮುಂಚೆಯೆ ಸಿಗುತ್ತಿರುವ ಪಾಸಿಟಿವ್ ರೆಸ್ಪಾನ್ಸ್ಗೆ ನಿರ್ದೇಶಕ ಮಹೇಶ್ ಕುಮಾರ್ ಹ್ಯಾಪಿ ಆಗಿದ್ದಾರೆ.
ಡಿಸೆಂಬರ್ 3ನೇ ತಾರೀಖ್ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಸ್ಕ್ರೀನ್ಸ್ಗಳಲ್ಲಿ ಮದಗಜ ಮೋಡಿ ಪ್ರಾರಂಭವಾಗಲಿದ್ದು ಈಗಾಗಲೇ ಟಿಕೇಟ್ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿದೆ.. ಒಟ್ಟಿನಲ್ಲಿ ಒಂದು ಸಿನಿಮಾ ಬಿಡುಗಡೆಗೂ ಮುಂಚೆ ಎಷ್ಟು ಸೌಂಡ್ ಮಾಡಬೇಕು ಅಷ್ಟು ಸೌಂಡ್ ಅನ್ನ ಮದಗಜ ಸಿನಿಮಾ ಮಾಡುತ್ತಿರೋದಂತು ನಿಜ.
The post ಫ್ಯಾನ್ಸ್ಗೆ ಗುಡ್ನ್ಯೂಸ್; ‘ಮದಗಜ’ನಿಗೆ ಸಿಕ್ತು U/A ಸರ್ಟಿಫಿಕೇಟ್ appeared first on News First Kannada.