ಫ್ಯಾನ್ಸ್​ಗೆ ನಟ ದುನಿಯಾ ವಿಜಯ್​ ಭಾವುಕ ಮನವಿ


ಸ್ಯಾಂಡಲ್​ವುಡ್ ನಟ ದುನಿಯಾ ವಿಜಿ ನಾಳೆ ತಮ್ಮ 47ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸುವುದಿಲ್ಲ ಅಂತ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.

“ಅಭಿಮಾನಿಗಳಿಗೆ ನಮಸ್ಕಾರ. ಇಡಿ ಜಗತ್ತು ಸಂಕಷ್ಟದಲ್ಲಿರುವ ಸಮಯವಿದು. ಇಂತಹ ಸಮಯದಲ್ಲಿ ನನಗೊಂದು ಅಭೂತಪೂರ್ವ ಗೆಲುವನ್ನು ನೀವೆಲ್ಲರೂ ಕೊಟ್ಟಿದ್ದೀರ. ಇಂತಹ ಹೊತ್ತಿನಲ್ಲಿ ನನ್ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ಆಸೆ ನಿಮಗೆ ಇದೆ ಎಂಬುದು ನನಗೆ ಗೊತ್ತು. ನಾನು ಸಹ ನಿಮ್ಮನ್ನೆಲ್ಲ ನನ್ನ ಹುಟ್ಟುಹಬ್ಬದ ದಿನ ಭೇಟಿಯಾಗಬೇಕು ಎಂದುಕೊಂಡಿದ್ದೆ.

ಕಳೆದ ನಾಲ್ಕು ದಶಕಗಳಿಂದ ನನ್ನನ್ನು ಸಾಕಿ ಸಲಹಿದ ನನ್ನಮ್ಮ, ಅಪ್ಪ ಈ ವರ್ಷ ವಿಧಿಯಾಟಕ್ಕೆ ಬಲಿಯಾದರು. ಹಾಗೂ ಆತ್ಮೀಯರಾದ ಪುನೀತ್ ರಾಜ್ ಕುಮಾರ್ ಸಹ ನಮ್ಮನ್ನೆಲ್ಲ ಬಿಟ್ಟು ಹೋದರು. ಈ ನೋವುಗಳನ್ನು ಇಟ್ಟುಕೊಂಡು ನಾನು ಹುಟ್ಟು ಹಬ್ಬವನ್ನು ಹೇಗೆ ಸಂಭ್ರಮಿಸಲಿ. ಜತೆಗೆ ಕೋವಿಡ್ ಕೇಸುಗಳು ಸಹ ದಿನೇ ದಿನೇ ಹೆಚ್ಚಾಗುತ್ತಿವೆ. ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಮತ್ತು ನನಗೆ ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿರುವುದರಿಂದ ಈ ವರ್ಷ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.

ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಯಾರೂ ಮನೆಯ ಬಳಿ ಬರಬೇಡಿ. ನೀವಿದ್ದ ಕಡೆಯಿಂದಲೇ ನನಗೆ ಹಾರೈಸಿ. ಅಪ್ಪ ಅಮ್ಮನನ್ನು ಕಳೆದುಕೊಂಡ ನನಗೆ ನನ್ನ ಅಭಿಮಾನಿಗಳೆ ಅಪ್ಪ ಅಮ್ಮ ಎಲ್ಲವೂ. ಹಾಗಾಗಿ‌‌ ನಿಮ್ಮ ಹಾರೈಕೆ ಆಶೀರ್ವಾದ ಎರಡು ನನ್ನ ಮೇಲಿರಲಿ” ಅಂತ ದುನಿಯಾ ವಿಜಯ್​ ಬರೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *