ಸ್ಯಾಂಡಲ್ವುಡ್ನಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರ ಡಿಫರೆಂಟ್ ಸೌಂಡ್ ಮಾಡುತ್ತಿದ್ದು, ಇದೇ ಖುಷಿಯಲ್ಲಿ ಚಿತ್ರ ತಂಡ ರಾಜ್ಯದಾದ್ಯಂತ ಸಕ್ಸಸ್ ಟೂರ್ ಮಾಡ್ತಿದೆ.
ಅದರಂತೆ ಇಂದು ಉಡುಪಿಯ ಕಲ್ಪನಾ ಥಿಯೇಟರ್ಗೆ ಚಿತ್ರತಂಡ ಭೇಟಿ ನೀಡಿತ್ತು. ಚಿತ್ರತಂಡವು ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಣೆ ಮಾಡಿತು. ಮೂವಿ ಮುಗಿದ ನಂತರ ನೂರಾರು ಪ್ರೇಕ್ಷಕರು ನಟ ನಿರ್ದೇಶಕ ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೊತೆ ಫೋಟೋ ಕ್ಲಿಕ್ಕಿಸಿ, ಚಿತ್ರದ ಬಗ್ಗೆ ಪ್ರೇಕ್ಷಕರು ಡಿಸ್ಕಸ್ ಮಾಡಿದರು.
ಬೇರೆ ಬೇರೆ ಭಾಷೆಗಳಿಂದ ಡಬ್ಬಿಂಗ್ ರೈಟ್ಸ್ಗೆ ಬೇಡಿಕೆ ಬರ್ತಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ಮಾತುಕತೆ ನಡೆಯಲಿದೆ. ನಾವು ಬಹಳಷ್ಟು ಕಷ್ಟಪಟ್ಟು ಚಿತ್ರವನ್ನು ತಯಾರು ಮಾಡಿದ್ದೇವೆ. ಕೆಲ ವ್ಯಕ್ತಿಗಳು ಮೊಬೈಲ್ ನಲ್ಲಿ ಶೂಟಿಂಗ್ ಮಾಡಿ ಪೈರಸಿ ಮಾಡಿ ಮಾಡಿಬಿಟ್ಟಿದ್ದಾರೆ. ಪೈರಸಿ ಚಿತ್ರಗಳನ್ನು ನೋಡಬೇಡಿ. ಥಿಯೇಟರ್ಗೆ ಬಂದು ಶ್ರಮಕ್ಕೆ ಬೆಂಬಲ ಕೊಡಿ ಎಂದು ನಿರ್ದೇಶಕ ನಟ ರಾಜ್ ಬಿ ಶೆಟ್ಟಿ ಮನವಿ ಮಾಡಿಕೊಂಡರು.