ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಅಭಿನಯದ ‘ಪುಷ್ಪ-1’ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ಪುಷ್ಪ ಸಿನಿಮಾದ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿರುವ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿರೋ ರಶ್ಮಿಕಾ ತಮಗೆ ತನ್ನ ಅಭಿಮಾಗಳಿಂದ ಸಿಕ್ಕಂತ ನ್ಯಾಷನಲ್ ಕ್ರಶ್ ಬಿರುದಿನ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ಸಂದರ್ಶನವೊಂದಲ್ಲಿ ಮಾತನಾಡುವ ವೇಳೆ ರಶ್ಮಿಕಾಗೆ ನಿಮ್ಮನ್ನ ನ್ಯಾಷನಲ್ ಕ್ರಶ್ ಎಂದು ಕರೆಯಲಾಗುತ್ತಿದೆ. ಹೀಗಾಗಿ ಇದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಏನಾದ್ರೂ ಒತ್ತಡ ಇದ್ಯಾ ಎಂಬ ಪ್ರಶ್ನೆ ಕೇಳಾಲಾಯ್ತು. ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ಇಲ್ಲ. ನನ್ನ ತಂಡಕ್ಕೆ ನಾನು ಮ್ಯಾನಿಕ್ವೀನ್ ಇದ್ದ ಹಾಗೇ. ಹೀಗಾಗಿ ನಾನು ಹೇಗೆ ಕಾಣಿಸುತ್ತೇನೆ ಎಂಬುದರ ಎಲ್ಲಾ ಕ್ರೆಡಿಟ್ ನನ್ನ ತಂಡಕ್ಕೆ ಸೇರುತ್ತದೆ. ಯಾವುದೇ ನಟ ನಟಿ ಚೆನ್ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದರೆ ಅದರಲ್ಲಿ ಅವರ ತಂಡದ ಪರಿಶ್ರಮ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.
ನನಗೆ ನ್ಯಾಷನಲ್ ಕ್ರಶ್ ಎಂದು ಹೆಸರು ಬಂದಿರೋದು ಜಸ್ಟ್ ಹ್ಯಾಪನ್ಡ್ ಅಂತ ನಾನು ಭಾವಿಸುತ್ತೇನೆ. ಹೀಗಾಗಿ ಇದರಲ್ಲಿ ನನ್ನ ಮೇಲೆ ಒತ್ತಡ ಬೀರುವ ವಿಷಯವೇನು ಇಲ್ಲ. ನ್ಯಾಷನಲ್ ಕ್ರಶ್ ಬಿರುದನ್ನು ಇಲ್ಲಿಯವರೆಗೆ ನಾನು ಮಾಡಿರುವ ಶ್ರಮಕ್ಕೆ ಜನರಿಂದ ಸಿಕ್ಕಿರುವ ಮೆಚ್ಚುಗೆ ಎಂದು ನಾನು ಭಾವಿಸುತ್ತೇನೆ. ನನ್ನನ್ನು ಪ್ರೀತಿಸುವ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದ್ರು ರಶ್ಮಿಕಾ ಮಂದಣ್ಣ.