ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ “ಪುಷ್ಪ” ಚಿತ್ರದ ಟ್ರೈಲರ್ ಅನ್ನು ಕೊಂಚ ತಡವಾಗಿ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡ ಫ್ಯಾನ್ಸ್ ಬಳಿ ಕ್ಷಮೆ ಕೇಳಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ “ಪುಷ್ಪ” ಟ್ರೈಲರ್ ಅನ್ನು ಇಂದು ಸಂಜೆ 6.03 ಕ್ಕೆ ಬಿಡುಗಡೆ ಮಾಡವುದಾಗಿ ಚಿತ್ರತಂಡ ಬಹಳ ದಿನಗಳ ಹಿಂದೆ ಹೇಳಿತ್ತು .
ಆದ್ರೆ ತಾಂತ್ರಿಕ ಸಮಸ್ಯೆಯಿಂದಾಗಿ “ಪುಷ್ಪ” ಚಿತ್ರದ ಟ್ರೈಲರ್ ಅನ್ನು ಹೇಳಿದ ಸಮಯಕ್ಕೆ ರಿಲೀಸ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮೈತ್ರಿ ಮೂವಿ ಮೇಕರ್ಸ್ ಟ್ವಿಟರ್ ಮೂಲಕ ಫ್ಯಾನ್ಸ್ಗಳ ಬಳಿ ಕ್ಷಮೆ ಯಾಚಿಸಿದೆ.
#PushpaTrailer pic.twitter.com/xzhyn8XMpt
— Mythri Movie Makers (@MythriOfficial) December 6, 2021