ಕಳೆದ 25 ವರ್ಷದಿಂದ ಕನ್ನಡದ ಜೊತೆ ಜೊತೆಗೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಅಭಿನಯ ಚಕ್ರವರ್ತಿ ಗತ್ತು ಗಮ್ಮತ್ತು ಪಸರಿಸಿದ್ದಾಗಿದೆ. ಬೇರೆ ಬೇರೆ ವಿಭಿನ್ನ ಪಾತ್ರಗಳ ಮೂಲಕ ಕಿಚ್ಚಾ ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಕಿಚ್ಚನ ಅಭಿಮಾನಿಗಳು ಕತುರರಾಗಿದ್ದಾರೆ.

ಹೌದು, ಯಾವುದೋ ಪೋಸ್ಟ್​​ಗೆ ಸುದೀಪ್​ ಅವರ ಫೋಟೋ ಅಂಟಿಸಿ ನಮ್ಮಣ್ಣ ಇಲ್ಲಿದ್ರೆ ಚೆನ್ನಾ ಅಂರ್ತಿತ್ತಾರೆ. ಅದರಂತೆ ಈಗ ಕಿಚ್ಚ ಸುದೀಪ್ ಅವರನ್ನು ಆ ಪಾತ್ರದಲ್ಲಿ ನೋಡಲೇಬೇಕು ಅಂತಾ ಅಭಿಮಾನಿಗಳು ಕನವರಿಸುತ್ತಿದ್ದಾರೆ.

ಸದ್ಯ ಕಿಚ್ಚಾ ಸುದೀಪ್ ಅವರ ಕೋಟಿಗೊಬ್ಬ-3, ವಿಕ್ರಂತ್ ರೋಣಾ ಸಿನಿಮಾದಲ್ಲಿ ಅಭಿಮಾನಿಗಳು ಕಣ್ತುಂಬಿಕೊಳ್ಳುವ ಅವಕಾಶವಿದೆ. ಈ ಸಿನಿಮಾಗಳ ಬಳಿಕ ಮುಂದೇನು? ಕಿಚ್ಚನ ಹೆಜ್ಜೆ ಯಾವ ಕಡೆಗೆ ಅನ್ನೋ ಕುತೂಹಲ ಮೂಡಿದೆ. ಸುದೀಪ್ ಅವರ ಮುಂದಿನ ಸಿನಿಮಾಗಳಿ ಬಗ್ಗೆ ಅಂತೆ ಕಂತೆಗಳು ಕೇಳಿಬರುತ್ತಿರುವ ಟೈಮ್​​ನಲ್ಲಿ ಅವರ ಅಭಿಮಾನಿಗಳು ಪೋಸ್ಟರ್​ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ತೇಲಿ ಬಿಟ್ಟಿದ್ದಾರೆ. ಯಾವುದಾ ಪೋಸ್ಟರ್ ಅನ್ನೋದಕ್ಕೆ ಉತ್ತರ ಅಶ್ವತ್ಥಾಮ…

ಅನೂಪ್ ಬಂಡಾರಿ ನಿರ್ದೇಶನದಲ್ಲಿ ವಿಕ್ರಂತ್ ರೋಣನಾಗಿ ನಿಂತಿದ್ದಾರೆ ಕಿಚ್ಚ ಸುದೀಪ್. ಈ ಸಿನಿಮಾಗಾಗಿ ನಿರ್ಮಾಪಕ ಜಾಕ್ ಮಂಜು ಬೃಹತ್ ಬಂಡವಾಳವನ್ನೇ ಹರಿಸಿದ್ದಾರೆ. ಇನ್ನೇನು.. ಈ ವರ್ಷದ ಒಳಗೆ 3-ಡಿ ತಂತ್ರಜ್ಞಾನದಲ್ಲಿ ವಿಕ್ರಂತ್ ರೋಣ ಮೂಡಿ ಬರಲಿದೆ. ವಿಷಯ ಹೀಗಿರುವಾಗಲೇ, ಅಶ್ವತ್ಥಾಮ ಪೋಸ್ಟರ್ ಈಗ ಕುತೂಹಲ ವಿಷಯವಾಗಿದೆ.

ಈ ಹಿಂದೆಯೇ ಅನೂಪ್ ಬಂಡಾರಿ ಜೊತೆ ಬಿರ್ಲಾ ರಂಗ ಭಾಷ ಹಾಗೂ ಅಶ್ವತ್ಥಾಮ ಸಿನಿಮಾ ಮಾಡೋದಾಗಿ ಮಾತುಗಳು ಕೇಳಿ ಬಂದಿದ್ದವು. ಆದರೆ ಅವು ಇನ್ನೂ ಕೂಡಿ ಬಂದಿಲ್ಲ. ಆದರೆ ಈಗ ಹೊಸ ಪೋಸ್ಟರ್​ ನಿಂದ ನಿರೀಕ್ಷೆಗಳು ಹೆಚ್ಚಾಗಿದೆ. ವಿಕ್ರಾಂತ್ ರೋಣ ಸಿನಿಮಾ ಯಶಸ್ವಿಯಾದರೇ ಕಿಚ್ಚ ಸುದೀಪ್ ತಂಡ ಇನ್ನು ಹತ್ತು ಹೆಜ್ಜೆ ಮುಂದೇ ಹೋಗಲಿದೆ.

The post ಫ್ಯಾನ್ಸ್ ಆಸೆಯಂತೆ ಅಶ್ವತ್ಥಾಮ ಆಗ್ತಾರಾ ಕಿಚ್ಚ ಸುದೀಪ್? appeared first on News First Kannada.

Source: newsfirstlive.com

Source link