ಕ್ರೇಜಿಸ್ಟಾರ್​ ರವಿಚಂದ್ರನ್​​ಗೆ ಇಂದು 60 ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಆದರೆ ದೇಶದಲ್ಲಿ ಕೊರೊನಾ ಕರಿಮೋಡ ಆವರಿಸಿದ್ದರಿಂದ ಈ ಬಾರಿಯ ಹುಟ್ಟುಹಬ್ಬವನ್ನ ರವಿಮಾಮ ಸರಳವಾಗಿ ಆಚರಿಸಿಕೊಂಡರು.

ಸರಳವಾಗಿ ಕುಟುಂಬದ ಜೊತೆ ರವಿಚಂದ್ರನ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಪತ್ನಿ ಹಾಗೂ ಮಕ್ಕಳಾದ ಮನು, ವಿಕ್ರಂ, ಮಗಳು ಮತ್ತು ಅಳಿಯನ ಜೊತೆ ಕೇಕ್ ಕಟ್ ಮಾಡಿ ಹುಟ್ಟಹಬ್ಬವನ್ನ ಸಂಭ್ರಮಿಸಿದರು.

ಕೊರೊನಾ ಕಾರಣದಿಂದ ಈ ವರ್ಷ ಹುಟ್ಟುಹಬ್ಬವನ್ನು ರವಿಚಂದ್ರನ್ ಅಭಿಮಾನಿಮಾಗಳ ಜೊತೆ ಆಚರಿಸಿಲ್ಲ. ಕಳೆದ ವರ್ಷವೂ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಹ ರವಿಚಂದ್ರನ್ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ.

The post ಫ್ಯಾಮಿಲಿ ಜೊತೆ ಸಿಂಪಲ್ಲಾಗಿ ಬರ್ತ್​ಡೇ ಸೆಲಬ್ರೇಟ್ ಮಾಡಿಕೊಂಡ ರವಿಮಾಮ appeared first on News First Kannada.

Source: newsfirstlive.com

Source link