ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾಕ್ರೆನ್​ಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆಗಂತುಕರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ದಕ್ಷಿಣ ಫ್ರಾನ್ಸ್​ನಲ್ಲಿ ಜನರನ್ನು ಭೇಟಿಯಾಗುತ್ತಿದ್ದ ವೇಳೆ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅವರನ್ನು ಹತ್ತಿರಕ್ಕೆ ಕರೆದಿದ್ದಾನೆ. ಈ ವೇಳೆ ಹತ್ತಿರಕ್ಕೆ ಹೋದ ಮ್ಯಾಕ್ರಾನ್ ಕಪಾಳಕ್ಕೆ ಆ ವ್ಯಕ್ತಿ ಬಾರಿಸಿದ್ದಾನೆ. ತಕ್ಷಣವೇ ಭದ್ರತಾ ಪಡೆಗಳು ಆತ ಹಾಗೂ ಆತನ ಸಹಜರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇನ್ನು ಕೊರೊನಾ ಸಂಕಷ್ಟವಿರಲಿ ಅಥವಾ ಚೀನಾ-ಪಾಕಿಸ್ತಾನ ಮುಂತಾದ ದೇಶಗಳು ಕಿರಿಕ್ ಮಾಡಿದ ಸಂದರ್ಭವಿರಲಿ ಸದಾ ಭಾರತದ ಪರ ನಿಲ್ಲುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್  ಮೇಲಿನ ಹಲ್ಲೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

 

The post ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೆನ್​ಗೆ ಕಪಾಳ ಮೋಕ್ಷ; ಇಬ್ಬರು ಆಗಂತುಕರು ಅರೆಸ್ಟ್ appeared first on News First Kannada.

Source: newsfirstlive.com

Source link