ಫ್ರಾನ್ಸ್, ಬ್ಯಾಂಕಾಕ್​ನಿಂದ ಆಕ್ಸಿಜನ್​ ಪ್ಲಾಂಟ್​ಗಳನ್ನು ಆಮದು ಮಾಡಿಕೊಳ್ಳುತ್ತೇವೆ- ಕೇಜ್ರಿವಾಲ್

ಫ್ರಾನ್ಸ್, ಬ್ಯಾಂಕಾಕ್​ನಿಂದ ಆಕ್ಸಿಜನ್​ ಪ್ಲಾಂಟ್​ಗಳನ್ನು ಆಮದು ಮಾಡಿಕೊಳ್ಳುತ್ತೇವೆ- ಕೇಜ್ರಿವಾಲ್

ನವದೆಹಲಿ: ದೆಹಲಿಯಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರವಾಗಿದ್ದು, ಆಸ್ಪತ್ರೆಗಳಲ್ಲಿ ಬಹುತೇಕ ಐಸಿಯು ಬೆಡ್​​ಗಳು ತುಂಬಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ನಿನ್ನೆ ಒಂದೇ ದಿನ 380 ಸೋಂಕಿತರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಕೇಜ್ರಿವಾಲ್, ಜಿಟಿಡಿ ಆಸ್ಪತ್ರೆಯ ಬಳಿಯ ಗ್ರೌಂಡ್​​ನಲ್ಲಿ ನಿರ್ಮಿಸಿರುವ ಆಸ್ಪತ್ರೆ, ರಾಮಲೀಲಾ ಗ್ರೌಂಡ್​​ನಲ್ಲಿ ನಿರ್ಮಿಸಿದ ಆಸ್ಪತ್ರೆಯಲ್ಲಿ ತಲಾ 500 ಐಸಿಯು ಬೆಡ್​​​ಗಳನ್ನು ನಿರ್ಮಿಸಲಾಗುತ್ತಿದೆ. ರಾಧಾ ಸೋಮಿ ಕಾಂಪ್ಲೆಕ್ಸ್​ನಲ್ಲಿ 200 ಐಸಿಯು ಬೆಡ್​​ಗಳು ಸಿದ್ಧವಾಗುತ್ತಿವೆ.

ಉಳಿದಂತೆ ಬ್ಯಾಂಕಾಕ್​​ನಿಂದ 18 ಟ್ಯಾಂಕರ್​ ಅಕ್ಸಿಜನ್​​​​ ಹಾಗೂ ಫ್ರಾನ್ಸ್​ನಿಂದ 21 ಆಕ್ಸಿಜನ್​ ಪ್ಲಾಂಟ್​​​ಗಳನ್ನು ಅಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ವಿಮಾನದಲ್ಲಿ ತರಬೇಕಾದ ಹಿನ್ನಲೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಗಲಿದೆ. ನಾಳೆಯಿಂದಲೇ ದೆಹಲಿಗೆ ಆಕ್ಸಿಜನ್​​ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

The post ಫ್ರಾನ್ಸ್, ಬ್ಯಾಂಕಾಕ್​ನಿಂದ ಆಕ್ಸಿಜನ್​ ಪ್ಲಾಂಟ್​ಗಳನ್ನು ಆಮದು ಮಾಡಿಕೊಳ್ಳುತ್ತೇವೆ- ಕೇಜ್ರಿವಾಲ್ appeared first on News First Kannada.

Source: newsfirstlive.com

Source link