ಫ್ರಾನ್ಸ್​​​ ಸಂಸತ್​​​ನಲ್ಲಿ ಬಹುಮತ ಕಳೆದುಕೊಂಡ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ | French election Emmanuel Macron loses absolute majority in parliament


ಫ್ರಾನ್ಸ್​​​ ಸಂಸತ್​​​ನಲ್ಲಿ ಬಹುಮತ ಕಳೆದುಕೊಂಡ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್

ಇಮ್ಯಾನುಯೆಲ್ ಮ್ಯಾಕ್ರಾನ್

Emmanuel Macron ಈ ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಕ್ರಾನ್ ನೇತೃತ್ವದ ಎಡಪಂಥದ ಒಕ್ಕೂಟಕ್ಕೆ ಹಿನ್ನಡೆಯಾಗಿದ್ದು, ಬಹುಮತ ಪಡೆಯುವಲ್ಲಿ ಸೋಲನುಭವಿಸಿದೆ. ಫ್ರೆಂಚ್ ಸಂಸತ್ತಿನಲ್ಲಿ ಬಹುಮತ ಪಡೆಯಲು 289 ಸ್ಥಾನಗಳು ಬೇಕು.

ಫ್ರೆಂಚ್ ಅಧ್ಯಕ್ಷ (French President) ಇಮ್ಯಾನುಯೆಲ್ ಮ್ಯಾಕ್ರಾನ್ (Emmanuel Macron) ಭಾನುವಾರ ನಡೆದ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ಈ ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಕ್ರಾನ್ ನೇತೃತ್ವದ ಎಡಪಂಥದ ಒಕ್ಕೂಟಕ್ಕೆ ಹಿನ್ನಡೆಯಾಗಿದ್ದು, ಬಹುಮತ ಪಡೆಯುವಲ್ಲಿ ಸೋಲನುಭವಿಸಿದೆ. ಫ್ರೆಂಚ್ ಸಂಸತ್ತಿನಲ್ಲಿ (parliament) ಬಹುಮತ ಪಡೆಯಲು 289 ಸ್ಥಾನಗಳು ಬೇಕು. ಮ್ಯಾಕ್ರೆನ್ ಅಧ್ಯಕ್ಷರಾಗಿ ಮುಂದುವರಿಯಬೇಕಾದರೆ ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಮಾಡಬೇಕಿದೆ. ಭಾನುವಾರದ ಎರಡನೇ ಸುತ್ತಿನ ಮತದಾನದ ಫಲಿತಾಂಶವು ಫ್ರೆಂಚ್ ರಾಜಕೀಯದಲ್ಲಿನ ಅಚ್ಚರಿಯ ಬೆಳವಣಿಗೆಯನ್ನು ಕಂಡಿದೆ. 44ರ ಹರೆಯದ ಮ್ಯಾಕ್ರನ್ ಈಗ ದೇಶೀಯ ಸಮಸ್ಯೆಗಳಿಂದ ವಿಚಲಿತರಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ. ಅವರು ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವನ್ನು ಕೊನೆಗೊಳಿಸುವಲ್ಲಿ ಮತ್ತು ಯುರೋಪಿಯನ್ ಯೂನಿಯನ್ ನಲ್ಲಿ ಪ್ರಮುಖ ರಾಜಕಾರಣಿಯಾಗಿ ಪ್ರಮುಖ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿದ್ದಾರೆ.ಮ್ಯಾಕ್ರನ್ ಅವರ “ಟುಗೆದರ್” ಒಕ್ಕೂಟವು ಮುಂದಿನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೊಡ್ಡ ಪಕ್ಷವಾಗಿಯೇ ಇರುತ್ತದೆ. ಆದರೆ 245 ಸ್ಥಾನಗಳೊಂದಿಗೆ, ಸೋಮವಾರದ ಮುಂಜಾನೆ ಪ್ರಕಟವಾದ ಸಂಪೂರ್ಣ ಆಂತರಿಕ ಸಚಿವಾಲಯದ ಫಲಿತಾಂಶಗಳ ಪ್ರಕಾರ, 577 ಸದಸ್ಯರ ಚೇಂಬರ್‌ನಲ್ಲಿ ಬಹುಮತಕ್ಕೆ ಅಗತ್ಯವಿರುವ 289 ಸ್ಥಾನಗಳ ಕೊರತೆಯಿದೆ.

“ಈ ಪರಿಸ್ಥಿತಿಯು ನಮ್ಮ ದೇಶಕ್ಕೆ ಅಪಾಯವನ್ನುಂಟುಮಾಡುತ್ತದೆ, ನಾವು ಎದುರಿಸಬೇಕಾದ ಸವಾಲುಗಳನ್ನು ಇನ್ನಷ್ಟು ಇವೆ ಎಂದು ಪ್ರಧಾನಿ ಎಲಿಸಬೆತ್ ಬೋರ್ನ್ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಹುಮತ ಪಡೆಯಲು ನಾವು ನಾಳೆಯಿಂದಲೇ ಕಾರ್ಯ ಶುರುಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಎರಡು ದಶಕಗಳಲ್ಲಿ ಎರಡನೇ ಅವಧಿಗೆ ಗೆದ್ದ ಮೊದಲ ಫ್ರೆಂಚ್ ಅಧ್ಯಕ್ಷರಾಗಿ ಬಲಪಂಥೀಯರನ್ನು ಸೋಲಿಸಿದಾಗ ಮ್ಯಾಕ್ರನ್ ಅವರ ಏಪ್ರಿಲ್ ಅಧ್ಯಕ್ಷೀಯ ಚುನಾವಣೆಯ ಗೆಲುವಿಗೆ ಈ ಸೋಲು ಹೊಡೆತ ನೀಡಿದೆ.

ಎಪ್ರಿಲ್‌ನ ಅಧ್ಯಕ್ಷೀಯ ಚುನಾವಣೆಗಳಿಗಾಗಿ ಎಡಪಕ್ಷಗಳು ಒಡೆದುಹೋದ ನಂತರ ಮೇ ತಿಂಗಳಲ್ಲಿ ರಚನೆಯಾದ ಒಕ್ಕೂಟವು ಸಮಾಜವಾದಿಗಳು, ಕಠಿಣ ಎಡಪಂಥೀಯರು, ಕಮ್ಯುನಿಸ್ಟರು ಮತ್ತು ದಿ ಗ್ರೀನ್ ಪಕ್ಷವನ್ನು ಸೇರಿಸಿಕೊಂಡಿತ್ತು ತೆರಿಗೆ ಕಡಿತ, ಕಲ್ಯಾಣ ಸುಧಾರಣೆ ಮತ್ತು ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದೊಂದಿಗೆ ತನ್ನ ಎರಡನೇ ಅವಧಿಯಲ್ಲಿ ಅಧಿಕಾರಕ್ಕೇರಲು ಹಾಕಲು ಮ್ಯಾಕ್ರನ್ ಆಶಿಸಿದ್ದರು. ಅದೆಲ್ಲವೂ ಈಗ ಪ್ರಶ್ನೆಯಾಗಿದೆ.

ಅಧ್ಯಕ್ಷರು ಹೊಸ ಪಕ್ಷಗಳನ್ನು ತಲುಪಲು ಪ್ರಯತ್ನಿಸುತ್ತಿರುವಾಗ ಈಗ ಸಂಭಾವ್ಯ ರಾಜಕೀಯ ಅಸ್ತವ್ಯಸ್ತತೆಯ ಸಾಧ್ಯತೆಯಿದೆ. ಹಾಗಾಗಿ 61 ಸಂಸದರನ್ನು ಹೊಂದಿರುವ ಫ್ರೆಂಚ್ ಬಲಪಂಥೀಯರ ಸಾಂಪ್ರದಾಯಿಕ ಪಕ್ಷವಾದ ರಿಪಬ್ಲಿಕನ್ನರೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

TV9 Kannada


Leave a Reply

Your email address will not be published.