ಫ್ರೂಟಿ, ಟ್ರೋಫಿಕಾನಾ, ಆ್ಯಪಿ ಟೆಟ್ರಾ ಪ್ಯಾಕ್​ಗೆ ಜುಲೈ 1ರಿಂದ ನಿಷೇಧ?; ಇಲ್ಲಿದೆ ಮಾಹಿತಿ | Will Tetra Pack of Frooti, Appy Fizz, Tropicana be Banned From July 1? Full Deetails here


ಫ್ರೂಟಿ, ಟ್ರೋಫಿಕಾನಾ, ಆ್ಯಪಿ ಟೆಟ್ರಾ ಪ್ಯಾಕ್​ಗೆ ಜುಲೈ 1ರಿಂದ ನಿಷೇಧ?; ಇಲ್ಲಿದೆ ಮಾಹಿತಿ

ಆ್ಯಪಿ, ಫ್ರೂಟಿ

Image Credit source: India.com

ಫ್ರೂಟಿ ಮತ್ತು ಆ್ಯಪಿ ಕಂಪನಿಗಳ ಮಾಲೀಕತ್ವದ ಪಾನೀಯ ಕಂಪನಿ ಪಾರ್ಲೆ ಆಗ್ರೋ ಕೂಡ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಜಾರಿಗೊಳಿಸಲು ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸಿತ್ತು.

ನವದೆಹಲಿ: ಮುಂದಿನ ತಿಂಗಳಿನಿಂದ (ಜುಲೈ 1) ಏಕ-ಬಳಕೆಯ (ಸಿಂಗಲ್ ಯೂಸ್) ಪ್ಲಾಸ್ಟಿಕ್ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಿಂದಾಗಿ ಫ್ರೂಟಿ, ಆ್ಯಪಿ (Appy), ರಿಯಲ್, ಟ್ರೋಪಿಕಾನಾ ಮತ್ತು ಮಾಜಾದಂತಹ (Maaza) ತಂಪಾದ ಪಾನೀಯಗಳಿಗೆ ಸಂಕಷ್ಟ ಎದುರಾಗಿದೆ. ಈ ಹಿಂದೆ, ಫ್ರೂಟಿ ಮತ್ತು ಆ್ಯಪಿ ಕಂಪನಿಗಳ ಮಾಲೀಕತ್ವದ ಪಾನೀಯ ಕಂಪನಿ ಪಾರ್ಲೆ ಆಗ್ರೋ ಕೂಡ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಜಾರಿಗೊಳಿಸಲು ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸಿತ್ತು. ಸದ್ಯಕ್ಕೆ ಪ್ಲಾಸ್ಟಿಕ್ ಸ್ಟ್ರಾ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್‌ಗಳ ಮೇಲಿನ ಸರ್ಕಾರದ ನಿಷೇಧವನ್ನು 2022ರ ಜುಲೈ 1ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ‘ತರಾತುರಿ ನಿಷೇಧ’ ಎಂದು ಕರೆದಿರುವ ಪಾರ್ಲೆ ಆಗ್ರೋ ಇದು ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಒಟ್ಟಾರೆ ವ್ಯವಹಾರಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಪ್ಲಾಸ್ಟಿಕ್ ಸ್ಟ್ರಾಗಳ ಬಳಕೆಯ ಮೇಲಿನ ಕೇಂದ್ರ ಸರ್ಕಾರದ ನೇತೃತ್ವದ ನಿಷೇಧವನ್ನು ಪಾರ್ಲೆ ಆಗ್ರೋ ಅನುಮೋದಿಸಿದರೂ ತಡೆಯಾಜ್ಞೆಯ ಅನುಷ್ಠಾನವನ್ನು 6 ತಿಂಗಳವರೆಗೆ ಮುಂದೂಡಬೇಕೆಂಬುದು ನಮ್ಮ ಮನವಿಯಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

TV9 Kannada


Leave a Reply

Your email address will not be published.