ಫ್ರೆಂಚ್ ಕಾಲಜ್ಞಾನಿ ನಾಸ್ಟ್ರಡಾಮಸ್ ಪ್ರಕಾರ 2022 ಮನುಕುಲಕ್ಕೆ ಬಹಳ ಘೋರವಾಗಿ ಪರಿಣಮಿಸಲಿದೆ, ಯುದ್ಧಗಳಾಗಲಿವೆ! | Nostradamus predicts wars, inflation, atomic bomb explosion in 2022!


ವಿಶ್ವದ ನಾನಾ ಭಾಗಗಳಲ್ಲಿ ಸಂಭವಿಸುತ್ತಿರುವ ನೈಸರ್ಗಿಕ ವಿಕೋಪಗಳಿಂದ ಮನುಕುಲ ಕಂಗಾಲಾಗಿದೆ. ನಮ್ಮ ದೇಶದಲ್ಲೂ ಮಳೆ ಎಡೆಬಿಡದೆ ಸುರಿಯುತ್ತ್ತಿದೆ. ಅಂಫಾನ್, ತೌಕ್ತೆ, ನಿಸರ್ಗ ಮೊದಲಾದ ಚಂಡಮಾರುತಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ. ಇವೆಲ್ಲವುಗಳಿಗೆ ಪುಟವಿಟ್ಟಂತೆ ಎರಡು ವರ್ಷಗಳಿಂದ ಯಮದೂತನ ಹಾಗೆ ಬೆನ್ನಟ್ಟಿರುವ ಕೊರೊನಾ ವೈರಸ್. ವಿಶ್ವ ಪ್ರಸಿದ್ಧ ಜ್ಯೋತಿಷಿ ಮತ್ತು ಕಾಲಜ್ಞಾನಿ ಫ್ರಾನ್ಸಿನ ಮೈಕೆಲ್ ನಾಸ್ಟ್ರಡಾಮಸ್ ಭವಿಷ್ಯವಾಣಿಗಳಲ್ಲಿ ನಿಮಗೆ ನಂಬಿಕೆ ಇರುವುದಾದರೆ, ಮುಂದಿನ ವರ್ಷ ನಮಗೆ ಇನ್ನೂ ಹೆಚ್ಚಿನ ವಿಪತ್ತುಗಳು ಕಾದಿವೆ. ನಾಸ್ಟ್ರಡಾಮಸ್ ಭವಿಷ್ಯವನ್ನು ನಾವು ಅಲ್ಲಗಳೆಯುವಂತೆಯೂ ಇಲ್ಲ. ಯಾಕೆಂದರೆ ಅವನ ಕೆಲ ವಾಣಿಗಳು ಹಿಂದೆ ನಿಜವಾಗಿವೆ.

2022 ರಲ್ಲಿ ಯಾವ್ಯಾವ ವಿಪತ್ತುಗಳು ಸಂಭವಿಸಲಿವೆ ಅಂತ ನಾಸ್ಟ್ರಡಾಮಸ್ ಹೇಳಿರುವುದರ ಮೇಲೆ ವಿಶ್ವದಾದ್ಯಂತ ಚರ್ಚೆಗಳು ಆಗುತ್ತಿವೆ. ಆ ವರ್ಷದಲ್ಲಿ ಭೂಮಿಯ ಮೇಲೆ ಕ್ಷುದ್ರಗ್ರಹಗಳ ವಕ್ರದೃಷ್ಟಿ ಬಿದ್ದು ಇನ್ನೂ ಹೆಚ್ಚಿನ ನೈಸರ್ಗಿಕ ವಿಕೋಪಗಳು ಜರುಗಲಿವೆಯಂತೆ.

ಅಣುಬಾಂಬ್ ಪ್ರಯೋಗ ನಡೆದು ಅದು ಪರಿಸರದ ಮೇಲೆ ತೀವ್ರ ಸ್ವರೂಪದ ಪ್ರಭಾವ ಬೀರಲಿದೆಯಂತೆ. ಸಮುದ್ರಗಳಲ್ಲಿ ಬೃಹತ್ ಗಾತ್ರದ ಕಲ್ಲು ಬಂಡೆಗಳು ಉರುಳಿ ದೊಡ್ಡ ದೊಡ್ಡ ಅಲೆಗಳು ಎದ್ದು ಅವು ಭೂಮಿಯನ್ನು ಸುತ್ತುವರಿಯಲಿವೆ ಅಂತ ನಾಸ್ಟ್ರಡಾಮಸ್ ನುಡಿದಿದ್ದಾನೆ.

2022 ರಲ್ಲಿ ಹಣದುಬ್ಬರ ತೀವ್ರವಾಗಿ ಹೆಚ್ಚಾಗಿ, ಯುಎಸ್ ಡಾಲರ್ ಬೆಲೆ ಕುಸಿಯಲಿದೆ. ಶಾಂತಿ ಮತ್ತು ವಿನಾಶಕಾರಿ ಅಂಶಗಳು ಜೊತೆಜೊತೆಗೆ ಜರುಗಲಿವೆ. ಕ್ಷಿಪಣಿಗಳ ಪ್ರಯೋಗದಿಂದ ಮೆಡಿಟರೇನಿಯನ್ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ ಮತ್ತು ಮೂರು ದಿನಗಳ ಕಾಲ ಭೂಮಿಯನ್ನು ಕಾರ್ಗತ್ತಲು ಆವರಿಸಲಿದೆ ಎಂದು ನಾಸ್ಟ್ರಡಾಮಸ್ ಹೇಳಿದ್ದಾನೆ.

ಹಾಗೆಯೇ, 2022 ರಲ್ಲಿ ಯುದ್ಧಗಳು ಸಂಭವಿಸಲಿದ್ದು, ನೈಸರ್ಗಿಕ ವಿಕೋಪಗಳಿಂದಾಗಿ ಅವು ಬೇಗ ಕೊನೆಗೊಳ್ಳುತ್ತವೆ ಅಂತ ನಾಸ್ಟ್ರಡಾಮಸ್ ಹೇಳಿದ್ದಾನೆ. ಅವನ ತಾಯ್ನಾಡು ಫ್ರಾನ್ಸ್ನಲ್ಲಿ ಭಾರೀ ಬಿರುಗಾಳಿ ಬೀಸಿ ಭಯಂಕರವಾದ ಕ್ಷಾಮ ತಲೆದೋರುವೊದಂತೆ.

ವಿಶ್ವದೆಲ್ಲೆಡೆ ಕಂಪ್ಯೂಟರ್ ಗಳು ಮಾನವನ ಮೇಲ ಹತೋಟಿ ಸಾಧಿಸುತ್ತವೆ ಮತ್ತು ಕೃತಕ ಬುದ್ಧಿಮತ್ತೆಯ ಪರಿಣಾಮದಿಂದಾಗಿ ರೋಬೋಗಳು ಮಾನವ ಸಂತತಿಯ ನಿರ್ಮೂಲನೆಗೆ ಕಾರಣವಾಗುತ್ತವಂತೆ.

ಇದನ್ನೂ ಓದಿ:    IND vs NZ: ಶತಕದ ಬಳಿಕ ರೋಹಿತ್- ಶಾರ್ದೂಲ್ ಜೊತೆ ಶೆಹ್ರಿ ಬಾಬು ಟ್ಯೂನ್‌ಗೆ ಸ್ಟೆಪ್ ಹಾಕಿದ ಶ್ರೇಯಸ್! ವಿಡಿಯೋ ನೋಡಿ

TV9 Kannada


Leave a Reply

Your email address will not be published. Required fields are marked *