ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಗೆ ಡೀಪ್ ಫ್ರೈಡ್ ಟವಲ್ ಸಿಕ್ಕ ಘಟನೆ ಫಿಲಿಪೈನ್ಸ್​ನಲ್ಲಿ  ನಡೆದಿದೆ. ಅಲೀ ಪರೇಜ್ ಎಂಬ ಮಹಿಳೆಯೊಬ್ಬಳು, ಫ್ರೈಡ್ ಚಿಕನ್ ತಿನ್ನಬೇಕು ಅಂತ ಫುಡ್ ಆರ್ಡರ್ ಮಾಡಿದ್ರೆ, ಅದರಲ್ಲಿ ಡೀಪ್ ಫ್ರೈಡ್ ಚಿಕನ್ ಬದಲು ಡೀಪ್ ಫ್ರೈಡ್​ ಟವಲ್ ಸಿಕ್ಕಿದೆ.

ಚಿಕನ್ ಅಂದುಕೊಂಡು ತಿನ್ನಲು ಶುರು ಮಾಡಿದಾಗ ವಿಚಿತ್ರವೆನಿಸಿದ್ದು, ಪೂರ್ತಿ ಚಿಕನ್ ಬಿಡಿಸಿ ನೋಡಿದ್ದಾರೆ. ಆಗ ಅದು ಚಿಕನ್ ಅಲ್ಲ, ಟವಲ್ ಎಂದು ಗೊತ್ತಗಿದೆ. ಇದರ ವಿಡಿಯೋವನ್ನು ಅಲಿಫರೇಜ್ ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಫುಡ್ ಆರ್ಡರ್ ಮಾಡಿದ ರೆಸ್ಟೋರೆಂಟ್​ಗೆ ತರಾಟೆ ತೆಗೆದುಕೊಂಡಿದ್ದಾರೆ.

The post ಫ್ರೈಡ್ ಚಿಕನ್ ಆರ್ಡರ್​ ಮಾಡಿದ ಮಹಿಳೆಗೆ ಸಿಕ್ಕಿದ್ದು ‘ಫ್ರೈಡ್​ ಟವಲ್’ appeared first on News First Kannada.

Source: newsfirstlive.com

Source link