ಮುಂಬೈ: ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದ ಮೇಲೆ ಸದ್ಯ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನಕ್ಕೊಳಗಾಗಿದ್ದಾರೆ. ರಾಜ್​ ಕುಂದ್ರಾ ಅರೆಸ್ಟ್​​ಗೆ ಫೆಬ್ರವರಿ 4 ರಂದು ಬಂಗಲೆಯೊಂದರ ಮೇಲೆ ದಾಳಿ ಕಾರಣವಾಯ್ತು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಫೆಬ್ರವರಿ 4 ರಂದು ಮುಂಬೈ ಪೊಲೀಸರಿಗೆ ಒಂದು ಟಿಪ್ ಸಿಕ್ಕಿದೆ.. ಈ ಟಿಪ್ ಬೆನ್ನುತ್ತಿದ ಪೊಲೀಸರು ಮುಂಬೈನ ಮದ್ ಐಲ್ಯಾಂಡ್​ನ ಬಂಗಲೆಯೊಂದರಲ್ಲಿ ಐವರು ಪಾರ್ನ್ ಸಿನಿಮಾ ಶೂಟ್​ ಮಾಡುತ್ತಿರುವುದು ಗೊತ್ತಾಗಿದ್ದು ಐವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೀಗೆ ದಾಳಿ ಮಾಡಿದಾಗ ಇಬ್ಬರು ವ್ಯಕ್ತಿಗಳು ಸಂಪೂರ್ಣ ಬೆತ್ತಲಾಗಿದ್ದರು.. ಅವರು ಲೈಂಗಿಕ ಸಂಪರ್ಕ ನಡೆಸುತ್ತಿರುವ ಭಂಗಿಯಲ್ಲಿ ಇದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಅಲ್ಲದೇ ಆ ಬಂಗಲೆಯಿಂದ ಓರ್ವ ಯುವತಿಯನ್ನ ರಕ್ಷಣೆ ಮಾಡಲಾಗಿದ್ದು ನಂತರ ಆಕೆ ದೂರುದಾರೆಯಾಗಿದ್ದಾಳೆ.. ಆನಂತರ ತನಿಖೆ ಕೈಗೆತ್ತಿಕೊಳ್ಳಲಾಯ್ತು ಎಂದು ಮುಂಬೈ ಪೊಲೀಸರು ವಿವರಿಸಿದ್ದಾರೆ.

ಪಾರ್ನ್ ಅಲ್ಲ ಎರೋಟಿಕಾ ಅಂದಳು..

ಈ ದಾಳಿ ನಡೆದ ಕೆಲವು ದಿನಗಳ ನಂತರ ಪಾರ್ನ್ ಫಿಲಂಗಳ ನಿರ್ಮಾಪಕ ರೋವಾ ಖಾನ್ ಮತ್ತು ನಟಿ ಗೆಹ್ನಾ ವಶಿಷ್ಟ್ ಅವರನ್ನ ಬಂಧಿಸಲಾಗಿದೆ. ಸದ್ಯ ಗೆಹ್ನಾ ವಶಿಷ್ಟ್​ ಬೇಲ್ ಪಡೆದು ಹೊರಗಿದ್ದಾಳೆ.. ಅಲ್ಲದೇ ತನ್ನನ್ನು ತಪ್ಪಾಗಿ ಬಂಧಿಸಲಾಗಿದೆ.. ಜೊತೆಗೆ ತಾನು ಶೂಟ್ ಮಾಡ್ತಾ ಇದ್ದದ್ದು ಪಾರ್ನ್ ಅಲ್ಲ ಎರೋಟಿಕಾ ಎಂದು ಹೇಳಿಕೆ ನೀಡಿದ್ದಾಳೆ.

ಉಮೇಶ್ ಕಾಮತ್ ರಾಜ್ ಕುಂದ್ರಾ ಬಳಿ ಪರ್ಸನಲ್ ಅಸಿಸ್ಟೆಂಟ್ ಆಗಿದ್ದ..

ಇದಾದ ನಂತರ ಪೊಲೀಸರು ಪಾರ್ನ್ ಫಿಲಂಗಳು ಅಪ್ಲೋಡ್ ಆಗುತ್ತಿದ್ದ ಆ್ಯಪ್​ಗಳ ಬೆನ್ನು ಹತ್ತಿದ್ದಾರೆ. ಈ ವೇಳೆ ಯುಕೆ ಮೂಲದ ಕೆನ್ರಿನ್ ಪ್ರೈವೇಟ್ ಲಿಮಿಟೆಡ್​ಗೆ ಕೆಲಸ ಮಾಡುತ್ತಿದ್ದ ಉಮೇಶ್ ಕಾಮತ್ ಎಂಬಾತನ ವಿಚಾರಣೆಯನ್ನ ಪೊಲೀಸರು ಆರಂಭಿಸಿದ್ದಾರೆ. ಈ ಉಮೇಶ್ ಕಾಮತ್ ಈ ಹಿಂದೆ ರಾಜ್ ಕುಂದ್ರಾ ಬಳಿ ಪರ್ಸನಲ್ ಅಸಿಸ್ಟೆಂಟ್ ಆಗಿದ್ದುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಉಮೇಶ್ ಕಾಮತ್ ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿಯ ಆಧಾರದ ಮೇರೆಗೆ ರಾಜ್ ಕುಂದ್ರಾರನ್ನ ಬಂಧಿಸಲಾಗಿದೆ.. ಆ್ಯಪ್​ನಲ್ಲಿ ರಾಜ್​ಕುಂದ್ರಾ ಅವರ ಹೆಸರನ್ನ ಕ್ರಾಪ್ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕೆಮ್ರಿನ್ ಆ್ಯಪ್​ಗಳಿಗೆ ಪಾರ್ನ್ ವಿಡಿಯೋಗಳನ್ನ ಅಪ್​ಲೋಡ್ ಮಾಡುತ್ತಿದ್ದ..

ಪೊಲೀಸ್ ತನಿಖೆ ವೇಳೆ ಕೆನ್ರಿನ್ ಮಾಲೀಕತ್ವದಲ್ಲಿದ್ದ ಹಾಟ್​ಶಾಟ್ಸ್ ಹೆಸರಿನ ಆ್ಯಪ್​ನ್ನ ರಾಜ್​ಕುಂದ್ರಾ ಮಾಲೀಕತ್ವದ ವಿಯಾನ್ ಇಂಡಸ್ಟ್ರೀಸ್ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಭಾರತದ ಕಾನೂನಿನ ಕಣ್ತಪ್ಪಿಸಲು ಕೆಮ್ರಿನ್ ಆ್ಯಪ್​ಗಳಿಗೆ ಪಾರ್ನ್ ವಿಡಿಯೋಗಳನ್ನ ಅಪ್​ಲೋಡ್ ಮಾಡುತ್ತಿದ್ದ.. ಈ ವಿಡಿಯೋಗಳನ್ನ ಭಾರತದಲ್ಲೇ ಶೂಟ್ ಮಾಡಿ ಅವುಗಳನ್ನ ವಿ ಟ್ರಾನ್ಸ್​ಫರ್​ ಮೂಲಕ ಯುಕೆಗೆ ಕಳುಹಿಸಲಾಗ್ತಾ ಇತ್ತು ಹಾಗೂ ಅಲ್ಲಿಂದ ಪೇಯ್ಡ್ ಆ್ಯಪ್​ಗಳಲ್ಲಿ ಅವುಗಳನ್ನ ಬಿಡುಗಡೆ ಮಾಡಲಾಗ್ತಾ ಇತ್ತಂತೆ.

ಕುಂದ್ರಾ ಕಚೇರಿಯಲ್ಲಿ ಏನೆಲ್ಲಾ ಸಿಕ್ಕಿದೆ..?

ರಾಜ್ ಕುಂದ್ರಾ ಕಚೇರಿಯ ತಪಾಸಣೆ ನಡೆಸಿರುವ ಪೊಲೀಸರು ರಾಜ್​ಕುಂದ್ರಾ ಪ್ರಮುಖ ಆರೋಪಿ ಎನ್ನುವುದಕ್ಕೆ ಬೇಕಾದ ಅಗತ್ಯ ದಾಖಲೆಗಳು ಸಿಕ್ಕಿವೆ ಎಂದಿದ್ದಾರೆ. ಅಗ್ರೀಮೆಂಟ್ ಪೇಪರ್​ಗಳು, ಈಮೇಲ್ಸ್, ವಾಟ್ಸ್​ಆ್ಯಪ್ ಚಾಟ್​​ಗಳು, ಪೋರ್ನ್ ಸಿನಿಮಾದ ಕ್ಲಿಪ್​ಗಳೂ ಸಿಕ್ಕಿವೆಯಂತೆ.

ಯುಕೆ ಮೂಲದ ಕಂಪನಿಯನ್ನ ರಾಜ್ ಕುಂದ್ರಾ ಹಾಗೂ ಸಹೋದರರೇ ರೆಜಿಸ್ಟರ್ ಮಾಡಿಸಿದ್ದು ಭಾರತೀ ಸೈಬರ್ ಕಾನೂನಿನ ಕಣ್ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಮುಂಬೈನ ಬಾಡಿಗೆ ಮನೆಗಳಲ್ಲಿ ಹೋಟೆಲ್​ಗಳಲ್ಲಿ ಈ ಪಾರ್ನ್ ಸಿನಿಮಾಗಳ ಶೂಟಿಂಗ್ ನಡೆಯುತ್ತಿತ್ತು.. ಇವುಗಳಲ್ಲಿ ನಟಿಸಲು ಮಾಡೆಲ್​ಗಳನ್ನ ವೆಬ್​ ಸಿರೀಸ್ ಎಂದು ಸುಳ್ಳು ಹೇಳಿ ಕರೆಸಲಾಗುತ್ತಿತ್ತು ಎನ್ನಲಾಗಿದೆ.

The post ಬಂಗಲೆ ಮೇಲೆ ರೇಡ್ ಮಾಡಿದ ಮುಂಬೈ ಪೊಲೀಸ್​ಗೆ ಕುಂದ್ರಾ ಎಂಬ ದೊಡ್ಡಾನೆಯೇ ಸಿಕ್ಕಿದ್ದು ಹೇಗೆ..? appeared first on News First Kannada.

Source: newsfirstlive.com

Source link