ಸಿಂಪಲ್ ಸುನಿ ಸಾರಥ್ಯದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾದ ಸಖತ್ ಆಗಿಯೇ ಸೌಂಡ್ ಮಾಡ್ತಿದೆ.. ಏನೇ ಮಾಡಿದ್ರು ಡಿಫರೆಂಟ್ ಆಗಿ ಮಾಡ್ತಾ ಚಿತ್ರಪ್ರೇಮಿಗಳನ್ನ ಇಂಪ್ರೇಸ್ ಮಾಡ್ತಾ ಬಂದಿರುವ ಸಖತ್ ಸಿನಿಮಾ ಬಳಗ ಈಗ ಒಂದು ಗೋಲ್ಡನ್ ಸಾಂಗ್ ಅನ್ನ ಅಭಿಮಾನಿ ಬಂಧುಗಳಿಗೆ ಅರ್ಪಿಸಿದೆ.. ಹಾಗಾದ್ರೆ ಹೇಗಿದೆ ಸಖತ್ ಸಿನಿಮಾದ ಹಾಡಿನ ಜಗಮಗ ಝಲಕ್?
ಹಾಡು ಕೇಳ ಬೇಕು ಬಂದಿರುವ ಪ್ರಜೆಗಳು , ಇಲ್ಲಿ ನೀವೆ ನಮ್ಮ ನಿಜವಾದ ಬಂಧುಗಳು, ಈಗ ಬಿಳುತ್ತವೇ ಗೋಲ್ಡನ್ ಸ್ಟೆಪುಗಳು , ಕೇಕೆ ಹಾಕುವಂತೆ ಕುಣಿಬೇಕು ನೀವುಗಳು.. ಸಖತ್ ಸಖತ್ ಸಖತ್.. ಇದು ಸಖತ್ ಸಿನಿಮಾದ ಱಪ್ ಶೈಲಿಯ ಟೈಟಲ್ ಟ್ರ್ಯಾಕ್ನ ಸಖತ್ ಸಾಲುಗಳು.
ಇದನ್ನೂ ಓದಿ:ರಾಜ್ ಕುಂದ್ರಾಗೆ ತಪ್ಪುತ್ತಿಲ್ಲ ಸಂಕಷ್ಟಗಳು.. ಚೀಟಿಂಗ್ ಕೇಸ್ನಲ್ಲಿ ಶಿಲ್ಪ ಶೆಟ್ಟಿ ವಿರುದ್ಧವೂ ಬಿತ್ತು FIR
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ನಿರೀಕ್ಷಿತ ಸಿನಿಮಾ ಸಖತ್.. ಚಮಕ್ ಅನ್ನೊ ಸೂಪರ್ ಹಿಟ್ ಕೊಟ್ಟ ಸಿಂಪಲ್ ಸುನಿ – ಗೋಲ್ಡನ್ ಗಣಿ ಜೋಡಿ ಈಗ ಸಖತ್ ಸಿನಿಮಾವನ್ನ ಪ್ರೇಕ್ಷಕರಿಗೆ ಸಖತ್ ಆಗಿಯೇ ಕೊಡಲು ಮುಂದಾಗಿದೆ.. ಶೂಟಿಂಗ್ , ಎಡಿಟಿಂಗು , ಡಬ್ಬಿಂಗು ಈ ರೀತಿಯ ಎಲ್ಲಾ ವಿಂಗ್ಗಳನ್ನ ಮುಗಿಸಿರುವ ಸಖತ್ ಸಿನಿಮಾ ತಂಡ ಈಗ ಮುದ್ದು ಮುದ್ದಾದ ಹಾಡುಗಳಿಂದ ಪ್ರಚಾರದ ಕಹಳೆಯನ್ನ ಊದುತ್ತಿದೆ.
ಝಗಮಗ ಸೆಟ್ನಲ್ಲಿ ಗೋಲ್ಡನ್ ಸ್ಟಾರ್ ‘‘ಸಖತ್’’ ಸ್ಟೆಪ್ಸ್
ಱಪ್ ಸಾಂಗ್ ಶೈಲಿಯಲ್ಲಿ ‘‘ಸಖತ್’’ ಟೈಟಲ್ ಟ್ರ್ಯಾಕ್
ಕೆಲ ದಿನಗಳ ಹಿಂದೆ ಒಂದು ರೊಮ್ಯಾಂಟಿಕ್ ಸಾಂಗ್ ಒಂದನ್ನ ಹಾಗೂ ಟೀಸರ್ ಒಂದನ್ನ ಹೊರ ಬಿಟ್ಟು ಚಿತ್ರಪ್ರೇಮಿಗಳ ಎದುಯೋಳಗೆ ನಿರೀಕ್ಷೆರಾಗ ಮಾಲಿಕೆಯನ್ನ ಮೂಡಿಸಿದ್ದ ಸಖತ್ ಸಿನಿಮಾ ತಂಡ ಈಗ ಟೈಟಲ್ ಸಾಂಗ್ ಮೂಲಕ ಗಮನ ಸೇಳೆಯುತ್ತಿದೆ.
ಜೂಡ ಸ್ಯಾಂಡಿ ಸಂಗೀತ ಸಂಯೋಜನೆ ಸಖತ್ ಸಿನಿಮಾ ಹಾಡು ಱಪ್ ಸ್ಟೈಲ್ನಲ್ಲಿ ಮೂಡಿಬಂದಿರೋದು ವಿಶೇಷ.. ಸಿಂಪಲ್ ಸುನಿ , ಎಸ್.ಐ.ಡಿ ಱಪರ್ ಈ ಹಾಡಿನ ಸಾಹಿತ್ಯದ ಸೂತ್ರದಾರರು.. ಇವತ್ತಿನ ಟ್ರೆಂಡಿಗೆ ತಕ್ಕಹಾಗೆ ಝಗಮಗ ಸೆಟ್ನಲ್ಲಿ ಸಖತ್ ಸಿನಿಮಾ ಟೈಟಲ್ ಟ್ರ್ಯಾಕ್ ಅನ್ನ ಶೂಟ್ ಮಾಡಲಾಗಿದೆ.. ಟಪಾಂಗುಚ್ಚಿ ಪ್ಲಸ್ ಸೂಪರ್ ಡ್ಯಾನ್ಸ್ ಸ್ಟೆಪ್ಸ್ಗಳನ್ನ ಬಂಗಾರದ ತಾರೆ ಗಣೇಶ್ ಹಾಕಿದ್ದಾರೆ.
ಕೆ.ವಿ.ಎನ್ ಪ್ರೋಕ್ಷನ್ ನಡಿ ನಿಶಾ ವೆಂಕಟ್ ಕೋಣಂಕಿ ಹಾಗೂ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಗೌಡ ನಿರ್ಮಾಣದಲ್ಲಿ ಸಖತ್ ಸಿನಿಮಾ ಸಖತ್ ಅದ್ದೂರಿಯಾಗಿಯೇ ಮೂಡಿಬಂದಿದೆ.. ಈ ತಿಂಗಳ 26ನೇ ತಾರೀಖ್ ಪ್ರೇಕ್ಷಕರ ಮುಂದೆ ಬರಲಿರುವ ಸಖತ್ ಸಿನಿಮಾ ಬಳಗದೊಳ್ ಇನಷ್ಟು ಕಾಡುವ ಕಂಟೆಂಟ್ ಅಡಗಿದ್ದು ಶೀಘ್ರದಲ್ಲೇ ಒಂದೊಂದಾಗಿಯೇ ಹೊರ ಬರಲಿವೆ.