ಮೈಸೂರು: ಆನೆಯೊಂದಿಗೆ ಕಾದಾಡಿ ಗಂಭೀರವಾಗಿ ಗಾಯಗೊಂಡಿದ್ದ ಪ್ರವಾಸಿಗರ ನೆಚ್ಚಿನ ‘ಮೂಗ’ ಹುಲಿ ಸಾವನ್ನಪ್ಪಿದೆ. ಇಲ್ಲಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮೂಗ ಉಸಿರು ಚೆಲ್ಲಿದ್ದಾನೆ.
ಮೂಗ, ಬಂಡಿಪುರದ ಸಫಾರಿ ಪ್ರಿಯರಿಗೆ ಹಾಟ್ ಪೇವರೆಟ್ ಆಗಿದ್ದ. ಅಕ್ಟೋಬರ್ 20 ರಂದು ಆನೆ ಜೊತೆ ಈ ಹುಲಿ ಕಾದಾಡಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿತ್ತು. ಆನೆ ದಂತ ಬಲವಾಗಿ ತಿವಿದಿದ್ದರಿಂದ ಹುಲಿಯ ಕರುಳು ಮತ್ತು ಶ್ವಾಸಕೋಶದ ಭಾಗಕ್ಕೆ ಗಂಭೀರ ಗಾಯವಾಗಿತ್ತು.
ಹೀಗಾಗಿ ಮೈಸೂರಿನ ಮೃಗಾಲಯ ಪುನರ್ವಸತಿ ಕೇಂದ್ರದಲ್ಲಿ ಪಶುವೈದ್ಯರಿಂದ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಏಳು ವರ್ಷದ ಮೂಗ ಸಾವನ್ನಪ್ಪಿದ್ದಾನೆ. ನಿಯಾಮಾನುಸಾರ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.