ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ತಡರಾತ್ರಿ ಪ್ರಭಾವಿ ಮುಖಂಡನ ಜೊತೆ ಶ್ರೀಗಳ ಚರ್ಚೆ, ತನಿಖೆ ವೇಳೆ ಸ್ಪೋಟಕ ಮಾಹಿತಿ – bande mutt seer suicide case police collecting seer call details ramanagara


ಆತ್ಮಹತ್ಯೆಗೂ ಮುನ್ನ ರಾತ್ರಿ 1.30ರವರೆಗೂ ಸ್ವಾಮೀಜಿ ಪ್ರಭಾವಿ ಮುಖಂಡನೊಬ್ಬನ ಜೊತೆಗೆ ಫೋನ್ ಸಂಭಾಷಣೆಯಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಾಮೀಜಿ ಅವರ ಮೊಬೈಲ್ ನಂಬರ್ ಕಾಲ್ ಡೀಟೈಲ್ಸ್ ಪರಿಶೀಲನೆ ಮಾಡುತ್ತಿದ್ದಾರೆ.

ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ತಡರಾತ್ರಿ ಪ್ರಭಾವಿ ಮುಖಂಡನ ಜೊತೆ ಶ್ರೀಗಳ ಚರ್ಚೆ, ತನಿಖೆ ವೇಳೆ ಸ್ಪೋಟಕ ಮಾಹಿತಿ

ಬಂಡೆಮಠದ ಬಸವಲಿಂಗ ಸ್ವಾಮೀಜಿ

ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ದೊಡ್ಡ ಮಠ ಅಂತಾನೇ ಹೆಸರು ಪಡೆದಿರುವ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಶುರು ಮಾಡಿದ್ದು ಕೆಲವು ಸ್ವಾಮೀಜಿ ಆತ್ಮಹತ್ಯೆಗೂ ಮುನ್ನ ಫೋನ್ ಸಂಭಾಷಣೆಯಲ್ಲಿದ್ದರು ಎಂಬ ಸಂಗತಿ ಪತ್ತೆಯಾಗಿದೆ.

ರಾತ್ರಿ 2 ಗಂಟೆಯಿಂದ 4 ಗಂಟೆಯ ಅವಧಿಯಲ್ಲಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೂ ಮುನ್ನ ರಾತ್ರಿ 1.30ರವರೆಗೂ ಸ್ವಾಮೀಜಿ ಪ್ರಭಾವಿ ಮುಖಂಡನೊಬ್ಬನ ಜೊತೆಗೆ ಫೋನ್ ಸಂಭಾಷಣೆಯಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಾಮೀಜಿ ಅವರ ಮೊಬೈಲ್ ನಂಬರ್ ಕಾಲ್ ಡೀಟೈಲ್ಸ್ ಪರಿಶೀಲನೆ ಮಾಡುತ್ತಿದ್ದಾರೆ. ಸ್ವಾಮೀಜಿಗೆ ಬಂದಿರುವ ಲಾಸ್ಟ್ ಕಾಲ್ ಮೇಲೆ ಅನುಮಾನಗಳು ಹೆಚ್ಚಾಗಿವೆ. ಇದರ ಜೊತೆಗೆ ಸ್ವಾಮೀಜಿ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದವರ ಬಗ್ಗೆ ಸಹ ಮಾಹಿತಿ ಸಂಗ್ರಹಿಸಲು ಕಾಲ್ ಡೀಟೈಲ್ಸ್ ನೆರವಾಗಿದೆ.

TV9 Kannada


Leave a Reply

Your email address will not be published.