ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ಡೆತ್​ನೋಟ್​​ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖ- ಎಸ್​ಪಿ ಸಂತೋಷ್ ಬಾಬು – Bande mutt seer suicide case: few names are mentioned in the death note said SP santosh babu


ಬಂಡೆ ಮಠದ ಬಸವಲಿಂಗ ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಧಿಸಿದಂತೆ ಮಠದ ಕಡೆಯವರು ದೂರು ದಾಖಲಿಸಿದ್ದಾರೆ.

ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ಡೆತ್​ನೋಟ್​​ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖ- ಎಸ್​ಪಿ ಸಂತೋಷ್ ಬಾಬು

ಬಂಡೆಮಠದ ಬಸವಲಿಂಗ ಸ್ವಾಮೀಜಿ

ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ದೊಡ್ಡ ಮಠ ಅಂತಾನೇ ಹೆಸರು ಪಡೆದಿರುವ ಬಂಡೆ ಮಠದ (Bande mutt) ಬಸವಲಿಂಗ ಸ್ವಾಮೀಜಿ (Basavling Swamiji) ಅವರು ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಧಿಸಿದಂತೆ ಮಠದ ಕಡೆಯವರು ದೂರು ನೀಡಿದ್ದಾರೆ ಎಂದು ರಾಮನಗರದಲ್ಲಿ ಎಸ್​ಪಿ ಸಂತೋಷ್ ಬಾಬು ಹೇಳಿದ್ದಾರೆ. ಸತ್ತಿರುವ ಜಾಗದಲ್ಲಿ 3 ಪುಟಗಳ ಡೆತ್​ನೋಟ್​​ ಪತ್ತೆಯಾಗಿದೆ. ಡೆತ್​ ನೋಟ್​ನಲ್ಲಿ ಹಲವು ವಿಚಾರಗಳ ಪ್ರಸ್ತಾಪ ಮಾಡಿದ್ದಾರೆ. ಡೆತ್​ನೋಟ್​ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ತನಿಖೆಯ ದೃಷ್ಟಿಯಿಂದ ಅವರ ಹೆಸರನ್ನು ಬಹಿರಂಪಡಿಸಲ್ಲ ಎಂದು ತಿಳಿಸಿದರು.

ಶ್ರೀಗಳಿಗೆ ಸಂಬಂಧಿಸಿದ 2 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಮೊಬೈಲ್​ಗಳು ಕೂಡ ಲಾಕ್ ಆಗಿವೆ. ವೈರಲ್​ ಆಗಿರುವ ಡೆತ್​ನೋಟ್​ ಶ್ರೀಗಳಿಗೆ ಸಂಬಂಧಿಸಿದ್ದಲ್ಲ. ಡೆತ್​ನೋಟ್​​ಗೂ ವೈರಲ್​ ಆದ ಫೋಟೋಗೂ ವ್ಯತ್ಯಾಸವಿದೆ. ಡೆತ್​ನೋಟ್​ ಸಿಕ್ಕರೂ ನಮ್ಮ ಗಮನಕ್ಕೆ ತರದಿದ್ದಕ್ಕೆ ಕೇಸ್​ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಠದ ಯಾರ ಮೇಲೂ ಸಂಶಯ ವ್ಯಕ್ತಪಡಿಸಿಲ್ಲ. ಬೆದರಿಕೆ ಕರೆಗಳ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ತನಿಖೆ ನಂತರ ಸಂಪೂರ್ಣ ‌ಮಾಹಿತಿ ನೀಡುತ್ತೇವೆ. ವಿಡಿಯೋ ಇದೆ ಎಂದು ಜನ ಮಾತನಾಡುತ್ತಿದ್ದಾರೆ ಅದರ ಬಗ್ಗೆ ಮಾಹಿತಿ ‌ಇಲ್ಲ. ನಾವು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಪೊಲೀಸರ‌ ಮೇಲೆ ಯಾವುದೇ ‌ಒತ್ತಡ ಇಲ್ಲ. ಸಾಕಷ್ಟು ‌ಗಂಭೀರ ಪ್ರಕರಣವಾಗಿದ್ದು, ಕಾನೂನು ಪ್ರಕಾರ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಡೆತ್ ನೋಟ್ ಹಾಗೂ ಮೊಬೈಲ್​ನ್ನು ಎಫ್​.ಎಸ್.ಎಲ್ ಕಳುಹಿಸಲಾಗುತ್ತಿದೆ. ಎರಡು ಫೋನ್​ಗಳು ಉಪಯೋಗಿಸುತ್ತಿದ್ದರು. ಮಠದ ಒಳಗೆ ಏನು ನಡೆಯುತ್ತಿತ್ತು ಅದರ ಬಗ್ಗೆ ವಿಚಾರಣೆ ಮಾಡುವುದಿಲ್ಲ. ಆತ್ಮಹತ್ಯೆಗೆ ಕಾರಣಕರ್ತರು ಯಾರು ಎಂದು ತನಿಖೆ ಮಾಡುತ್ತಿದ್ದೇವೆ. ಸಾಕಷ್ಟು ಜನ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಬರುತ್ತಿದ್ದರು. ಕೆಲ ದಿನಗಳಲ್ಲಿ ಏನಾಗಿತ್ತು ಎಂದು ತಿಳಿಯುತ್ತೇವೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.