ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ವಿಡಿಯೊ ರೆಕಾರ್ಡ್ ಆಗಿದ್ದ ಮೊಬೈಲ್ ಪತ್ತೆ, ನೀಲಾಂಬಿಕೆ ಖೆಡ್ಡಾಕ್ಕೆ ಬಿದ್ದಿದ್ದ ಇನ್ನಷ್ಟು ಸನ್ಯಾಸಿಗಳು – Bande Mutt Swamiji Suicide Case Police Find Out Mobile That used to Record Honey Trap Video


ಬಂಡೇಮಠದ ಸ್ವಾಮೀಜಿ ಜೊತೆಗೆ ಎರಡು ವರ್ಷಗಳಿಂದ ನೀಲಾಂಬಿಕೆ ಸಂಪರ್ಕದಲ್ಲಿ ಇದ್ದಳು. ಏಪ್ರಿಲ್​ನಿಂದ ವಾಟ್ಸಾಪ್​ನ ವಿಡಿಯೊ ಕಾಲ್ ರೆಕಾರ್ಡ್ ಮಾಡಲು ಆಕೆ ಯತ್ನಿಸುತ್ತಿದ್ದಳು.

ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ವಿಡಿಯೊ ರೆಕಾರ್ಡ್ ಆಗಿದ್ದ ಮೊಬೈಲ್ ಪತ್ತೆ, ನೀಲಾಂಬಿಕೆ ಖೆಡ್ಡಾಕ್ಕೆ ಬಿದ್ದಿದ್ದ ಇನ್ನಷ್ಟು ಸನ್ಯಾಸಿಗಳು

ಆರೋಪಿ ನೀಲಾಂಬಿಕೆ (ಎಡಚಿತ್ರ), ಮೃತ ಬಸವಲಿಂಗ ಸ್ವಾಮೀಜಿ ಮತ್ತು ಆರೋಪಿ ಮೃತ್ಯುಂಜಯ ಸ್ವಾಮೀಜಿ

ರಾಮನಗರ: ಬಂಡೇಮಠದ ಬಸವಲಿಂಗ ‌ಸ್ವಾಮೀಜಿ ಆತ್ಮಹತ್ಯೆ ‌ಪ್ರಕರಣದಲ್ಲಿ (Basavalinga Swamiji Suicide Case) ಪೊಲೀಸರಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಬಸವಲಿಂಗ ಸ್ವಾಮೀಜಿ ಜೊತೆಗೆ ಮಾತನಾಡುವಾಗ ನೀಲಾಂಬಿಕೆ (ಚಂದು)  (Nilambike Honeytrap) ವಿಡಿಯೊ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಸ್ಮಾರ್ಟ್​ಫೋನ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೊದಲು ವಿಚಾರಣೆ ವೇಳೆ ಹಳೆಯ ಮೊಬೈಲ್ ನಾಶಪಡಿಸಿದ್ದೇನೆ ಎಂದು ನೀಲಾಂಬಿಕೆ ಹಲವು ಬಾರಿ ಹೇಳಿದ್ದಳು. ಆದರೆ ನಿರಂತರ ವಿಚಾರಣೆಯ ನಂತರ ನಿಜಸ್ಥಿತಿಯ ಮಾಹಿತಿ ಹೊರಬಿದ್ದಿದೆ. ಆದರೆ ಈ ಮೊಬೈಲ್ ಅನ್ನು ನೀಲಾಂಬಿಕೆ ಹಲವು ಬಾರಿ ಫ್ಲಾಶ್ (ಫ್ಯಾಕ್ಟರಿ ರಿಸೆಟ್) ಮಾಡಿಸಿದ್ದಾಳೆ. ಹೀಗಾಗಿ ಈ ಉಪಕರಣ ಬಳಸಿ ಏನೆಲ್ಲಾ ಮಾಡಲಾಗಿತ್ತು ಎಂಬ ಮಾಹಿತಿ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಸಂಗತಿ ಎನಿಸಿದೆ.

ಮೊಬೈಲ್​ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ ನಂತರ ಅದರಲ್ಲಿದ್ದ ಮೂರು ವಿಡಿಯೋಗಳನ್ನು ಕಣ್ಣೂರು ಶ್ರೀಗಳಿಗೆ ತೋರಿಸಿ ಮಹದೇವಯ್ಯನಿಗೆ ನೀಲಾಂಬಿಕೆಯೇ ಕಳುಹಿಸಿದ್ದಳು. ಆನಂತರ ಹಳೆಯ ಮೊಬೈಲ್ ಫ್ಲಾಶ್ ಮಾಡಿಸಿ, ಬೇರೊಂದು ಹೊಸ ಮೊಬೈಲ್ ಖರೀದಿಸಿದ್ದಳು. ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ನಂತರ ಹೊಸ ಮೊಬೈಲ್ ಅನ್ನೂ ಹಲವು ಬಾರಿ ಫ್ಲಾಶ್ ಮಾಡಿಸಿದ್ದಳು. ಪೊಲೀಸರ‌ ಕೈಗೆ ಸಿಕ್ಕಿಬಿದ್ದರೆ ಯಾವುದೇ ಮಾಹಿತಿ ಸಿಗಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಇದೀಗ ಮೃತ ಬಂಡೇಮಠ ಸ್ವಾಮೀಜಿ ಬಳಸುತ್ತಿದ್ದ ಎರಡು ಮೊಬೈಲ್​ಗಳ ಸ್ಕ್ರೀನ್​ಲಾಕ್ ಓಪನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಗಳ ಮೊಬೈಲ್​ನಲ್ಲಿ ಹಲವು ಸ್ಫೋಟಕ ಮಾಹಿತಿಗಳು ದೊರೆತಿವೆ. ನೀಲಾಂಬಿಕೆಯು ಕಾಲ್ ರೆಕಾರ್ಡ್ ಮಾಡಿರುವುದು ಗೊತ್ತಾದ ನಂತರ ಸ್ವಾಮೀಜಿ ಆಕೆಯ ನಂಬರ್ ಬ್ಲಾಕ್ ಮಾಡಿದ್ದರು. ಈ ಅಂಶವು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಬಂಡೇಮಠದ ಸ್ವಾಮೀಜಿ ಜೊತೆಗೆ ಎರಡು ವರ್ಷಗಳಿಂದ ನೀಲಾಂಬಿಕೆ ಸಂಪರ್ಕದಲ್ಲಿ ಇದ್ದಳು. ಏಪ್ರಿಲ್​ನಿಂದ ವಾಟ್ಸಾಪ್​ನ ವಿಡಿಯೊ ಕಾಲ್ ರೆಕಾರ್ಡ್ ಮಾಡಲು ಆಕೆ ಯತ್ನಿಸುತ್ತಿದ್ದಳು. ಈ ಬಗ್ಗೆ ಜೂನ್​ ತಿಂಗಳಲ್ಲಿ ಸ್ವಾಮೀಜಿಗೆ ವಿಷಯ ಗೊತ್ತಾಗಿತ್ತು. ಹನಿಟ್ರ್ಯಾಪ್ ವಿಷಯ ಅರಿವಾಗುತ್ತಿದ್ದಂತೆಯೇ ಸ್ವಾಮೀಜಿ ನೀಲಾಂಬಿಕೆಯಿಂದ ದೂರವಾಗಿದ್ದರು.

ನೀಲಾಂಬಿಕೆ ಹೆಣೆದಿದ್ದ ಮೋಹಕಬಲೆಗೆ ಹಲವು ಇತರ ಸ್ವಾಮೀಜಿಗಳೂ ಬಿದ್ದಿರುವ ಸಂಗತಿ ತನಿಖೆ ವೇಳೆ ಬಹಿರಂಗವಾಗಿದೆ. ಹಲವು ಸ್ವಾಮೀಜಿಗಳ ಜೊತೆ ನೀಲಾಂಬಿಕೆ ನಿರಂತರವಾಗಿ ವಿಡಯೊ ಕಾಲ್​ನಲ್ಲಿ ಮಾತನಾಡುತ್ತಿದ್ದಳು. ಹೀಗೆ ಮಾತನಾಡುವಾಗ ತನ್ನ ಮುಖ ಬಾರದಂತೆ ವಿಡಿಯೊ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಳು. ಇದಕ್ಕಾಗಿ ಆಕೆ ವಿಶೇಷ ಆ್ಯಪ್ ಬಳಸಿದ್ದಳು. ಹಲವು ಸ್ವಾಮೀಜಿಗಳು ನನಗೆ ಹತ್ತಿರದವರಾಗಿದ್ದಾರೆ ಎಂದು ನೀಲಾಂಬಿಕೆ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.