“ಪ್ರೇಮಂ ಪೂಜ್ಯಂ” ನವೀರಾದ ಪ್ರೇಮ ಕತೆಯ ಅದ್ಭುತ ಸಿನಿಮಾ.. ಮಿನ್ನೆ ರಾಜ್ಯಾದ್ಯಂದ ಪ್ರೇಮಂ ಸಿನಿಮಾ ರಿಲೀಸ್ ಆಗಿದೆ.. ಸಿನಿಮಾ ನೋಡಿದ ಪ್ರೇಕ್ಷಕ ಮಹಾಪ್ರಭುಗಳು ಪ್ರೇಮಂ ಪೂಜ್ಯಂ ಸಿನಿಮಾಗೆ ಪುಲ್ ಮಾರ್ಕ್ಸ್ ನೀಡಿದ್ದಾದರೆ.. ಅಷ್ಟೇ ಅಲ್ಲ ಸಿನಿಮಾ ನೋಡಿದ ಮಂದಿ ವಿಷ್ಣು ದಾದನ ನೆನಪಿಸಿ ಕೊಂಡಿದ್ದಾರೆ.. ಅಷ್ಟಕ್ಕೂ ಪ್ರೇಮಂ ಪೂಜ್ಯಂ ಚಿತ್ರಕ್ಕೂ ಸಾಹಸ ಸಿಂಹನಿಗೂ ಏನ್ ಲಿಂಕು.. ಸಿನಿಮಾ ನೋಡಿದ ಮೇಲೆ ಅಭಿಮಾನಿಗಳಿಗೆ ಸಾಹಸ ಸಿಂಹ ನೆನಪಾಗಿದ್ದು ಯಾಕೆ ಅನ್ನೋದ ಓದಿ..
ಪ್ರೇಮಂ ಪೂಜ್ಯಂ ನೆನಪಿರಲಿ ಪ್ರೇಮ್ ಅವರ ನೆನಪಲ್ಲಿ ಸದಾ ಉಳಿಯುವ ಸಿನಿಮಾ.ಪ್ರತಿ ಫ್ರೇಮ್ ನಲ್ಲೂ ಒಂದು ಕತೆ ಹೇಳಿರುವ ನಿರ್ದೇಶಕ ರಾಘವೇಂದ್ರ ಪ್ರೇಕ್ಷಕರಿಗೆ ಒಂದೋಳೆ ಸಿನಿಮಾ ಕೊಟ್ಟಿದ್ದಾರೆ..ಅಲ್ಲದೆ ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ಸಾಹಸ ಸಿಂಹವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ “ಬಂಧನ”ಚಿತ್ರ ನೆನಪಾಗುವಂತೆ ಮಾಡಿದ್ದಾರೆ.ಜೊತೆ ಬಂಧನದಲ್ಲಿ ತ್ಯಾಗಿ ವೈದ್ಯ ಡಾ.ಹರೀಶ್ ಪಾತ್ರದ ಸಾಹಸ ಸಿಂಹ ಅಭಿಮಾನಿಗಳ ಕಣ್ ಮುಂದೆ ಬಂದು ಹೋಗಿದ್ದಾರೆ.
🙏🙏🙏 pic.twitter.com/RpvEGcU2yJ
— Prem Nenapirali (@StylishstarPrem) November 11, 2021
ಬಂಧನ ಚಿತ್ರದಲ್ಲಿ ವಿಷ್ಣು ದಾದ ವೈದ್ಯನ ಪಾತ್ರದಲ್ಲಿ ಮಿಂಚಿದ್ರು .ಅದ ತರ ಪ್ರೇಮಂ ಪೂಜ್ಯಂ ಸಿನಿಮಾದಲ್ಲೂ ಪ್ರೇಮ್ ವೈದ್ಯನಾಗಿ ಅದ್ಬುತ ವಾಗಿ ನಟಿಸಿದ್ದಾರೆ..ಇದಲ್ಲದೆ ಪ್ರೇಮಂ ಪೂಜ್ಯಂ ಚಿತ್ರದ ಕ್ಲೈ ಮ್ಯಾಕ್ಸ್ ಬಂಧನ ಚಿತ್ರದ ಕ್ಲೈಮಾಕ್ಸ್ ನೆನಪಿಸುತ್ತೆ.. ಬಂಧನ ಚಿತ್ರದಲ್ಲಿ ವಿಷ್ಣು ದಾದ ತಾನು ಪ್ರೀತಿಸಿದ ಹೃದಯದ ಕರುಳ ಬಳ್ಳಿಯ ಉಸಿರಿಗಾಗಿ ಉಸಿರು ಚೆಲ್ತಾರೆ. ಅದೇ ರೀತಿ ಪ್ರೇಮಂ ಪೂಜ್ಯಂ ಕ್ಲೈಮ್ಯಾಕ್ಸ್ ನಲ್ಲೂ ಪ್ರೇಮ್ ತಾನು ಪ್ರೀತಿಸಿದ ಹುಡುಗಿ ಹಾಗೂ ಅವಳ ಮಗುವಿಗಾಗಿ ತನ್ನ ಪ್ರಾಣ ಅರ್ಪಿಸ್ತಾರೆ.
ತಾನು ಪ್ರಿತಿಸಿದ ಹುಡುಗಿ ತನಗೆ ಸಿಗದೆ ಹೋದ್ರು. ಅವಳಿಗಾಗಿ ಅವಳ ಮಗುವಿಗಾಗಿ ತನ್ನ ಜೀವ ಕೊಡುವ ತ್ಯಾಗಿ ವೈದ್ಯನ ಪಾತ್ರವನ್ನ ಪ್ರೇಮ್ ಚೆನ್ನಾಗಿ ನಿಭಾಯಿಸಿದ್ದಾರೆ.ಅಲ್ಲದೆ ಡಾ.ಶ್ರೀಹರಿ ಪಾತ್ರದ ಮೂಲಕ ಚಿತ್ರಪ್ರೇಮಿಗಳ ಹೃದಯಕ್ಕೆ ತುಂಭಾ ಹತ್ತಿರವಾಗ್ತಾರೆ..ಇದೆಲ್ಲವನ್ನು ನಿರ್ದೇಶಕ ರಾಘವೇಂದ್ರ ಅಚ್ಚುಕಟ್ಟಾಗಿ ತೆರೆಮೇಲೆ ಕಟ್ಟಿ ಕೊಟ್ಟಿದ್ದಾರೆ.. ಅಷ್ಟೇ ಅಲ್ಲ ಚಿತ್ರದ ರೀ ರೆಕಾರ್ಡಿಂಗ್ ಸಿನಿಮಾ ನೋಡುವವರು ಮೈ ಮರೆಯುವಂತೆ ಮಾಡುತ್ತೆ.
ಅದೇನೆ ಇರಲಿ ಪ್ರೇಮಂ ಪೂಜ್ಯಂ ಸಿನಿಮಾ ನೋಡಿದ ಮಂದಿ, ತುಂಭಾ ದಿನಗಳ ನಂತ್ರ ಒದೊಳ್ಳೆ ಪ್ರೇಮ ದೃಶ್ಯ ಕಾವ್ಯವ ನೋಡಿದ ಸಂತಸದಲ್ಲಿದ್ದಾರೆ. ವೈದ್ಯರಾಗಿ ರೋಗಿಗಳ ನಾಡಿ ಬಡಿತ ಚೆಕ್ ಮಾಡ್ತಿದ್ದ ನಿರ್ದೇಶಕ ರಾಘವೇಂದ್ರ ಮೊದಲ ನಿರ್ದೇಶನದಲ್ಲೇ ಪ್ರೇಕ್ಷಕರ ನಾಡಿ ಮೊಡಿತಕ್ಕೆ ತಕ್ಕಂತೆ ಸಿನಿಮಾ ಮಾಡಿ ಗೆದ್ದಿದ್ದಾರೆ.