ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಕಸ್ಟಡಿಯಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್​ಗೆ ರೈಲ್ವೇ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸುಶಿಲ್ ಕುಮಾರ್​ಗೆ ಉತ್ತರ ರೈಲ್ವೇ ವಿಭಾಗದಲ್ಲಿ ನೀಡಲಾಗಿದ್ದ ಸರ್ಕಾರಿ ಹುದ್ದೆಯಿಂದ ಸುಶೀಲ್ ಕುಮಾರ್ ಅವರನ್ನ ಅಮಾನತು ಮಾಡಿದೆ. ಮುಂದಿನ ಆದೇಶದವರೆಗೂ ಈ ಹುದ್ದೆಯನ್ನ ಅಮಾನತಿನಲ್ಲಿ ಇಡಲಾಗಿದೆ.

2015 ರಿಂದ ಸುಶೀಲ್ ಕುಮಾರ್ ಉತ್ತರ ರೈಲ್ವೆ ಇಲಾಖೆಯ ಸೀನಿಯರ್ ಕಮರ್ಷಿಯಲ್ ಮ್ಯಾನೇಜರ್​​ ಆಗಿದ್ದರು. ಅಲ್ಲದೇ ಶಾಲಾ ಮಟ್ಟದ ಕ್ರೀಡೆಗಳ ಅಭಿವೃದ್ಧಿಯ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ನೇಮಕಗೊಂಡರು.

ಸದ್ಯ ಸುಶೀಲ್ ಕುಮಾರ್ ಅವರನ್ನ 23 ವರ್ಷದ ಜ್ಯೂನಿಯರ್ ಕುಸ್ತಿಪಟು ಒಬ್ಬರ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ನೌಕರನ ಮೇಲೆ ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ತನಿಖೆ ಮುಗಿಯುವವರೆಗೂ ಸುಶೀಲ್ ಕುಮಾರ್ ಅವರನ್ನ ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಕೊಲೆ ಕೇಸ್​: ತಲೆಮರೆಸಿಕೊಂಡಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅರೆಸ್ಟ್

ಇದನ್ನೂ ಓದಿ: ಕೊಲೆ ಕೇಸ್: 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕುಸ್ತಿಪಟು ಸುಶೀಲ್ ಕುಮಾರ್

The post ಬಂಧಿತ ಕುಸ್ತಿಪಟು ಸುಶೀಲ್ ಕುಮಾರ್​ಗೆ ಶಾಕ್​ ಕೊಟ್ಟ ರೈಲ್ವೇ ಇಲಾಖೆ appeared first on News First Kannada.

Source: newsfirstlive.com

Source link