ಬೆಂಗಳೂರು: ಜನರಿಂದ ಹಣ ಪಡೆದು ಅಕ್ರಮವಾಗಿ ಕೊರೊನಾ ಲಸಿಕೆ ಹಾಕುತ್ತಿದ್ದ ವೈದ್ಯೆ ಪುಷ್ಪಿತಾ ಹಾಗೂ ಆಕೆಯ ಸ್ನೇಹಿತೆ ಪ್ರೇಮಾ ಎಂಬಾಕೆಯನ್ನ ಪೊಲೀಸರು ನಿನ್ನೆ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ವೈದ್ಯೆಯಿಂದ ಲಸಿಕೆ ಪಡೆದವರಿಗೆ ಈಗ ಶಾಕಿಂಗ್ ಸುದ್ದಿ ಎದುರಾಗಿದೆ.

ಐಟಿಐ ಲೇಔಟ್​​ನಲ್ಲಿ ಖಾಸಗಿಯಾಗಿ ಕೋವಿಶೀಲ್ಡ್ ವ್ಯಾಕ್ಸಿನೇಷನ್ ನಡೆಯುತ್ತಿರುವ ಬಗ್ಗೆ ಇನ್ಸ್​​ಪೆಕ್ಟರ್ ಲೋಹಿತ್​​ಗೆ ಮಾಹಿತಿ ಸಿಕ್ಕಿತ್ತು. ಅವರು ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನ ಪೊಲೀಸರು ವಿಚಾರಣೆಗೊಳಪಡಿಸಿದಾಗ, 53 ಜನಕ್ಕೆ ವ್ಯಾಕ್ಸಿನ್ ನೀಡಿರುವುದು ಅಧಿಕೃತವಾಗಿ ಬೆಳಕಿಗೆ ಬಂದಿದೆ. ತಲಾ 500 ರೂಪಾಯಿಗೆ ವ್ಯಾಕ್ಸಿನ್ ನೀಡಲಾಗಿದೆ. ವೈದ್ಯೆ ಪುಷ್ಪಿತಾಳ ಬಳಿ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಅವರೆಲ್ಲಾ ವ್ಯಾಕ್ಸಿನ್ ಹಾಕಿಸಿಕೊಂಡ್ರು ಪ್ರಯೋಜನವಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಕ್ರಮವಾಗಿ ವ್ಯಾಕ್ಸಿನ್ ಮಾರಾಟ: ವೈದ್ಯೆ-ಶಿಷ್ಯೆ ವಿರುದ್ಧ FIR ದಾಖಲು 

ಕಾಟಾಚಾರಕ್ಕೆ ವ್ಯಾಕ್ಸಿನ್ ಹಾಕಿರುವ ಪುಪ್ಪಿತಾ, ನೋ ಯೂಸ್​
ಹೌದು. ಬಂಧಿತ ವೈದ್ಯೆ ಪುಷ್ಪಿತಾ, ಕೋವಿಶೀಲ್ಡ್​ ಲಸಿಕೆಯ ವಯಲ್​ನಿಂದ ಇಂಜಕ್ಷನ್ ಡ್ರಾ ಮಾಡಿ ಗಂಟೆಗಳು ಕಳೆದ ಬಳಿಕ ವ್ಯಾಕ್ಸಿನ್ ನೀಡುತ್ತಿದ್ದಳು ಎನ್ನಲಾಗಿದೆ. ಈ ರೀತಿ ವ್ಯಾಕ್ಸಿನೇಷನ್ ಮಾಡಿದ್ರೆ ಪ್ರಯೋಜನವಿಲ್ಲ. ಅದು ಯಾವುದೇ ರೀತಿಯ ಪರಿಣಾಮವೂ ಬೀರುವುದಿಲ್ಲ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ಹೇಳಿದ್ದಾರೆ. ಹೀಗಾಗಿ ವ್ಯಾಕ್ಸಿನ್ ಹಾಕಿಸಿಕೊಂಡು ಸೇಫ್​ ಆದ್ವಿ ಅಂದುಕೊಂಡವರಿಗೆ ಅತ್ತ ಹಣವೂ ಇಲ್ಲ ಇತ್ತ ಲಸಿಕೆಯ ಪ್ರಯೋಜನವೂ ಸಿಗದಂತಾಗಿದೆ.

The post ಬಂಧಿತ ವೈದ್ಯೆಯಿಂದ ಕೊರೊನಾ ಲಸಿಕೆ ಪಡೆದವ್ರಿಗೆ ಬಿಗ್ ಶಾಕ್ appeared first on News First Kannada.

Source: newsfirstlive.com

Source link