ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್​​ ಆರ್ಭಟ ಇನ್ನೂ ನಿಲ್ಲದ ಪರಿಣಾಮ ಈಗಲೂ ಪ್ರತಿನಿತ್ಯ ಸಾವಿರಾರು ಪಾಸಿಟಿವ್​​ ಕೇಸುಗಳು ಕಾಣಿಸಿಕೊಳ್ಳುತ್ತಿವೆ. ಹೀಗಿರುವಾಗಲೇ ಜುಲೈ 21ನೇ ತಾರೀಕಿನಂದು ನಡೆಯಲಿರುವ ಬಕ್ರೀದ್​​ ಹಬ್ಬದ ಪ್ರಯುಕ್ತ ಎಲ್ಲಾ ಮುಸ್ಲಿಂ ಸಹೋದರರು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರದ ಬಳಿ ಅನುಮತಿ ಕೇಳಲು ಪ್ರಾರಂಭಿಸಿದ್ದಾರೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಬಕ್ರೀದ್​​​​ ಹಬ್ಬದ ಆಚರಣೆಗಾಗಿ ಕೋವಿಡ್​​-19 ಮಾರ್ಗಸೂಚಿ ಹೊರಡಿಸಿದೆ.

ಕೋವಿಡ್​​-19 ಈಗಷ್ಟೇ ಸುಧಾರಿಸಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಸಾಮೂಹಿಕ ಪ್ರಾರ್ಥನೆ ಬೇಡ. ಬದಲಿಗೆ ಮಸೀದಿಗಳಲ್ಲೇ ಕೋವಿಡ್​​​-19 ಮಾರ್ಗಸೂಚಿ ಅನ್ವಯ ಷರತ್ತುಗಳೊಂದಿಗೆ ಸಾಮೂಹಿಕ ಪ್ರಾರ್ಥನೆ ಮಾಡಿ ಎಂದು ಸರ್ಕಾರ ಆದೇಶಿಸಿದೆ.

ಇನ್ನು, ಮುಂದಿನ ದಿನಗಳಲ್ಲಿ ಎದುರಾಗಲಿರುವ ಕೋವಿಡ್​​-19 ಮೂರನೇ ಅಲೆ ತಡೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಬಕ್ರೀದ್ ಹಬ್ಬ ಆಚರಿಸುವಾಗ ಮಸೀದಿಗಳಲ್ಲಿ 50 ಜನರೊಂದಿಗೆ ಮಾತ್ರ ಸಾಮೂಹಿಕ ಪ್ರಾರ್ಥನೆ ಮಾಡಬೇಕು ಎಂದು ವಕ್ಫ್ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು 1,806 ಮಂದಿಗೆ ಕೊರೊನಾ ಪಾಸಿಟಿವ್.. 2,748 ಡಿಸ್ಚಾರ್ಜ್

ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ. 65 ವರ್ಷಗಳ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಪ್ರಾರ್ಥಿಸಬೇಕು. ಹಸ್ತಲಾಘವ ಹಾಗೂ ಆಲಿಂಗನಕ್ಕೆ ನಿರ್ಬಂಧ ಹಾಕಿ, ಪ್ರಾಣಿ ವಧೆ ಹಾಗೂ ಬಲಿದಾನದ ಪ್ರಕ್ರಿಯೆಗೆ ನಿಷೇಧ ಹೇರಲಾಗಿದೆ.

The post ಬಕ್ರೀದ್​​​ ಹಬ್ಬಕ್ಕೆ ಕೋವಿಡ್​​-19 ಮಾರ್ಗಸೂಚಿ; ಮಸೀದಿಗಳಲ್ಲಿ ಕೇವಲ 50 ಮಂದಿಗಷ್ಟೇ ಪ್ರಾರ್ಥನೆಗೆ ಅವಕಾಶ appeared first on News First Kannada.

Source: newsfirstlive.com

Source link