ಬಕ್ರೀದ್​​ ಸಂಭ್ರಮ: ಪಾಕ್ ಸೈನಿಕರ ಜೊತೆ ಸಿಹಿ ಹಂಚಿಕೊಂಡ ಭಾರತೀಯ ಯೋಧರು

ಬಕ್ರೀದ್​​ ಸಂಭ್ರಮ: ಪಾಕ್ ಸೈನಿಕರ ಜೊತೆ ಸಿಹಿ ಹಂಚಿಕೊಂಡ ಭಾರತೀಯ ಯೋಧರು

ನವದೆಹಲಿ: ಇಂದು ಜಗತ್ತಿನಾದ್ಯಂತ ಮುಸ್ಲೀಂ ಸಮುದಾಯ ಬಕ್ರೀದ್‌ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಸಹೋದರತೆ, ತ್ಯಾಗ, ಸಮರ್ಪಣಾ ಮನೋಭಾವ, ಬದ್ಧತೆಯ ಗುಣಗಳನ್ನು ಈ ಹಬ್ಬ ನೆನಪಿಸುತ್ತದೆ. ಇಂತಹ ಬಕ್ರೀದ್​​ ಹಬ್ಬದ ಪ್ರಯುಕ್ತ ಭಾರತೀಯ ಸೇನೆ ಮತ್ತು ಪಾಕಿಸ್ತಾನ ಸೇನೆ ಪರಸ್ಪರ ಸಿಹಿತಿಂಡಿಗಳನ್ನು ಹಂಚಿಕೊಂಡಿದೆ.

ಬಿಎಸ್ಎಫ್ ಸಿಬ್ಬಂದಿ ಮತ್ತು ಪಾಕಿಸ್ತಾನ ರೇಂಜರ್ಸ್ ಸಿಬ್ಬಂದಿ ಜಮ್ಮು-ಕಾಶ್ಮೀರದ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಸ್ವೀಟ್​​ ಹಂಚಿಕೊಂಡು ಸೌಹಾರ್ದತೆ ಮೆರೆದಿದ್ದಾರೆ.

ಸದ್ಯ ಭಾರತ ಮತ್ತು ಪಾಕ್​​ ಯೋಧರು ಹೀಗೆ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ. ಇದು ಎರಡು ದೇಶಗಳ ನಡುವಿನ ಸ್ನೇಹ ಮತ್ತು ಸೌಹಾರ್ದತೆಯನ್ನು ತೋರಿಸುತ್ತದೆ ಎಂದು ನೆಟ್ಟಿಗರು ಟ್ವೀಟ್​ ಮಾಡಿದ್ದಾರೆ.

The post ಬಕ್ರೀದ್​​ ಸಂಭ್ರಮ: ಪಾಕ್ ಸೈನಿಕರ ಜೊತೆ ಸಿಹಿ ಹಂಚಿಕೊಂಡ ಭಾರತೀಯ ಯೋಧರು appeared first on News First Kannada.

Source: newsfirstlive.com

Source link