ಯಾದಗಿರಿ: ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನ ಬರ್ಬರ ಹತ್ಯೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬೆಳಗ್ಗಿನ ಜಾವ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಕಾಸಿಂಸಾಬ್ ಚೌದ್ರಿ (50) ಎಂದು ಗುರುತಿಸಲಾಗಿದೆ. ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಕಾಸಿಂಸಾಬ್ ಬೆಳಗ್ಗಿನ ಜಾವ ಪ್ರಾರ್ಥನೆಗೆ ತೆರಳುತ್ತಿದ್ದರು. ಈ ವೇಳೆ ಕಾಸಿಂ ಸಾಬ್ ಮೇಲೆ ದಾಳಿ ನಡೆಸಿದ ಪರಿಚಿತರು, ಬರ್ಬರವಾಗಿ ಕೊಂದು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ನಿರಾಣಿ ಬೆನ್ನಲ್ಲೇ ಅರವಿಂದ ಬೆಲ್ಲದ್ ವಾರಾಣಸಿ ಭೇಟಿ

ಸ್ಥಳಕ್ಕೆ ಡಿವೈಎಸ್ ಪಿ ವೆಂಕಟೇಶ್ ಉಗಿಬಂಡಿ ಸಿಪಿಐ ಶ್ರೀನಿವಾಸ್ ಅಲ್ಲಾಪುರ ಹಾಗೂ ಪಿಎಸ್‍ಐ ಸೋಮು ಒಡೆಯರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಬಕ್ರೀದ್ ಹಬ್ಬದ ದಿನವೇ ಕೊಲೆ – ಪ್ರಾರ್ಥನೆಗೆ ತೆರಳ್ತಿದ್ದ ವ್ಯಕ್ತಿಯ ಹತ್ಯೆ appeared first on Public TV.

Source: publictv.in

Source link