ಬಕ್ರೀದ್ ಹಬ್ಬ- ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

ಮೈಸೂರು: ಇಂದು ನಾಡಿನಾದ್ಯಂತ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದ್ದು, ಇತ್ತ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಹೌದು. ಬಕ್ರೀದ್ ಪ್ರಯುಕ್ತ ಇಂದು ರಜೆ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭಾವಿಪತಿಯ ಸುಳಿವು ಕೊಟ್ಟ ವೈಷ್ಣವಿ

ರಜೆ ದಿನವಾದ್ದ ಹಾಗೂ ಆಷಾಢ ಮಾಸವಾಗಿರುವುದರಿಂದ ಬೆಟ್ಟಕ್ಕೆ ಹೆಚ್ಚು ಜನ ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಢಳಿತ ನಿಷೇಧ ಹೇರಿದೆ. ಆಷಾಡ ಮಾಸದ ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಜಿಲ್ಲಾಡಳಿತ ಈಗಾಗಲೇ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

The post ಬಕ್ರೀದ್ ಹಬ್ಬ- ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ appeared first on Public TV.

Source: publictv.in

Source link