ಬೆಂಗಳೂರು: ಇತ್ತೀಚೆಗೆ ಬೆಳಕಿಗೆ ಬಂದ ಭಾರೀ ಸಿಮ್ ಕಿಟ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲಿಟರಿ ಇಂಟಲಿಜೆನ್ಸ್ ರಹಸ್ಯ ತನಿಖೆ ನಡೆಸಿದ್ದು ರೋಪಿಗಳ ಪ್ಲ್ಯಾನಿಂಗ್​ ಸೇರಿದಂತೆ ತನಿಖೆಯ ಸಂಪೂರ್ಣ ಮಾಹಿತಿಯನ್ನ ಪೊಲೀಸರಿಗೆ ರವಾನೆ ಮಾಡಿದೆ ಎನ್ನಲಾಗಿದೆ.

ಎ1 ಇಬ್ರಾಹಿಂ 10 ನೇ ಕ್ಲಾಸ್ ಓದಿದ್ರೆ.. ಎ2 ಗೌತಮ್ ಎಂಬಿಎ ಪಾಸ್ ಮಾಡಿದ್ದಾನೆ. ಹೆಚ್ಚಿನ ಹಣಕ್ಕೆ ಆಸೆ ಬಿದ್ದು ಗೌತಮ್ ಈ ಕೃತ್ಯಕ್ಕೆ ಇಳಿದಿದ್ದ ಎನ್ನಲಾಗಿದೆ. ಎ1 ಆರೋಪಿಯ ದಿನದ ಆದಾಯವೇ 15 ಲಕ್ಷ ಎನ್ನಲಾಗಿದೆ.

ಆರೋಪಿಗಳು ಅನಧಿಕೃತ ಟೆಲಿಫೋನ್ ಎಕ್ಸ್ ಚೇಂಜ್ ಮೂಲಕ ಕರೆಗಳನ್ನ ಕನ್ವರ್ಟ್ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು.. ಮೊದಲು ಕೇರಳದಲ್ಲಿ ಇಬ್ರಾಹಂ ಒಂದು ಸಣ್ಣ ಅಂಗಡಿ ಇಟ್ಟುಕೊಂಡಿದ್ದ. ಅಲ್ಲಿಂದ ಹಲವರನ್ನ ಪರಿಚಯ ಮಾಡಿಕೊಂಡಿದ್ದಾರೆ. ಅವರಿಗೆ ಸಿಮ್‌ಕಿಟ್ ದಂಧೆ ಬಗ್ಗೆ ವಿವರಿಸಿ ಇನ್ವೆಸ್ಟ್ ಮಾಡಲು ತಿಳಿಸಿದ್ದಾನಂತೆ. ಅದರಂತೆ ದುಬೈನಲ್ಲೂ ಇದೇ ರೀತಿಯ ದಂಧೆಯ ಬಗ್ಗೆ ಮಾಹಿತಿ ಪಡೆದು ಅವರ ಜೊತೆ ಸೇರಿ ಇಬ್ರಾಹಿಂ ಸಿಮ್ ಕಿಟ್ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ದೇಶದ ಭದ್ರತೆಗೆ ಗಂಡಾಂತರ: ₹10ರ ISD ಕಾಲ್ 10 ಪೈಸೆಗೆ ಕನ್ವರ್ಟ್ ಮಾಡ್ತಿದ್ದ ಮಹಾಜಾಲ ಬಯಲು

ಅಷ್ಟೇ ಅಲ್ಲದೇ ಯಾರಿಗೂ ಅನುಮಾನ ಬಾರದಂತೆ ಅಪಾರ್ಟ್ ಮೆಂಟ್​ಗಳಲ್ಲಿನ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಮಾತ್ರ ರೂಂ ಹುಡುಕುತ್ತಿದ್ದ ಆರೋಪಿಗಳು ಅಪಾರ್ಟ್​ಮೆಂಟ್​ನ ಮಾಲೀಕ ಹತ್ತಿರದಲ್ಲಿ ವಾಸವಿರದ, ಸೆಕ್ಯೂರಿಟಿ ಇರದ ಅಪಾರ್ಟ್​​ಮೆಂಟ್​ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರಂತೆ.

ಇದನ್ನೂ ಓದಿ: ₹10ರ ISD ಕಾಲ್ 10 ಪೈಸೆಗೆ ಕನ್ವರ್ಟ್ ಮಾಡ್ತಿದ್ದ ಕೇಸ್ -ತನಿಖೆಗೆ NIA ಎಂಟ್ರಿ

ಇನ್ನು ಆ್ಯಕ್ಟಿವೇಟ್ ಆಗಿರುವ ಡಿಆ್ಯಕ್ಟಿವೇಟ್ ಸಿಮ್ ಮಾನಿಟರ್ ಮಾಡೋನಿಗೆ 90 ಸಾವಿರ ಸಂಬಳ ನೀಡಲಾಗ್ತಿತ್ತಂತೆ. ಆರೋಪಿಗಳು ಪ್ರತಿ 15 ದಿನಕ್ಕೊಮ್ಮೆ ಡಿಆ್ಯಕ್ಟಿವೇಟ್ ಸಿಮ್ ನ ಚೇಂಜ್ ಮಾಡುವುದು.. ಒಂದು ಬಾರಿಗೆ 90-92 ಸಿಮ್ ಆ್ಯಕ್ಟಿವೇಟ್ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಮಾಹಿತಿಯನ್ನ ಮಿಲಿಟರಿ ಇಂಟಲಿಜೆನ್ಸ್ ಸಿಸಿಬಿಗೆ ನೀಡಿದೆಯಂತೆ. ಈ ಕುರಿತು ಇಂಟಲಿಜೆನ್ಸ್​ ಮೂಲಗಳು ನ್ಯೂಸ್​​ಫಸ್ಟ್​ಗೆ ಮಾಹಿತಿ ನೀಡಿವೆ.

The post ಬಗೆದಷ್ಟೂ ಆಳ ಸಿಮ್​ ಕಿಟ್​ ದಂಧೆಯ ಜಾಲ: ದಿನವೊಂದಕ್ಕೆ 15 ಲಕ್ಷ ಸಂಪಾದಿಸ್ತಿದ್ದ ಆರೋಪಿ appeared first on News First Kannada.

Source: newsfirstlive.com

Source link