ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜದ ಬದಲಿಗೆ ಕೇಸರಿ ಬಾವುಟ ಹಾರಿಸುತ್ತೇವೆ ಎಂದಿದ್ದ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಪರಿಷತ್ನಲ್ಲಿ ಕಾಂಗ್ರೆಸ್ ಧರಣಿ ಮುಂದುವರಿಸಿದೆ. ಈ ಸಂಬಂಧ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಚ್ಚಲು ಬಾಯಿ ಈಶ್ವರಪ್ಪ, ಅವನದ್ದು ರಾಜೀನಾಮೆ ನಮಗೆ ಬೇಕಾಗಿಲ್ಲ ಎಂದಿದ್ದಾರೆ.
ರಾಜೀನಾಮೆ ಪದಕ್ಕೆ ಒಂದು ಗೌರವ ಇದೆ. ಗವರ್ನರ್ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪನನ್ನು ಡಿಸ್ಮಿಸ್ ಮಾಡಬೇಕು. ರಾಜೀನಾಮೆ ಅಂದ್ರೆ ಲಾಲ್ ಬಹದ್ದೂರ್ ಶಾಸ್ತ್ರಿ ದೇಶಕ್ಕಾಗಿ ನೀಡಿದ್ದು ರಾಜೀನಾಮೆ. ಇವನು ನೀಡೋ ರಾಜೀನಾಮೆ ನಮಗೆ ಬೇಕಾಗಿಲ್ಲ ಎಂದು ಡಿ.ಕೆ ಶಿವಕುಮಾರ್ ಏಕವಚನದಲ್ಲೇ ದಾಳಿ ನಡೆಸಿದರು.
ಅವನನ್ನು ಇಡೀ ಬಿಜೆಪಿ ದೊಡ್ಡ ಆಸ್ತಿ ಅಂತಾ ನೋಡ್ತಿದೆ. ಮೊದಲು ಸ್ಯಾಕ್ ಮಾಡಿ, ಇಲ್ಲ ನಮ್ಮ ಹೋರಾಟ ಮುಂದುವರಿಸ್ತೀವಿ ಎಂದು ಎಚ್ಚರಿಕೆ ನೀಡಿದರು.
The post ‘ಬಚ್ಚಲು ಬಾಯಿ KS ಈಶ್ವರಪ್ಪ, ಅವನನ್ನು ಡಿಸ್ಮಿಸ್ ಮಾಡಿ’.. ಏಕವಚನದಲ್ಲೇ DKS ವಾಗ್ದಾಳಿ appeared first on News First Kannada.