ಬಚ್ಚೇಗೌಡ ಬರಲಿ, ಎಷ್ಟು ಕೊಲೆ ಮಾಡಿದ್ದಾರೆ ಅಂತಾ ದಾಖಲೆ ಸಮೇತ ಬರ್ತೀನಿ-MTB ಸವಾಲ್​​


ಬೆಂಗಳೂರು: ಹೊಸಕೋಟೆ ಶಾಸಕ ಶರತ್​ ಬಚ್ಚೇಗೌಡ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್​ ಅವರ ನಡುವೆ, ಇಂದು ನಡೆದ ವಾಕ್​ ಸಮರ ಬಗ್ಗೆ ಸಚಿವ ಎಂಟಿಬಿ ನಾಗರಾಜ್​ ನ್ಯೂಸ್​​ಫಸ್ಟ್​​ಗೆ ಪ್ರತಿಕ್ರಿಯೆ ನೀಡಿದ್ದು, ಬಚ್ಚೇಗೌಡ ಕುಟುಂಬದ ಬಗ್ಗೆ ಕಿಡಿಕಾರಿದ್ದಾರೆ.

ಬಡವರಿಗೆ, ಹರಿಜನರಿಗೆ ಸರ್ಕಾರ ಕೊಟ್ಟಿದ್ದ ಭೂಮಿಯನ್ನು ಗೂಂಡಾಗಿರಿ ಮಾಡಿ ಆ ಕಾಲದಿಂದಲೂ ಭೂ ಕಬಳಿಕೆ ಮಾಡಿದ್ದಾರೆ. ಇದುವರೆಗೂ ಅವರಿಗೆ ಏನು​​ ಕೊಟ್ಟಿಲ್ಲ. ಈಗ ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಆದರೆ ಇದಕ್ಕೆ ಕೋರ್ಟ್​ನಿಂದ ತಡೆ ತಂದಿದ್ದಾರೆ. ಗೂಂಡಾಗಿರಿ ಮಾಡಿರೋದು ಇವ್ರು, ಆ ಕಾಲದಿಂದಲೂ ಇದನ್ನೇ ಮಾಡಿದ್ದಾರೆ ಎಂದು ಎಂಟಿಬಿ ಗರಂ ಆಗಿದ್ದಾರೆ.

News First Live Kannada


Leave a Reply

Your email address will not be published.