ಮಂಗಳೂರು: ಬಜಾಲ್, ಜಲ್ಲಿಗುಡ್ಡೆ ಪ್ರದೇಶದಲ್ಲಿ ಕೊರೊನಾ ಪೀಡಿತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ಸುಮಾರು 50 ಕುಟುಂಬಗಳಿಗೆ ದಿನಸಿ ಅಕ್ಕಿ ಕಿಟ್ ವಿತರಿಸಲಾಯಿತು. ಮಾಜಿ ಶಾಸಕ ಐವನ್‌ ಡಿಸೋಜ ಅವರ ನೇತೃತ್ವದಲ್ಲಿ ಈ ಹಂಚಿಕೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿಸೋಜ ಅವರು, ಕೊರೊನಾ ತಡೆಗಟ್ಟಲು ಪ್ರತಿಯೊಬ್ಬರೂ ತನ್ನದೇ ಅದ ಕೊಡುಗೆಯನ್ನು ನೀಡಬೇಕು. ಅಂತರವನ್ನು ಕಾಪಾಡಬೇಕು. ಸರ್ಕಾರ ಕೊಟ್ಟಿರುವ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಅದನ್ನು ಪಡೆಯುವ ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಮಂಗಳೂರಿನ ಕುಪ್ಪೆಪದವಿನಲ್ಲಿ ಗುಡ್ಡ ಕುಸಿತ- ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

ಅಸಂಘಟಿತ ಕಾರ್ಮಿಕರಿಗೆ ಕೊರೊನಾ ಲಸಿಕೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ದೃಷ್ಟಿಯಲ್ಲಿ ಆರೋಗ್ಯ ಇಲಾಖೆಯನ್ನು ಈಗಾಗಲೇ ಒತ್ತಾಯಿಸಲಾಗಿದೆ ಎಂದರು. ‌

ಕಾರ್ಯಕ್ರಮದಲ್ಲಿ ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಎ ಸಿ.ಜಯರಾಜ್, ಜ್ಯೋತಿ ಪಡೀಲ್, ದೀಕ್ಷಿತ್ ಅತ್ತಾವರ, ಮೀನಾ ತೆಲ್ಲಿಸ್, ಅಭಿಬಲ್ಲ ಕಣ್ಣೂರು, ಭಾಜಿಲ್, ಸ್ಥಳೀಯ ವಾರ್ಡ್ ಅಧ್ಯಕ್ಷ ಆನಂದ ಬಜಾಲ್, ಮೇಜಿ ಡಿ ಸೋಜ ಮುಂತಾದವರು ಉಪಸ್ಥಿತರಿದ್ದರು.

The post ಬಜಾಲ್, ಜಲ್ಲಿಗುಡ್ಡೆಯಲ್ಲಿ ಐವನ್ ಡಿಸೋಜ ನೇತೃತ್ವದಲ್ಲಿ ದಿನಸಿ, ಅಕ್ಕಿ ಕಿಟ್ ವಿತರಣೆ appeared first on Public TV.

Source: publictv.in

Source link