ಬೇಕಾಗುವ ಪದಾರ್ಥಗಳು…

  • ಬೆಣ್ಣೆ- 1 ಚಮಚ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಹಸಿಮೆಣಸಿನ ಕಾಯಿ- ಉದ್ದಕ್ಕೆ ಹೆಚ್ಚಿದ್ದು 2 
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು, 1 ಚಮಚ
  • ಆಲೂಗಡ್ಡೆ- ಸಣ್ಣಗೆ ಹೆಚ್ಚಿ ಬೇಯಿಸಿದ್ದು ಸ್ವಲ್ಪ
  • ಬಟಾಣಿ- ಒಂದು ಬಟ್ಟಲು

ಮಾಡುವ ವಿಧಾನ…

  • ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಕಾಯಿಸಿಕೊಳ್ಳಬೇಕು. ನಂತರ ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಈರುಳ್ಳಿ ಹಾಗೂ ಆಲೂಗಡ್ಡೆ, ಬಟಾಣಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ನಂತರ 2 ಬಟ್ಟಲು ನೀರಿ 2 ಕೂಗು ಕುಗಿಸಿಕೊಳ್ಳಬೇಕು. ನಂತರ ಬೀಟರ್ ನಿಂದ ನುಣ್ಣಗೆ ಮಾಡಿಕೊಂಡು ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಮತ್ತೆ ಒಲೆಯ ಮೇಲಿಟ್ಟು ಕುದಿಸಿಕೊಂಡು ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ, ಫ್ರೆಷ್ ಕ್ರೀಮ್ ನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಬಟಾಣಿ ಸೂಪ್ ಸವಿಯಲು ಸಿದ್ಧ. 

Kannadaprabha – ಆಹಾರ-ವಿಹಾರ – https://www.kannadaprabha.com/food/
Read More