ಉಡುಪಿ: ಲಾಕ್ಡೌನ್‌ನಿಂದ ಕೂಲಿ ಮಾಡಿ ಜೀವನ ಸಾಗಿಸುವವರ ಬದುಕು ದುಸ್ತರವಾಗಿದೆ. ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೆಲ್ಸ ಇಲ್ಲದೇ ಯಾರಾದರೂ ಆಹಾರ ಕಿಟ್ ನಿಡ್ತಾರೆ ಅಂತ ನೋಡುವ ಪರಿಸ್ಥಿತಿ ಹಲವರದ್ದು. ಆದ್ರೆ ಉಡುಪಿ ಬಡ ಕೂಲಿ ಕಾರ್ಮಿಕರೊಬ್ಬರು ತನ್ನ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಬಹುದು ಅಂತ, ಕೂಡಿಟ್ಟ ಹಣವನ್ನು ಬಡವರಿಗೆ ನೀಡಿ ಉದಾರತೆ ಮೆರೆದಿದ್ದಾರೆ.

‘ಶ್ರೀಮಂತ ಹೃದಯದ’ ಬಡವನಿಂದ ಬಡವರಿಗೆ ಸಹಾಯ
ಹೌದು.. ಅಂಬಲಪಾಡಿಯ ಕೃಷ್ಣ ಎಂಬುವವರು ತೆಂಗಿನ ಕಾಯಿ ಕೀಳೋದು, ಮರ ಕಡಿಯುವುದು ಹೀಗೆ ಏನಾದರೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹಿಗೆ ಕೂಲಿ ಮಾಡಿ ಸುಮಾರು 70 ಸಾವಿರ ರೂಪಾಯಿಯನ್ನು ಕೂಡಿಟ್ಟಿದ್ದರು. ಆದ್ರೆ ಸದ್ಯ ಈ ಕೂಡಿಟ್ಟ ಹಣವನ್ನೆಲ್ಲ, ತನ್ನಂತೆ ಇರುವ ಬಡವರಿಗೆ ದಾನ ಮಾಡಿದ್ದಾರೆ. ಅಕ್ಕಿ, ಬೇಳೆ, ಉಪ್ಪು, ಸಕ್ಕರೆ ಚಹಾಪುಡಿ, ಎಲೆ-ಅಡಿಕೆ ಮತ್ತಿತರ ಅಗತ್ಯ ವಸ್ತುಗಳನ್ನು 70 ಕುಟುಂಬಗಳಿಗೆ ದಾನ ಕೊಟ್ಟಿದ್ದಾರೆ.

The post ‘ಬಡವನ ಹೃದಯ ಶ್ರೀಮಂತಿಕೆ’ -70 ಕುಟುಂಬಕ್ಕೆ ಕಿಟ್ ಹಂಚಿದ ಕೂಲಿ ಕಾರ್ಮಿಕ​ appeared first on News First Kannada.

Source: newsfirstlive.com

Source link