ಬೆಂಗಳೂರು: ಇಂದು ಬೆಳಗ್ಗಿನಿಂದ ರೋಡ್​ಗಿಳಿದ ಬಿಬಿಎಂಪಿ ಮಾರ್ಷಲ್​ಗಳು, ಮಾರ್ಕೇಟ್​ನಲ್ಲಿ ಮಾಸ್ಕ್ ಹಾಕದೇ ಓಡಾಟ ಮಾಡುವವರಿಗೆ ದಂಡ ವಿಧಿಸುತ್ತಿದ್ದಾರೆ. ಈ ವೇಳೆ, ಮಾಸ್ಕ್​ ಹಾಕದಿದ್ದ ಯುವಕನಿಗೆ ಮಾಶರ್ಷಲ್ಸ್​ ಫೈನ್ ಹಾಕಿದ್ದಾರೆ. ಈ ವೇಳೆ, ಫೈನ್​ ಕಟ್ಟಿ, ನಂತರ ಮಾರ್ಷಲ್​ಗಳ ಮೇಲೆ ಆಕ್ರೋಶವನ್ನ ಯುವಕ ಹೊರ ಹಾಕಿದ್ದಾನೆ.

ಓಡಿ ಬಂದಾಗ ಮಾಸ್ಕ್ ಕೆಳಗೆ ಬಂದಿರುತ್ತೆ, ಅದಕ್ಕೆ ನೀವು ಮಾಸ್ಕ್​ ಹಾಕಿಲ್ಲ ಅಂದ್ರೆ, ಹೇಗೆ? ಬಡವರನ್ನ ಟಾರ್ಗೆಟ್ ಯಾಕೆ ಮಾಡ್ತೀರಿ?  ಸಾಯಿಸಿಬಿಡಿ ನಮ್ಮನ್ನ.ಮಾಸ್ಕ್ ಹಾಕೋದ್ರಿಂದ ಕೊರೋನಾ ಬರೋಲ್ವಾ? ನಿಮಗೆ ಮಾಸ್ಕ್ ಹಾಕೋದು ಹೇಗೆ ಗೊತ್ತಾ. ಮಾಸ್ಕ್ ಹಾಕಿದ್ರೆ ಆಕ್ಸಿಜನ್ ಲೆವೆಲ್ ಇಳಿಯುತ್ತೆ.ನಾನು ಎಜುಕೇಟೆಡ್, ನನಗೂ ಗೊತ್ತಿದೆ ರೂಲ್ಸ್ ಏನು ಅನ್ನೋದು ಎಂದು ಮಾರ್ಷಲ್ಗಳಿಗೆ ಹಿಗ್ಗಾಮುಗ್ಗ ಯುವಕ ಕ್ಲಾಸ್​ ತೆಗೆದುಕೊಂಡಿದ್ದಾನೆ.

The post ‘ಬಡವರನ್ನ ಟಾರ್ಗೆಟ್ ಯಾಕೆ ಮಾಡ್ತೀರಿ? ಸಾಯಿಸಿಬಿಡಿ ನಮ್ಮನ್ನ’ appeared first on News First Kannada.

Source: newsfirstlive.com

Source link