ಬೆಂಗಳೂರು:  ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ಎರಡನೇ ಅಲೆಯನ್ನ ನಿಯಂತ್ರಣಕ್ಕೆ ತರಲು ಲಾಕ್​ಡೌನ್ ವಿಧಿಸಲಾಗಿದೆ. ಈ ಹಿನ್ನಲೆ ಇಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪುಲಿಕೇಶಿನಗರದ ಬಡ ಜನರಿಗೆ ಉಚಿತ ದಿನಸಿ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರು. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ದಿನಸಿ ಸಾಮಗ್ರಿಗಳನ್ನ ಹಂಚಿದರು. ಈ ವೇಳೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಡವರಿಗೆ ಉಚಿತ ದಿನಸಿ ಕೊಡ್ತಿದ್ದಾರೆ. ಲಾಕ್​ಡೌನ್​​ ಇರೋದ್ರಿಂದ ಬಡವರು ಹಸಿವಿನಿಂದ ಇರಬಾರದು ಅಂತ ಉಚಿತ ದಿನಸಿ ಕೊಡ್ತಿದ್ದಾರೆ. ಮನೆಮನೆಗೇ ಉಚಿತ ದಿನಸಿ ಕಳಿಸ್ತಿದ್ದಾರೆ ಎಂದರು. ಇನ್ನು ರಾಜ್ಯದಲ್ಲಿ ಟೋಟಲ್ ಲಾಕ್​ಡೌನ್ ಮಾಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ರು. ಸೋಂಕಿತರ ಸಂಖ್ಯೆ ಪ್ರತಿನಿತ್ಯ 50 ಸಾವಿರದ ಆಸುಪಾಸಿನಲ್ಲಿದೆ.  ಹೀಗಾಗಿ ಟೋಟಲ್ ಎರಡು ವಾರಗಳ ಕಾಲ ಟೋಟಲ್ ಲಾಕ್​ಡೌನ್ ಮಾಡಬೇಕು. ಅದರಿಂದ ಕೊರೊನಾ ಸರಪಳಿ ತುಂಡರಿಸಬಹುದು. ನನ್ನ ಅಭಿಪ್ರಾಯದ ಪ್ರಕಾರ ಸೋಂಕಿತರ ಸಂಖ್ಯೆ ಕಡಿಮೆ ಆಗಬೇಕು ಅಂದರೆ ಟೋಟಲ್ ಲಾಕ್​ಡೌನ್ ಮಾಡಲೇಬೇಕು ಎಂದರು.

 

 

The post ಬಡವರಿಗೆ ಉಚಿತ ದಿನಸಿ ವಿತರಿಸಿ, ಟೋಟಲ್​ ಲಾಕ್​ಡೌನ್​ಗೆ ಒತ್ತಾಯಿಸಿದ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link