ಶಿವಮೊಗ್ಗ: ಕೊರೊನಾ ಸಂಕಷ್ಟದಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಅದ್ರಲ್ಲೂ ಗ್ರಾಮೀಣ ಭಾಗದ ಬಡಜನರು ಜೀವಿಸುವುದೇ ಕಷ್ಟವಾಗಿದೆ. ಅದೆಷ್ಟೋ ಜೀವರಾಶಿಗಳು ಹಸಿವಿನಿಂದ ತತ್ತರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ, ಬಡ ಜನರಿಗೆ ಪ್ರತಿನಿತ್ಯ ಅವರ ಮನೆ ಬಾಗಿಲಿಗೆ ಹಾಲು ಸರಬರಾಜು ಆಗುವಂತೆ ಹಾಲು ಅಭಿಯಾನ ಆರಂಭಿಸಿದ್ದಾರೆ.

ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಹೊನಗೋಡು ರತ್ನಾಕರ ಎಂಬುವವರು, ಬಡ ಜನರ ಕಷ್ಟಕ್ಕೆ ನೆರವಾಗಿದ್ದು, ಹಾಲು ಅಭಿಯಾನವನ್ನ ಶುರು ಮಾಡಿ ಆನಂದಪುರದ ಬಡ ಕುಟುಂಬದ ಪ್ರತಿ ಮನೆಗೆ ಹಾಲನ್ನು ತಲುಪಿಸುತ್ತಿದ್ದಾರೆ. ಕೊರೊನಾ ಹೆಚ್ಚಳದಿಂದ ಇಡೀ ಆನಂದಪುರಂ ಸೀಲ್ ಡೌನ್ ಆಗಿದೆ. ಹಾಗಾಗಿ ಯಾರೂ ಅಷ್ಟು ಸುಲಭವಾಗಿ ಮನೆಯಿಂದ ಹೊರ ಬರುವ ಹಾಗಿಲ್ಲ. ಇದೇ ಕಾರಣಕ್ಕೆ, ರತ್ನಾಕರ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಪ್ರತಿದಿನ ಸಾವಿರಾರು ಕುಟುಂಬಕ್ಕೆ ಹಾಲಿನ ಪ್ಯಾಕೆಟ್​ನ್ನ ನೀಡುವ ವ್ಯವಸ್ಥೆಯನ್ನ ಮಾಡಿದ್ದಾರೆ.

 

ಪ್ರತಿದಿನ 600 ರಿಂದ 700 ಲೀಟರ್ ಹಾಲನ್ನು ಇವರು ಹಂಚುತ್ತಿದ್ದಾರೆ. ಈ ಕೊರೊನಾ ಸಂದರ್ಭದಲ್ಲಿ ಜನ ಮಾನವೀಯತೆ ಮರೆಯುತ್ತಿರುವ ಘಟನೆಯ ನಡುವೆ ಇಂತವರು, ಬಡ ಜನರ ಕಷ್ಟಕ್ಕೆ ನೆರವಾಗುತ್ತಿರುವುದು ನಿಜಕ್ಕೂ ಎಲ್ಲರಿಗೂ ಮಾದರಿ.

The post ಬಡವರ ನೆರವಿಗೆ ನಿಂತ ಮಾಜಿ ಜಿಪಂ ಸದಸ್ಯ; ನಿತ್ಯವೂ ಮನೆ ಮನೆಗೆ ತಲುಪುತ್ತಿದೆ ಹಾಲು appeared first on News First Kannada.

Source: newsfirstlive.com

Source link