ಕಾಂಗ್ರೆಸ್ನಿಂದ ಸಿಎಂ ಇಬ್ರಾಹಿಂ ಒಂದು ಕಾಲು ಹೊರಗಿಟ್ಟಿರೋದು ಬಹಿರಂಗ ಸತ್ಯ. ಇದೀಗ ಅವರನ್ನ ಪಕ್ಷದಲ್ಲೇ ಉಳಿಸಿಕೊಳ್ಳೋದಕ್ಕೆ ಹಲವು ನಾಯಕರ ಹತ್ತಾರು ಕಸರತ್ತು ಚಾಲ್ತಿಯಲ್ಲಿವೆ. ಇದರ ಭಾಗವಾಗಿ ಬಡೇಮಿಯಾ-ಛೋಟೇಮಿಯಾ ಮೀಟಿಂಗ್ ನಡೆದಿದೆ. ಸೀಕ್ರೆಟ್ ಚರ್ಚೆಯೂ ನಡೆದಿದೆ.
ಸಿಎಂ ಇಬ್ರಾಹಿಂ ರೆಬೆಲ್ ಆಗಿರೋ ವಿಚಾರ ಕಾಂಗ್ರೆಸ್ನಲ್ಲಿ ಹೊಸ ಚರ್ಚೆ, ಆತಂಕ ಹುಟ್ಟುಹಾಕಿತ್ತು. ಇಬ್ರಾಹಿಂ ಮನವೊಲಿಕೆಗೂ ಕಸರತ್ತು ಶುರುವಾಗಿತ್ತು. ಇದು ಈಗಲೂ ನಡೆಯುತ್ತಲೇ ಇದೆ. ಇದರ ಭಾಗವಾಗಿ ನಿನ್ನೆ ಹುಬ್ಬಳ್ಳಿಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಸಿ.ಎಂ ಇಬ್ರಾಹಿಂರನ್ನ ಭೇಟಿ ಮಾಡಿದ್ದಾರೆ. ಕೆಲ ಕಾಲ ಸೀಕ್ರೆಟ್ ಚರ್ಚೆಯನ್ನ ನಡೆಸಿರೋದು ಕುತೂಹಲಕ್ಕೆ ಕಾರಣವಾಗಿದೆ.
ಮುಂದಿನ ವಿಚಾರ ಓದೋ ಮೊದಲು ಇನ್ನೊಂದಿಷ್ಟು ಫೋಟೋಸ್ ತೋರಿಸ್ತೀವಿ ಅದನ್ನೂ ನೋಡಿ ಬಿಡಿ..
ಭೇಟಿಯ ವೇಳೆ ಬಡೇ ಮಿಯಾಗೆ ಛೋಟೇ ಮಿಯಾ ಐಸ್ಕ್ರೀಂ ತಿನ್ನಿಸಿದ್ದಾರೆ. ಸಿ.ಎಂ. ಇಬ್ರಾಹಿಂ ಬಾಯಿಗೆ ಖುದ್ದು, ಜಮೀರ್ ಐಸ್ ಇಟ್ಟಿದ್ದಾರೆ. ಈ ಭೇಟಿ ರಾಜಕೀಯವಾಗಿ ಮಾತಿನ ಮಲ್ಲನ ಮನಸ್ಸು ಕರಗಿಸುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಪಕ್ಷವನ್ನ ಗಟ್ಟಿಗೊಳಿಸೋ ನಿಟ್ಟಿನಲ್ಲೂ ಉಭಯ ನಾಯಕರ ಮಾತುಕತೆ ನಡೆದಿದೆ ಎನ್ನಲಾಗಿದೆ.
ಮೀಟಿಂಗ್ನಲ್ಲಿ ಏನ್ ನಡೀತು..?
- ಇಬ್ರಾಹಿಂ ಭೇಟಿಯಾಗಿ ಜಮೀರ್ರಿಂದ ಮನವೊಲಿಕೆ ಕಸರತ್ತು
- ಹೈಕಮಾಂಡ್ ನಿಮ್ಮನ್ನು ಕರೆದು ಮಾತಾಡುತ್ತೆ, ತಾಳ್ಮೆಯಿಂದ ಇರಿ
- ನಾವೆಲ್ಲಾ ನಿಮ್ಮ ಪರವಾಗಿದ್ದೇವೆ, ದುಡುಕಿ ತೀರ್ಮಾನ ಮಾಡಬೇಡಿ
- ಎಲ್ಲವನ್ನೂ ಕೇಳಿಸಿಕೊಂಡು ನಿರ್ಧಾರದ ಬಗ್ಗೆ ಹೇಳದ ಇಬ್ರಾಹಿಂ
- ಕಮಾಂಡ್ ಕರೆಯಲಿ, ಮಾತಾಡಲಿ, ಏನು ಹೇಳ್ತಾರೋ ಹೇಳಲಿ
- ಹೈಕಮಾಂಡ್ ಏನ್ ಮಾಡುತ್ತೋ ನೋಡೋಣ ಎಂದ ಇಬ್ರಾಹಿಂ
- ನೀವೆಲ್ಲಾ ಹೇಳಿರೋದ್ರಿಂದ ಏಕಾಏಕಿ ರಾಜೀನಾಮೆ ಅಂತೂ ಕೊಡಲ್ಲ
- ಹೈಕಮಾಂಡ್ ಏನ್ ಮಾಡುತ್ತೋ ನೋಡ್ತೀನಿ ಎಂದ ಸಿಎಂ ಇಬ್ರಾಹಿಂ
ಒಟ್ನಲ್ಲಿ, ಬಡೇಮಿಯಾ-ಛೋಟೇಮಿಯಾ ಭೇಟಿ.. ಐಸ್ಕ್ರೀಮ್ ಪ್ರೀತಿ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನಂತೂ ಹುಟ್ಟುಹಾಕಿದೆ. ಮಾತುಕತೆ ಏನಾಯ್ತು ಅನ್ನೋದನ್ನ ಉಭಯ ನಾಯಕರು ಬಹಿರಂಗವಾಗಿ ಬಿಚ್ಚಿಟ್ಟಿಲ್ಲ. ಪಕ್ಷ ಬಿಡೋದಕ್ಕೆ ತಯಾರಾಗಿರೋ ಸಿಎಂ ಇಬ್ರಾಹಿಂ ಮನಸ್ಸನ್ನು ಐಸ್ಕ್ರೀಮ್ ಪ್ರೇಮ ಕರಗಿಸಿದ್ಯಾ? ಎಂಬುದಕ್ಕೆ ಮುಂದಿನ ದಿನಗಳೇ ಉತ್ತರಿಸಬೇಕು.
ವಿಶೇಷ ಬರಹ: ವೀರೇಂದ್ರ, ಪೊಲಿಟಿಕಲ್ ಬ್ಯೂರೋ