ಬಣ್ಣದ ಬೆಳಕಿನ ಅಲಂಕಾರದಿಂದ ಕಂಗೊಳಿಸುತ್ತಿವೆ ಐಹೊಳೆ, ಪಟ್ಟದಕಲ್ಲು

ಬಾಗಲಕೋಟೆ: ಜಿಲ್ಲೆಯ ಬದಾಮಿ ತಾಲೂಕಿನ ಪಟ್ಟದಕಲ್ಲು, ಹುನಗುಂಡ ತಾಲೂಕಿನ ಐಹೊಳೆ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಬೆಳಕಿನ‌ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ದೇವಾಲಯ ಹಾಗೂ ಸ್ಮಾರಕಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನದಲ್ಲಿ 100 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯದಿಂದ ದೇಶದ 100 ಸ್ಮಾರಕಗಳಿಗೆ ದೀಪಾಲಂಕಾರ ಮಾಡಿದೆ.

 

ಈ ಪೈಕಿ ಬಾಗಲಕೋಟೆ ಜಿಲ್ಲೆಯ ಪ್ರಸಿದ್ದ ಬದಾಮಿ ಚಾಲುಕ್ಯರ ಪಟ್ಟದಕಲ್ಲು ಹಾಗೂ ಐಹೊಳೆ ಆಯ್ಕೆಯಾಗಿವೆ. ಮೂರು ದಿನಗಳ ಕಾಲ ಈ ಬೆಳಕಿನ ಅಭಿಯಾನ ನಡೆಯಲಿದೆ. ದೀಪಾಲಂಕಾರದ ಜೊತೆ ದೇಶಭಕ್ತಿಗಳ ಪ್ರತಿಧ್ವನಿಯೂ ಮೊಳಗುತ್ತಿದೆ. ಮೂರು ದಿನಗಳ ಕಾಲ ಸ್ಮಾರಕಗಳು, ತಾಣಗಳು ಝಗಮಗಿಸಲಿವೆ.

News First Live Kannada

Leave a comment

Your email address will not be published. Required fields are marked *