ರಾಜ್ಯ ಕಾಂಗ್ರೆಸ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಣಗಳ ಗದ್ದಲ ದೊಡ್ಡದಾಗುತ್ತಿದೆ. ಒಂದು ಬಣ ಪದೇ ಪದೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾ ಇದ್ದರೆ, ಡಿ.ಕೆ ಶಿವಕುಮಾರ್ ಮಾತ್ರ ನಮ್ಮದು ಸಾಮೂಹಿಕ ನಾಯಕತ್ವ.. ಅಂತಾ ಡ್ಯಾಮೇಜ್ ಕಂಟ್ರೋಲ್​ ಮಾಡ್ತಿದ್ದಾರೆ. ಹೇಳಿಕೆಗಳನ್ನ ಕೊಡುವ ಮೊದಲು ನಾಯಕರು ಹದ್ದು ಬಸ್ತಿನಲ್ಲಿರಬೇಕು ಅಂತ ಡಿ.ಕೆ ಶಿವಕುಮಾರ್ ಹೇಳಿದ ಬಳಿಕವೂ, ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯರನ್ನ ಮಾಜಿ ಸಿಎಂ ಅನ್ನಲು ಮನಸ್ಸು ಒಪ್ಪಲ್ಲ.. ಅದಕ್ಕಾಗಿ ಭಾವಿ ಸಿಎಂ ಅಂತೀನಿ.. ಇದು ನನ್ನ ವೈಯಕ್ತಿಕ ಅಂತಾ ಹೇಳಿ ಸೆಡ್ಡು ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಹೈ ಕಮಾಂಡ್ ಮಧ್ಯಪ್ರವೇಶಿಸಿದ್ದು, ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡದಂತೆ ಖಡಕ್ ಸೂಚನೆಯನ್ನ ನೀಡಿದೆ..

ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ.. ಮುಂದೆ ಸಿಎಂ ಯಾರು ಆಗಬೇಕು ಅನ್ನೋದನ್ನ ಜನರು ನಿರ್ಧರಿಸುತ್ತಾರೆ. ಕರ್ನಾಟಕದ ಅಭಿವೃದ್ಧಿಗೆ ಸದ್ಯ ಬಿಜೆಪಿ ಮುಳ್ಳಾಗಿದೆ.. ಹೀಗಾಗಿ ಯಾರೂ ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡಬಾರದು.. ಆದ್ರೆ ಹೋರಾಟ ಮುಂದುವರೆಸಬೇಕು ಅಂತಾ ಕಟ್ಟಪ್ಪಣೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ನಾಯಕತ್ವ, ಸರ್ಕಾರ ರಚನೆ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಇಂಥ ಹೇಳಿಕೆ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.. ಕಾಂಗ್ರೆಸ್ ಪಕ್ಷದ ಹೈಕಮ್ಯಾಂಡ್, ಶಾಸಕರು ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಎಲ್ಲ ಕಾಂಗ್ರೆಸ್ ನಾಯಕರು ಜನರ ಹಿತಾಸಕ್ತಿಗಾಗಿ ಒಗ್ಗೂಡಿ ಹೋರಾಡಬೇಕು..ಮಹಾಭಾರತದ ಅರ್ಜುನನಂತೆ ಹೋರಾಟ ನಮ್ಮ ಗುರಿ ಅಂತ ಕೂಡ ಅವರು ಕಟುವಾಗಿಯೇ ಹೇಳಿದ್ದಾರೆ.

The post ಬಣ ರಾಜಕೀಯ ಬಂದ್ ಮಾಡಿ.. ಮುಂದಿನ ಸಿಎಂ ಬಗ್ಗೆ ಮಾತನಾಡಬೇಡಿ..’ಕೈ’ ಹೈ ಕಮಾಂಡ್ ಕಟ್ಟಪ್ಪಣೆ appeared first on News First Kannada.

Source: newsfirstlive.com

Source link