ಬದರಿನಾಥ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಸಿಕ್ತು ತಮಿಳು ನಟ ಅಜಿತ್ ಸಹಾಯ; ಇಲ್ಲಿದೆ ಇಂಟರೆಸ್ಟಿಂಗ್ ಕಥೆ | Tamil Star Her Ajith Kumar helps to Mysore Guy in Badrinath Temple


ಬದರಿನಾಥ್ ಟ್ರಿಪ್ ಮುಗಿಸಿ ಹಿಂದಿರುಗುವಾಗ ಮೈಸೂರು ಮೂಲದ ಮಂಜು ಕಶ್ಯಪ್ ಎಂಬುವವರಿಗೆ ಅಜಿತ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಮಂಜು ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ಮಾತನಾಡಿದ್ದಾರೆ.

ಬದರಿನಾಥ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಸಿಕ್ತು ತಮಿಳು ನಟ ಅಜಿತ್ ಸಹಾಯ; ಇಲ್ಲಿದೆ ಇಂಟರೆಸ್ಟಿಂಗ್ ಕಥೆ

ಅಜಿತ್-ಮಂಜು

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್(Ajith Kumar) ಅವರು ಸಿನಿಮಾ ಜತೆಗೆ ಇನ್ನೂ ಹಲವು ವಿಚಾರಕ್ಕೆ ಗುರುತಿಸಿಕೊಂಡಿದ್ದಾರೆ. ಅವರು ಕಮರ್ಷಿಯಲ್ ವಿಮಾನ ಚಾಲನೆ ಮಾಡುವ ಲೈಸೆನ್ಸ್ ಹೊಂದಿದ್ದಾರೆ. ಬೈಕ್ ರೈಡಿಂಗ್ ಮಾಡುತ್ತಾರೆ. ಇತ್ತೀಚೆಗೆ 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಅಜಿತ್ ಸ್ಪರ್ಧಿಯಾಗಿ ಭಾಗವಹಿಸಿ ನಾಲ್ಕು ಚಿನ್ನದ ಪದಕ ಗೆದ್ದಿದ್ದರು. ಈಗ ಅವರು ಕನ್ನಡಿಗನೊಬ್ಬನಿಗೆ ಸಹಾಯ ಮಾಡಿದ್ದಾರೆ. ಬದರಿನಾಥ್ ಟ್ರಿಪ್ ಮುಗಿಸಿ ಹಿಂದಿರುಗುವಾಗ ಮೈಸೂರು ಮೂಲದ ಮಂಜು ಕಶ್ಯಪ್ ಎಂಬುವವರಿಗೆ ಅಜಿತ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಮಂಜು ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ಮಾತನಾಡಿದ್ದಾರೆ.

‘ನಾನು ಬದರಿನಾಥ್ ಟ್ರಿಪ್​ಗೆ ತೆರಳಿದ್ದೆ. ಟ್ರಿಪ್ ಮುಗಿಸಿ ಹಿಂದಿರುಗುವಾಗ ಬಿಎಂಡಬ್ಲ್ಯೂ 1250 ಜಿಎಸ್ಎ  ಬೈಕ್ ಪಾಸ್ ಆಯ್ತು. ನಾನು ಆ ಬೈಕ್​ನ ಎರಡು ಬಾರಿ ಹಿಂದಿಕ್ಕಿ ಹೋಗಿದ್ದೆ. ಆ ಬೈಕ್​ನಲ್ಲಿ ತಮಿಳು ನಟಿ ಅಜಿತ್ ಕುಮಾರ್ ಇದ್ದರು ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ನನ್ನ ಬೈಕ್​ ಟಯರ್​ನ ಗಾಳಿ ಹೋಗಿತ್ತು. ಇದು ನನ್ನ ಗಮನಕ್ಕೆ ಬಂತು. ಈ ಮೊದಲು ಆರ್ಗನೈಸ್​ ಟ್ರಿಪ್ ಮಾಡ್ತಿದ್ವಿ. ಆದರೆ, ಈ ಬಾರಿ ಆ ರೀತಿ ಆಗಿರಲಿಲ್ಲ. ಹೀಗಾಗಿ, ನನ್ನ ಬಳಿ ಬೈಕ್​ ಸಲಕರಣೆಗಳು ಇರಲಿಲ್ಲ. ನಾನು ಬಿಎಂಡಬ್ಲ್ಯೂ ಬೈಕ್ ಇದ್ದ ವ್ಯಕ್ತಿ ಬಳಿ ಏರ್​ಕಂಪ್ರೆಸರ್ ಇದೆಯೇ ಎಂದು ಕೇಳಿದೆ. ಅವರು ನನ್ನ ಹತ್ತಿರ ಇಲ್ಲ, ನನ್ನ ಹಿಂದೆ ಇದ್ದವರ ಬಳಿ ಇದೆ ಎಂದಿದ್ದರು’ ಎಂದು ಆ ದಿನದ ಘಟನೆ ಹೇಳಿದ್ದಾರೆ ಮಂಜು.

‘ಹಿಂದಿದ್ದವರು ಬರೋಕೆ ಐದು ನಿಮಿಷ ಆಯ್ತು. ಆ ಸಮಯದಲ್ಲಿ ನಾನು ಆ ವ್ಯಕ್ತಿಯ ಜತೆ ಬೈಕ್ ಬಗ್ಗೆ ಮಾತನಾಡುತ್ತಾ ನಿಂತಿದ್ದೆ. ಆ ವ್ಯಕ್ತಿ ಹೆಲ್ಮೆಟ್ ಹಾಕಿದ್ದರಿಂದ ಅವರು ಅಜಿತ್ ಎಂಬುದು ನಮಗೆ ಗೊತ್ತೇ ಆಗಲಿಲ್ಲ. ಹಿಂದೆ ಇದ್ದ ಬೈಕ್​ನವರು ಬಂದರು. ಅವರ ಬಳಿಯೂ ಏರ್​ಕಂಪ್ರೆಸರ್​ ಇರಲಿಲ್ಲ. ಹಿಂದೆ ಕಾರೊಂದು ಬರುತ್ತಿದೆ ಅದರಲ್ಲಿ ಇರಬಹುದು ಎಂಬ ಪ್ರತಿಕ್ರಿಯೆ ಅವರಿಂದ ಬಂತು. ನಾನು ಇರಲಿ ಸರ್ ನೀವು ಹೋಗಿ ಎಂದು ಹೇಳಿದೆ. ಆದರೂ ಅವರು ಕೇಳಲಿಲ್ಲ. ನಿಮಗೆ ಸಹಾಯ ಮಾಡಿಯೇ ಹೋಗುತ್ತೇನೆ ಎಂದರು’ ಎಂದಿದ್ದಾರೆ ಮಂಜು.

TV9 Kannada


Leave a Reply

Your email address will not be published.