ಜೂನ್-18 ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಫೈಟ್​..! ಇಂಗ್ಲೆಂಡ್‌ನ ಸೌತ್​ಹ್ಯಾಂಪ್ಟನ್​​ನಲ್ಲಿ ಇಂಡೋ-ಕಿವೀಸ್​ ನಡುವಿನ ಈ ಪ್ರತಿಷ್ಠಿತ ಪಂದ್ಯದ ಮೇಲೆಯೇ, ಸದ್ಯ ಎಲ್ಲರ ಕಣ್ಣು ಬಿದ್ದಿದೆ. 3 ವರ್ಷಗಳಿಂದ ಟೆಸ್ಟ್​ ಚಾಂಪಿಯನ್​ಶಿಪ್​​​​ ಪಟ್ಟಕ್ಕಾಗಿ ಹೋರಾಟ ನಡೆಸಿದ್ದ ಉಭಯ ತಂಡಗಳು, ಇದೀಗ ಪಟ್ಟ ಮುಡಿಗೇರಿಸಿಕೊಳ್ಳಲು ಒಂದೆಜ್ಜೆ ಮಾತ್ರವೇ ಬಾಕಿಯಿದೆ. ಆದ್ರೆ ಟೆಸ್ಟ್​ ಕ್ರಿಕೆಟ್​ನ ಬಲಿಷ್ಠ ತಂಡಗಳು ಎನಿಸಿಕೊಂಡಿರುವ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್, ಘಟಾನುಘಟಿ ಆಟಗಾರರಿಂದಲೇ ಕೂಡಿದೆ. ಹೀಗಾಗಿ ಈ ​ ಮ್ಯಾಚ್, ಹೈವೋಲ್ಟೇಜ್​​ ಆಗಿ ಮಾರ್ಪಟ್ಟಿದೆ. ಆದ್ರೆ ಈ ಅಗ್ರಗಣ್ಯ ತಂಡಗಳ ಕಾದಾಟದಲ್ಲಿ ಗೆಲ್ಲೋದ್ಯಾರು ಅನ್ನೋ ಚರ್ಚೆ, ದಿನದಿಂದ ದಿನಕ್ಕೆ ಕಾವೇರುತ್ತಿದೆ.

ಹೌದು..! ಐಪಿಎಲ್ ಮುಕ್ತಾಯದ ಬೆನ್ನಲ್ಲೇ ತೀವ್ರ ಸ್ವರೂಪ ಪಡೆದುಕೊಂಡ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್, ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಗೀಡಾಗುತ್ತಿದೆ. ಅದ್ರಲ್ಲೂ ಇಂಗ್ಲೆಂಡ್​ನ ಹವಾಮಾನ, ಪಿಚ್​​, ಡ್ಯೂಕ್​ ಬಾಲ್​ ಎಲ್ಲವೂ ಪರಿಗಣಿಸಿ ತಮ್ಮ ಅಭಿಪ್ರಾಯಗಳನ್ನ ಮಂಡಿಸಿರುವ ದಿಗ್ಗಜರು, ನ್ಯೂಜಿಲೆಂಡ್​​ ತಂಡಕ್ಕೆ ಜೈ ಎಂದಿದ್ದಾರೆ. ಅದ್ರೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​ನ ಅಂಕಿಅಂಶಗಳು ಮಾತ್ರ.. ಟೀಮ್ ಇಂಡಿಯಾನೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಗೆಲ್ಲೋದು ಅಂತ, ಗಂಟಾಘೋಷವಾಗಿ ಹೇಳ್ತಿವೆ.

ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಭಾರತದ ಸಾಧನೆ ಅಮೋಘ..!

2019ರಲ್ಲಿ ಆರಂಭವಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಜಿರ್ನಿ, ಈಗ ಫೈನಲ್​ಗೆ ಬಂದು ನಿಂತಿದೆ. ಆದ್ರೆ ಈ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನಲ್ಲಿ ಯಾರೂ ಮಾಡದಂತ ಸಾಧನೆ, ಟೀಮ್ ಇಂಡಿಯಾ ಪಾಲಿಗೆ ಮಾತ್ರವೇ ಸೇರುತ್ತೆ… ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ​​ 2ನೇ ಅತಿ ಹೆಚ್ಚು ಪಂದ್ಯಗಳನ್ನಾಡಿರೋ ಟೀಮ್ ಇಂಡಿಯಾ, 17 ಪಂದ್ಯಗಳಲ್ಲಿ 12 ಪಂದ್ಯ ಗೆದ್ದಿದೆ.. ಆದ್ರೆ ಈ ವಿಚಾರದಲ್ಲಿ ಕಿವೀಸ್ ಪಡೆಯ ಗೆಲುವಿನ ಟ್ರ್ಯಾಕ್ ರೆಕಾರ್ಡ್, ಭಾರತದ ಮುಂದೆ ಕಡಿಮೆಯೇ ಆಗಿದೆ.

GFX : ಟೆಸ್ಟ್​ ಚಾಂಪಿಯನ್​​ಶಿಪ್​​ನಲ್ಲಿ ಸಾಧನೆ
ಭಾರತ                             ನ್ಯೂಜಿಲೆಂಡ್
17             ಪಂದ್ಯ                11
12             ಗೆಲುವು               07
04             ಸೋಲು              04
01                ಡ್ರಾ                 00

ಸ್ವದೇಶದಲ್ಲಿ ಘರ್ಜಿಸುವ ಕಿವೀಸ್​ ಅಬ್ಬರ ವಿದೇಶದಲ್ಲಿ ಇಲ್ಲ..!
ಭಾರತದಲ್ಲೇ ಅಲ್ಲ.. ವಿದೇಶದಲ್ಲೂ ಹುಲಿಗಳ ಘರ್ಜನೆ ಜೋರು..!

ಕೆಲ ವರ್ಷಗಳ ಹಿಂದೆ ಟೀಮ್ ಇಂಡಿಯಾ ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಅನ್ನೋ ಒಂದು ಮಾತಿತ್ತು. ಆದ್ರೀಗ ಇದು ಸಂಪೂರ್ಣ ಬದಲಾಗಿದೆ. ಸ್ವದೇಶದಲ್ಲಿ ಘರ್ಜಿಸುವ ಟೀಮ್ ಇಂಡಿಯಾ ಹುಲಿಗಳು, ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ನಲ್ಲಿ ವಿದೇಶದಲ್ಲೂ ಭರ್ಜರಿಯಾಗೇ ಸೌಂಡ್ ಮಾಡಿದೆ. ನ್ಯೂಜಿಲೆಂಡ್​ ಪ್ರವಾಸವೊಂದು ಬಿಟ್ಟರೇ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾದಲ್ಲಿ ಯಂಗ್​​ ಟೀಮ್ ಇಂಡಿಯಾನೇ, ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಆದ್ರೆ ಸ್ವದೇಶದಲ್ಲಿ ಘರ್ಜಿಸಿರುವ ಕೇನ್ ವಿಲಿಯಮ್ಸನ್​​ ಪಡೆ, ವಿದೇಶಗಳಲ್ಲಿ ಫುಲ್​ ಡಲ್​ ಆಗಿದೆ.

WTC ಸ್ವದೇಶದಲ್ಲಿ ತಂಡಗಳ ಸಾಧನೆ
ಭಾರತ                           ನ್ಯೂಜಿಲೆಂಡ್
09           ಪಂದ್ಯ                 06
08          ಗೆಲುವು                06
01          ಸೋಲು               00

WTC ವಿದೇಶದಲ್ಲಿ ತಂಡಗಳ ಸಾಧನೆ
ಭಾರತ                           ನ್ಯೂಜಿಲೆಂಡ್
08            ಪಂದ್ಯ                 05
04            ಗೆಲುವು               01
03           ಸೋಲು               04
01             ಡ್ರಾ                   00

ಸದ್ಯ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿರುವ ಟೀಮ್ ಇಂಡಿಯಾ, ನಾಲ್ಕು ತಿಂಗಳ ಹಿಂದೆ ಅದರದ್ದೇ ನೆಲದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನೇ ಬಗ್ಗು ಬಡಿದಿತ್ತು. ವಿಶ್ವ ಶ್ರೇಷ್ಠ ವೇಗಿಗಳನ್ನೇ ಹೊಂದಿದ್ದ ಟೀಮ್ ಪೇಯ್ನ್​ ಪಡೆಯನ್ನ ಚಿಂದಿ ಉಡಾಯಿಸಿತ್ತು. ಬ್ರಿಸ್ಬೇನ್​​ನಲ್ಲಿ ಸೋಲಿಲ್ಲ ಎಂದು ಮೆರೆದಾಡಿದ ಆಸಿಸ್​ ಗರ್ವಭಂಗವನ್ನ ಮಾಡಿದ್ದ ಟೀಮ್ ಇಂಡಿಯಾನೇ, ಈಗ ಮತ್ತಷ್ಟು ಬಲಿಷ್ಠವಾಗಿ ಕಿವೀಸ್​, ಆಂಗ್ಲರ ಬೇಟೆಗೆ ಹೊರಟಿದೆ.

ಬ್ಯಾಟಿಂಗ್, ಬೌಲಿಂಗ್​​ ವಿಭಾಗದ ಬತ್ತಳಿಕೆಯಲ್ಲಿ ಮತ್ತಷ್ಟು ಬ್ರಹ್ಮಾಸ್ತ್ರಗಳನ್ನ ಹೊತ್ತೊಯ್ದಿರುವ ವಿರಾಟ್​ ಸೇನೆ, ಘಾತುಕ ಕಿವೀಸ್​​ ವೇಗಿಗಳ ದಾಳಿಯನ್ನೇ ಧೂಳಿಪಟ ಮಾಡುವಷ್ಟು ಸಾಮರ್ಥ್ಯ ಹೊಂದಿದೆ..! ಒಟ್ನಲ್ಲಿ ಯಾರ್ ಏನೇ ಹೇಳಿದ್ರು, ವಿಶ್ವದ ಯಾವುದೇ ತಂಡವನ್ನೂ ಮಣಿಸುವಷ್ಟ ಬಲಿಷ್ಠವಾಗಿರೋ ಟೀಮ್ ಇಂಡಿಯಾ, ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ್ರೆ, ಕಿವೀಸ್ ಕಿವಿ ಹಿಂಡೋದಂತೂ ಗ್ಯಾರಂಟಿ…

 

The post ಬದಲಾಗಿದೆ ಟೀಮ್ ಇಂಡಿಯಾ-ವಿದೇಶದಲ್ಲೂ ಮುಂದುವರೆದ ಕೊಹ್ಲಿ ಬಾಯ್ಸ್​ ಗೆಲುವಿನ ಓಟ appeared first on News First Kannada.

Source: newsfirstlive.com

Source link