ಪಿಆರ್ಕೆ ಪ್ರೋಡಕ್ಷನ್ ಅಡಿ ಉದಯ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ಧಾರಾವಾಹಿ ನೇತ್ರಾವತಿ. ತನ್ನೊಳಗೆ ಎಷ್ಟೇ ನೋವಿದ್ದರೂ ತೋರಿಸಿಕೊಳ್ಳದೇ ಇತರರಿಗೆ ನಗು ಹಂಚುವ ಮಂಜುನಾಥ ಸ್ವಾಮಿಯ ಭಕ್ತೆ ನೇತ್ರಾವತಿ. ಒರಟು ಸ್ವಭಾವದ ಬ್ಯುಸೆನೆಸ್ಮನ್ ಸಮುದ್ರ ಇವರಿಬ್ಬರ ನಡುವೆ ಕತೆ ಸುತ್ತುತ್ತಿದೆ.
ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟಿ ಅಂಜಲಿ, ದುರ್ಗಾಶ್ರೀ, ಸನ್ನಿ ಮಹಿಪಾಲ್, ಸಚಿನ್, ಚೈತ್ರಾ ರಾವ್, ದಾನಪ್ಪ, ಐಶ್ವರ್ಯಾ ಇತರರು ನಟಿಸುತ್ತಿದ್ದಾರೆ. ಸದ್ಯ ನಾಯಕ ಸಮುದ್ರನ ಪಾತ್ರ ಮಾಡುತ್ತಿದ್ದ ಸನ್ನಿ ಮಹಿಪಾಲ್ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

ನಾಯಕ ಸಮುದ್ರನ ಪಾತ್ರವನ್ನ ಹೊಸ ಪ್ರತಿಭೆ ಮಹೇಶ್ ವಸಿಷ್ಠ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮಹೇಶ್ ನೇತ್ರಾವತಿ ತಂಡಕ್ಕೆ ಸೇರ್ಪಡೆಯಾಗಿದ್ದು, ಅವರ ಅಭಿನಯದ ಸಂಚಿಕೆಗಳು ಕೂಡ ಪ್ರಸಾರವಾಗ್ತಿವೆ. ಸದ್ಯ ಸಮುದ್ರನನ್ನ ಬಂಧನದಿಂದ ನೇತ್ರಾವತಿ ಪಾರು ಮಾಡಿದ್ದಾಳೆ. ಸಮುದ್ರನ ಮನಸ್ಸಿನಲ್ಲಿ ನೇತ್ರಾವತಿಯ ಬಗ್ಗೆ ಪ್ರೀತಿ ಮೂಡುತ್ತಿದೆ. ಸಮುದ್ರನ ಸುತ್ತ ಹೆಣೆಯಲಾಗಿರುವ ತಂತ್ರವನೆಲ್ಲಾ ನೇತ್ರಾವತಿ ಒಂದೊಂದಾಗಿ ಬಿಡಿಸುತ್ತಿದ್ದಾಳೆ ನೇತ್ರಾವತಿ. ಒಟ್ನಲ್ಲಿ ಕನ್ನಡ ಕಿರುತೆರೆಗೆ ಮತ್ತೊಂದು ಹೊಸ ಪ್ರತಿಭೆ ಬಂದಿದ್ದು, ಮಹೇಶ್ ವಸಿಷ್ಠ ಅವರಿಗೆ ಹಾಗೂ ನೇತ್ರಾವತಿ ತಂಡಕ್ಕೆ ಆಲ್ ದಿ ಬೆಸ್ಟ್.