ಬದಲಾದ ಮೋದಿ ಸಂಪುಟ; ಹರ್ಷ ವರ್ಧನ್ ಸೇರಿ ಹಲವು ಹಾಲಿ ಸಚಿವರಿಂದ ರಾಜೀನಾಮೆ ಪರ್ವ

ಬದಲಾದ ಮೋದಿ ಸಂಪುಟ; ಹರ್ಷ ವರ್ಧನ್ ಸೇರಿ ಹಲವು ಹಾಲಿ ಸಚಿವರಿಂದ ರಾಜೀನಾಮೆ ಪರ್ವ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ನೂತನ ಸಚಿವರು ಸಂಪುಟ ಸೇರಲಿರುವುದು ಖಾತ್ರಿಯಾಗಿದೆ. ಇದರೊಂದಿಗೆ ಈಗಾಗಲೇ ಮೋದಿ ಸಂಪುಟದಲ್ಲಿರುವ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಗಂಗ್ವಾರ್‌, ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಕೂಡ ರಾಜೀನಾಮೆ ನೀಡಿದ್ದಾರೆ.

ಅಲ್ಲದೇ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ‌. ಸದಾನಂದಗೌಡ ಅವರ ರಾಜೀನಾಮೆ ನೀಡಿದ್ದಾರೆ. ಇನ್ನು ಡಿವಿಎಸ್​ ಅವರಿಗೆ ರಾಜ್ಯ ರಾಜಕಾರಣದತ್ತ ತೆರಳಲು ಹೈಕಮಾಂಡ್ ಸೂಚನೆ ನೀಡಿದೆಯಂತೆ. ಇನ್ನು ಡಿ.ವಿ.ಸದಾನಂದಗೌಡರಿಂದ ತೆರವಾಗುವ ಸ್ಥಾನಕ್ಕೆ ಒಕ್ಕಲಿಗ ಸಮುದಾಯ ಶೋಭಾ ಕರಂದ್ಲಾಜೆ ಆಯ್ಕೆ ಸಾಧ್ಯತೆ ಇದೆ.

ಸಚಿವರಾದ ಸಂಜಯ್ ಧೋತರೆ ಕೂಡ ರಾಜೀನಾಮೆ ನೀಡಿದ್ದಾರೆ. ಈ ಪಟ್ಟಿಯಲ್ಲಿ ಅನುರಾಗ್ ಠಾಕೂರ್, ಪುರುಷೋತ್ತಮ್ ರೂಪಾಲ ಮತ್ತು ಜಿ.ಕೆ.ರೆಡ್ಡಿ ಅವರ ಹೆಸರಿದೆ ಎನ್ನಲಾಗಿದೆ. 35ಕ್ಕೂ ಹೆಚ್ಚು ಕ್ಯಾಬಿನೇಟ್​ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾಗುವ ಒಟ್ಟಾರೆ 43 ಸಂಸದರು ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ ಇದೆ. ಇಂದು ಸಂಜೆ 6 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

The post ಬದಲಾದ ಮೋದಿ ಸಂಪುಟ; ಹರ್ಷ ವರ್ಧನ್ ಸೇರಿ ಹಲವು ಹಾಲಿ ಸಚಿವರಿಂದ ರಾಜೀನಾಮೆ ಪರ್ವ appeared first on News First Kannada.

Source: newsfirstlive.com

Source link