ಬದುಕಲು ಬಿಡಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ: ಹುಲಿ ಯೋಜನೆ ವಿರೋಧಿಸಿ ಸಂತ್ರಸ್ತರ ಪತ್ರ | Residents of NR Pura Taluk oppose Tiger Project Ask for Mercy Killing in a letter to President Ramnath Kovind


ಬದುಕಲು ಬಿಡಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ: ಹುಲಿ ಯೋಜನೆ ವಿರೋಧಿಸಿ ಸಂತ್ರಸ್ತರ ಪತ್ರ

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ನಮಗೆ ಬದುಕು ಅವಕಾಶ ಕೊಡಿ, ಇಲ್ಲವೇ ದಯಮರಣಕ್ಕೆ ಅನುಮತಿ ನೀಡಿ ಎಂದು ನರಸಿಂಹರಾಜಪುರ (ಎನ್​.ಆರ್.ಪುರ) ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿರುವ ಹುಲಿ ಯೋಜನೆ ಸಂತ್ರಸ್ತರು (Tiger Project) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಎನ್​.ಆರ್.ಪುರ ತಾಲ್ಲೂಕಿನ ಸಾರ್ಯಾ, ಸಾಲೂರು, ಹೆನ್ನಂಗಿ, ಆಡುವಳ್ಳಿ, ಮುದುಗುಣಿ, ಬೈರಾಪುರ, ಸೇರಿದಂತೆ ಹತ್ತಾರು ಹಳ್ಳಿಗಳ ಜನರು ಸಾಮೂಹಿಕ ದಯಾ ಮರಣಕ್ಕೆ ಒಪ್ಪಿಗೆ ನೀಡುವಂತೆ ಆಗ್ರಹಿಸಿ ಪತ್ರ ಬರೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಸೂಕ್ಷ್ಮ ಪರಿಸರ ವಲಯ ಘೋಷಣೆಯ ಪ್ರಸ್ತಾವಕ್ಕೆ ಈ ಹಿಂದಿನಿಂದಲೂ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯನ್ನು ವಿರೋಧಿಸಿ ಹಲವು ಬಾರಿ ಬಂದ್ ಹಾಗೂ ಪ್ರತಿಭಟನೆಗಳನ್ನು ನಡೆಸಲಾಗಿದೆ.

ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ಹೆಸರಿನಲ್ಲಿ ತಾಲೂಕಿನ ಹತ್ತಾರು ಗ್ರಾಮಗಳು ಕಣ್ಮರೆಯಾಗಲಿವೆ. ಚಿಕ್ಕಮಗಳೂರು ಜಿಲ್ಲೆಯ 51 ಗ್ರಾಮಗಳು ಯೋಜನೆ ವ್ಯಾಪ್ತಿಗೆ ಬರಲಿದ್ದು, 8750 ಕುಟುಂಬ, 75ಕ್ಕೂ ಹೆಚ್ಚು ದೇವಸ್ಥಾನಗಳು, 3 ಚರ್ಚ್, 4 ಮಸೀದಿಗಳು ಈ ಯೋಜನೆ ವ್ಯಾಪ್ತಿಗೆ ಬರಲಿದೆ. ಹೀಗಾಗಿ ಈ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಭದ್ರಾ ಹುಲಿಯೋಜನೆಗೆ 10 ಕಿಮೀ ವ್ಯಾಪ್ತಿಯ ಬಫರ್ ಜೋನ್ ಘೋಷಿಸಲು ಮುಂದಾಗಿರುವುದರಿಂದ ಇಡೀ ನರಸಿಂಹರಾಜಪುರ ಪಟ್ಟಣವೇ ಯೋಜನೆಯ ವ್ಯಾಪ್ತಿಗೆ ಸೇರಲಿದೆ.

TV9 Kannada


Leave a Reply

Your email address will not be published. Required fields are marked *