ಕಾರ್ತಿಕ್​ ಜಯರಾಮ್​ ಅಲಿಯಾಸ್​ ಜೆ.ಕೆ…ಈ ಹೆಸರು ಕೇಳಿದಾಕ್ಷಣ ಬಿಗ್​ಬಾಸ್​ ಸೀಸನ್​ 5 ಹಾಗೇ ಅವರು ನಟಿಸಿದ ಧಾರಾವಾಹಿ, ಸಿನಿಮಾಗಳು ಥಟ್​ ನೆನಪಾಗುತ್ತೆ. ತಮ್ಮ ಎತ್ತರದ ನಿಲುವಿನಿಂದ ಗುರುತಿಸಿಕೊಳ್ಳುವ ಜೆ.ಕೆ, ಸಿನಿ ಜರ್ನಿಯಲ್ಲಿ ಮತ್ತೊಂದು ದೊಡ್ಡ ಹೆಜ್ಜೆಗೆ ಮುಂದಾಗಿದ್ದಾರೆ. ಮತ್ತೊಂದು ರೋಚಕ ಹಂತಕ್ಕೆ ಕಾಲಿಡುತ್ತಿದ್ದಾರೆ. ಹೌದು.. ಜೆ.ಕೆ ಈಗಾಗಲೇ ಸ್ಯಾಂಡಲ್​ವುಡ್​ ಸಿನಿಮಾಗಳಲ್ಲಿ ಮಿಂಚಿ, ಬಾಲಿವುಡ್​ನಲ್ಲೂ ಗುರುತಿಸಿಕೊಂಡಿದ್ದಾರೆ. ಆದ್ರೆ ಇದೀಗ ತಾವು ನೀಡಿದ ಕೇವಲ 10 ನಿಮಿಷ ಬಾಲಿವುಡ್​ನಲ್ಲಿ ತಮ್ಮ ಹೆಸರಿನ ಛಾಪು ಮೂಡಿಸುತ್ತೆ ಅನ್ನೋದು ಜೆ.ಕೆ ನಂಬಿಕೆ.

ಹೌದು.. 10 ನಿಮಿಷಕ್ಕೆ ಜೆ.ಕೆ ಬದುಕು ಬದಲಾಗಿತ್ತು. ಬಾಲಿವುಡ್​ನಲ್ಲಿ ತಯಾರಾಗುತ್ತಿರುವ ‘ಶಹಬಾಸ್​ ಮಿತ್ಥೂ’ ಬಯೋಪಿಕ್​ನಲ್ಲಿ ಕೇವಲ ಹತ್ತೇ ನಿಮಿಷಗಳಲ್ಲಿ ಜೆ.ಕೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಯೆಸ್​.. ಭಾರತೀಯ ಮಹಿಳಾ ಕ್ರಿಕೆಟ್​​ ತಂಡದ ನಾಯಕಿ ಮಿಥಾಲಿ ರಾಜ್​ ಕಥೆಯಿದು. ‘ಶಹಬಾಸ್​ ಮಿತ್ಥೂ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಜೆ.ಕೆ ನಟಿಸಲಿದ್ದಾರೆ. ಇದೇ ಮೇ 14ರಿಂದ ತಮ್ಮ ಭಾಗದ ಶೂಟಿಂಗ್​ ಶುರುವಾಗಬೇಕಿತ್ತಾದ್ರೂ, ಮಹಾರಾಷ್ಟ್ರದಲ್ಲಿ ಹೇರಿದ ಲಾಕ್​ಡೌನ್​ನಿಂದ ಶೂಟಿಂಗ್​​ ಮುಂದಕ್ಕೆ ಹೋಗಿದೆ.

ಹೇಳಿ ಕೇಳಿ ಜೆ.ಕೆಗೆ ಕ್ರಿಕೆಟ್​ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಅಂತದ್ರಲ್ಲಿ ಕ್ರಿಕೆಟರ್​ ಆಗಿ ಸಿನಿಮಾದಲ್ಲಿ ಆ್ಯಕ್ಟ್​ ಮಾಡ್ಬೇಕು ಅಂದ್ರೆ ಸುಮ್ನಿರ್ತಾರಾ? ಖಂಡಿತ ಇಲ್ಲ. ಅಂದ್ಹಾಗೆ, ಈ ಸಿನಿಮಾಗೆ ಜೆ.ಕೆ ಸೆಲೆಕ್ಷನ್​ ಆಗಿದ್ದೇ ರೋಚಕ. ಚಿತ್ರತಂಡ ಕಳಿಸಿದ ಇಂಗ್ಲೀಷ್​ ಸ್ಕ್ರಿಪ್ಟ್​​ನ ಹಿಂದಿಗೆ ಅನುಕರಣೆ ಮಾಡಿ, ಅದಕ್ಕೆ ತಕ್ಕಂಥ ಉಡುಪು ತೊಟ್ಟು ಹತ್ತೇ ನಿಮಿಷಗಳಲ್ಲಿ ಆಡಿಷನ್​ ಕೊಟ್ಟಿದ್ದಾರೆ. ಬಹುಷಃ ಕಾರ್ತಿಕ್​ರ ಇದೇ ವೇಗವನ್ನ ಇಷ್ಟ ಪಟ್ಟ ತಂಡ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಜೆ.ಕೆಯನ್ನ ಸಿನಿಮಾಗೆ ಲಾಕ್​ ಮಾಡ್ಬಿಟ್ರು. ಹೌದು.. ಜೆ.ಕೆ ತಮ್ಮ ಆಡಿಷನ್​ ವಿಡಿಯೋ ಕಳಿಸಿದ ಹತ್ತೇ ನಿಮಿಷಕ್ಕೆ ‘ಶಹಬಾಸ್​ ಮಿತ್ಥೂ’ ಚಿತ್ರತಂಡ ಜೆ.ಕೆರನ್ನ ಓಕೆ ಮಾಡಿತ್ತು ಅಂತಾರೆ ಜೆ.ಕೆ. ಹತ್ತು ನಿಮಿಷಗಳಲ್ಲಿ ಆಡಿಷನ್​ ವಿಡಿಯೋ ರೆಡಿ..ಹತ್ತು ನಿಮಿಷಗಳಲ್ಲಿ ಕಥೆಗೆ ಜೆ.ಕೆ ಲಾಕ್​. ಹತ್ತರ ಕರಾಮತ್ತು ಜೆ.ಕೆಗೆ ಸಖತ್ತಾಗೇ ವರ್ಕ್​ ಆಗಿದೆ.

ನ್ಯೂಸ್​ ಫಸ್ಟ್​ ಜೊತೆ ಈ ವಿಚಾರವನ್ನ ಎಕ್ಸ್​ಕ್ಲೂಸಿವ್​ ಆಗಿ ಹಂಚಿಕೊಂಡ ಜೆ.ಕೆ ತಮಗಾಗಿರುವ ಖುಷಿಯನ್ನೂ ತೋರ್ಪಡಿಸಿದ್ದಾರೆ. ‘ನನ್ನ ಸ್ನೇಹಿತೆಯಿಂದ ನನಗೆ ಈ ಸಿನಿಮಾದ ಬಗ್ಗೆ ತಿಳಿಯಿತು. ಹಾಗೇ ಚಿತ್ರತಂಡದ ಸಂಪರ್ಕವೂ ಆಯ್ತು. ಚಿತ್ರತಂಡ ಕಳಿಸಿದ ಸ್ಕ್ರಿಪ್ಟ್​ನ ಹತ್ತೇ ನಿಮಿಷಗಳಲ್ಲಿ ನಾನು ರೆಡಿ ಮಾಡಿ ಕಳಿಸಿದ್ದು ಅವರಿಗೂ ಇಷ್ಟ ಆಯ್ತು ಅನ್ಸುತ್ತೆ. ಕಳಿಸಿದ ಹತ್ತೇ ನಿಮಿಷಕ್ಕೆ ನನ್ನನ್ನ ಅವರ ಕಥೆಗೆ ಲಾಕ್​ ಮಾಡ್ಬಿಟ್ರು. ಶಾರುಖ್​ ಖಾನ್​ ನಟನೆಯ ರಯೀಸ್​ ಸಿನಿಮಾದ ನಿರ್ದೇಶಕ ರಾಹುಲ್​ ಧೋಲಕಿಯಾ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸುತ್ತಿರೋದಕ್ಕೆ, ನಿರ್ದೇಶಕ ರಾಹುಲ್​ ಜೊತೆ ಕೆಲಸ ಮಾಡ್ತಿರೋದಕ್ಕೆ ನನಗೆ ಬಹಳ ಖುಷಿಯಾಗ್ತಿದೆ, ಎಕ್ಸೈಟೆಡ್​ ಆಗಿದ್ದೀನಿ. ಅಂದ್ಹಾಗೇ,ನನಗೆ ಯಾವಾಗಲೂ ಕ್ರಿಕೆಟ್​ ಸಿನಿಮಾ ಮಾಡ್ಬೇಕು ಅನ್ನೋ ಆಸೆ ಇತ್ತು, ಅದರಂತೆ ಈ ಸಿನಿಮಾದಲ್ಲಿ ನಾನು ಕ್ರಿಕೆಟ್​ ಆಡ್ತೀನಿ. ಹಾಗೇ ಗಡ್ಡ ಇಲ್ಲದೇ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ತಿದ್ದೀನಿ. ಕಂಪ್ಲೀಟ್​ ಪರ್ಫಾರ್ಮೆನ್ಸ್​​ ಓರಿಯೆಂಟೆಡ್​ ಪಾತ್ರ ಇದಾಗಿದೆ. ನನಗೆ ತುಂಬಾ ಖುಷಿ ಇದೆ’ ಅನ್ನೋದು ಜೆ.ಕೆ ಮಾತು.

ಇನ್ನು ಮಿಥಾಲಿ ರಾಜ್​ ಪಾತ್ರದಲ್ಲಿ ನಟಿ ತಾಪ್ಸಿ ಪನ್ನು ನಟಿಸುತ್ತಿದ್ದು, ಜೆ.ಕೆ ಕಾಂಬಿನೇಷನ್​ ತಾಪ್ಸಿ ಜೊತೆಗೇ ಇರಲಿದೆಯಂತೆ. ಲಾಕ್​ಡೌನ್​ ಸಡಿಲವಾಗ್ತಿದ್ದಂತೆಯೇ ಮುಂಬೈ ಹಾಗೂ ಹೈದರಾಬಾದ್​ನಲ್ಲಿ ಮತ್ತೆ ಚಿತ್ರೀಕರಣ ಶುರು ಮಾಡುವ ಪ್ಲ್ಯಾನ್​ ಹಾಕಿಕೊಂಡಿದೆ ‘ಶಹಬಾಸ್​ ಮಿತ್ಥೂ’ ಚಿತ್ರತಂಡ. ಇದನ್ನ ಹೊರತು ಪಡಿಸಿ, ಕಾರ್ತಿಕ್​ ಜಯರಾಮ್​ ತಮ್ಮ ‘ಐರಾವನ್’​ ಸಿನಿಮಾದ ರಿಲೀಸ್​ಗಾಗಿ ಎದುರು ನೋಡ್ತಿದ್ದಾರೆ. ಇದರ ಜೊತೆಗೆ ನಾಯಕನಾಗಿ ತಮ್ಮ ಡೆಬ್ಯೂ ತಮಿಳು ಸಿನಿಮಾ ‘ಮಾಲಿಗೈ’ ಸಿನಿಮಾ ಕೂಡ ಬಿಡುಗಡೆಗೆ ರೆಡಿಯಾಗಿದೆ. ಇನ್ನು ‘ಶಹಬಾಸ್​ ಮಿತ್ಥೂ’ ಸಿನಿಮಾದ ಜೊತೆಗೆ ‘ಐರಾವನ್’​ ಸಿನಿಮಾ ನಿರ್ಮಾಣ ಮಾಡಿದ್ದ ನಿರಂತರ ಪ್ರೊಡಕ್ಷನ್ಸ್​ನ ಮತ್ತೊಂದು ಸಿನಿಮಾದಲ್ಲಿ ಜೆ.ಕೆ ಬಣ್ಣ ಹಚ್ಚಲಿದ್ದಾರೆ ಅನ್ನೋ ಖುಷಿಯನ್ನೂ ನ್ಯೂಸ್​ ಫಸ್ಟ್​ ಜೊತೆ ಹಂಚಿಕೊಂಡಿದ್ದಾರೆ. ಅಂದ್ಹಾಗೇ ‘ಓ ಪುಷ್ಪ ಐ ಹೇಟ್​ ಟಿಯರ್ಸ್​’ ಅನ್ನೋ ಸಿನಿಮಾದ ಮೂಲಕ ಜೆ.ಕೆ ಕಳೆದ ವರ್ಷ ಬಾಲಿವುಡ್​ ಡೆಬ್ಯು ಮಾಡಿದ್ದರು.

ವಿಶೇಷ ವರದಿ: ರಕ್ಷಿತಾ, ಫಿಲ್ಮ್​ ಬ್ಯೂರೋ

The post ಬದುಕು ಬದಲಿಸಿದ 10 ನಿಮಿಷ – ಜೆ.ಕೆ ಅನುಭವದ ರೋಚಕ ಸ್ಟೋರಿ appeared first on News First Kannada.

Source: newsfirstlive.com

Source link