ಬೆಂಗಳೂರು: ತುರ್ತು ದುರಸ್ಥಿ ಹಾಗೂ ನಿರ್ವಹಣೆಯ ಕಾರ್ಯಗಳಿಂದ ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯ ಬನಶಂಕರಿ ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ 10 ದಿನ ಬಂದ್ ಮಾಡಲಾಗಿದೆ.

ಕೊರೊನಾ ಎರಡನೇ ಅಲೆಯ ತೀವ್ರತೆಗೆ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ನಿನ್ನೆ ಆರೋಗ್ಯ ಇಲಾಖೆ ನೀಡಿದ್ದ ಮಾಹಿತಿಯ ಅನ್ವಯ 24 ಗಂಟೆಯಲ್ಲಿ 346 ಮಂದಿ ಸೋಂಕಿತರು ಸಾವನ್ನಪ್ಪಿದ್ದರು. ಈ ನಡುವೆ ನಗರದಲ್ಲಿ ಸಾವನ್ನಪ್ಪಿದ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಹೊಸ ಚಿತಾಗಾರಗಳನ್ನೇ ನಿರ್ಮಿಸುವ ಅನಿವಾರ್ಯ ಸ್ಥಿತಿ ಎದುರಾಗಿತ್ತು.

ಸದ್ಯ ನಗರದಲ್ಲಿರುವ ಚಿತಾಗಾರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿತಾಗಾರದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದೆ. ತುರ್ತು ದುರಸ್ಥಿ ಹಾಗೂ ನಿರ್ವಹಣೆಯ ಕಾರಣದಿಂದ ಬನಶಂಕರಿ ವಿದ್ಯುತ್ ಚಿತಾಗಾರವನ್ನು ಮೇ 11 ರಿಂದ 20ರ ವರೆಗೂ ಬಂದ್ ಮಾಡಲಾಗಿದೆ. ಈ ಕುರಿತು ಬಿಬಿಎಂಪಿ ಪ್ರಕಟಣೆ ನೀಡಿ ಮಾಹಿತಿ ನೀಡಿದೆ.

The post ಬನಶಂಕರಿ ವಿದ್ಯುತ್ ಚಿತಾಗಾರ ನಾಳೆಯಿಂದ ತಾತ್ಕಾಲಿಕ ಬಂದ್ appeared first on News First Kannada.

Source: newsfirstlive.com

Source link