‘ಬನ್ನಿ ಗೌಡ್ರೇ ಕುತ್ಕೋಳಿ’ಎಂದ ಮೋದಿ..ಬಾಯ್ತುಂಬ ನಕ್ಕ ದೇವೇಗೌಡ


ನವದೆಹಲಿ: ಇಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಲು ಆಗಮಿಸಿದ್ದು ದೇಶದ ಮಾಜಿ ಪ್ರಧಾನಿಗೆ ಹಾಲಿ ಪ್ರಧಾನಿ ತುಂಬು ಆತ್ಮೀಯತೆಯಿಂದ ಸ್ವಾಗತಿಸಿದ ರೀತಿ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.

ಈ ವರ್ಷದ ಚಳಿಗಾಲದ ಅಧಿವೇಶನ ಹಿನ್ನೆಲೆ ಹೆಚ್​.ಡಿ. ದೇವೇಗೌಡ ಸಂಸತ್ತಿಗೆ ಆಗಮಿಸಿದ್ದಾರೆ. ಈ ವೇಳೆ ಅಧಿವೇಶನದ ಅವಧಿ ಮುಗಿದ ಮೇಲೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭೇಟಿಗೆ ತೆರಳಿದ್ದಾರೆ. ಈ ವೇಳೆ ಮಾಜಿ ಪ್ರಧಾನಿಯ ಭೇಟಿಗೆ ಉತ್ಸುಕತೆಯಿಂದ ಕಾದಿದ್ದ ಮೋದಿ ದೇವೇಗೌಡ ಬರುತ್ತಿದ್ದಂತೆ ಅವರನ್ನು ಕೈ ಹಿಡಿದು ಕರೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೇ ಅವರಿಗಾಗಿ ಮೀಸಲಿರಿಸಿದ್ದ ಕುರ್ಚಿಯನ್ನು ಸರಿ ಮಾಡಿ ಕೈ ಹಿಡಿದು ಕೂರಿಸಿದ್ದಾರೆ. ಈ ಪೋಟೋಗಳನ್ನು ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು ‘ಮಾಜಿ ಪ್ರಧಾನಿಯವರ ಜೊತೆ ಒಂದು ಸುಂದರ ಭೇಟಿ ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು ಪ್ರಸಕ್ತ ವರ್ಷದ ಸಂಸತ್ತು ಚಳಿಗಾಲ ಅಧಿವೇಶನ ನೆನ್ನೆಯಿಂದ ಶುರುವಾಗಿದೆ. ಡಿಸೆಂಬರ್​ 23ರ ವರೆಗೆ ನಡೆಯಲಿರೋ ಈ ಅಧಿವೇಶನದಲ್ಲಿ 29ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

News First Live Kannada


Leave a Reply

Your email address will not be published. Required fields are marked *