ಮುಂಬೈ: ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಧಿಕಾರಿಗಳು ದೇಶದಲ್ಲೇ ಮೊದಲ ಬಾರಿಗೆ ಬೃಹತ್ ಬ್ಯಾಂಕ್ ಹಗರಣವನ್ನು ಬಯಲಿಗೆಳೆದಿದ್ದಾರೆ. ಮುಂಬೈ ಮೂಲದ ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ವಿರುದ್ಧ 22842 ಕೋಟಿ ರೂಪಾಯಿ ವಂಚನೆ ಕೇಸ್ ದಾಖಲಿಸಿದೆ.
ಇನ್ನು, ICICI, SBI ಸೇರಿ 28 ಬ್ಯಾಂಕ್ಗಳಿಗೆ ಬರೋಬ್ಬರಿ 22842 ಕೋಟಿ ರೂಪಾಯಿ ವಂಚನೆ ಆರೋಪದ ಮೇರೆಗೆ ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಿಶಿ ಕಮಲೇಶ್ ಅಗರ್ವಾಲ್, ಮಾಜಿ ಸಿಇಒ ಸಂತಾನಂ ಮುತ್ತುಸ್ವಾಮಿ, ನಿರ್ದೇಶಕರಾದ ಅಶ್ವಿನಿ ಕುಮಾರ್, ಸುಶೀಲ್ ಕುಮಾರ್ ಅಗರ್ವಾಲ್, ರವಿ ವಿಮಲ್ ನೆವೇಟಿಯಾ ಅವರನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?
ಎಬಿಜಿ ಶಿಪ್ಯಾರ್ಡ್ ಸಂಸ್ಥೆ 28 ಬ್ಯಾಂಕ್ಗಳಿಂದ ನಾನಾ ಯೋಜನೆಗಳ ಹೆಸರಿನಲ್ಲಿ 22842 ಕೋಟಿ ರು. ಸಾಲ ಪಡೆದುಕೊಂಡಿತ್ತು. ಈಗ ಸಾಲ, ಬಡ್ಡಿ ಮರು ಪಾವತಿಸದೆ ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿಬಿಐ ಅಧಿಕಾರಿಗಳು ದೆಹಲಿ, ಮುಂಬೈ, ಪುಣೆ ಸೇರಿ ದೇಶದ 13 ನಗರಗಳ ವಿವಿಧ ಕಚೇರಿ ಮೇಲೆ ದಾಳಿ ನಡೆಸಿದೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡಿದೆ.
The post ಬಯಲಾಯ್ತು 23 ಸಾವಿರ ಕೋಟಿಯ ಭಾರೀ ದೊಡ್ಡ ಬ್ಯಾಂಕ್ ಹಗರಣ.. ಹೇಗೆ? appeared first on News First Kannada.