ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ: ಸಿಎಂ ಬೊಮ್ಮಾಯಿ ಬಗ್ಗೆ ತಮಾಷೆ ಮಾಡಿ ಮಾತನಾಡಿದ ಸುತ್ತೂರು ಶ್ರೀ | Mysuru suttur mutt swamiji kindles CM Basavaraj bommai during pm narendra modi program


ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ: ಸಿಎಂ ಬೊಮ್ಮಾಯಿ ಬಗ್ಗೆ ತಮಾಷೆ ಮಾಡಿ ಮಾತನಾಡಿದ ಸುತ್ತೂರು ಶ್ರೀ

ಸಿಎಂ ಬೊಮ್ಮಾಯಿ ಬಗ್ಗೆ ತಮಾಷೆ ಮಾಡಿ ಮಾತನಾಡಿದ ಸುತ್ತೂರು ಶ್ರೀ

ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ, ಬಸವರಾಜ ಬೊಮ್ಮಾಯಿ ಅವರಿಗೆ ಈ ಮುಖ್ಯಮಂತ್ರಿ ಪಟ್ಟ ಬಂದಿದೆ. ಹಿಂದಿನ ದಿನ ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಈ ರೀತಿಯಾಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಬಂದಿದೆ ಎಂದರು.

ಮೈಸೂರು: ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದು ಸುತ್ತೂರು ಶಾಖಾ ಮಠದಲ್ಲಿ(Suttur Mutt) ವೇದ ಪಾಠಶಾಲೆ ಕಟ್ಟಡ ಲೋಕಾರ್ಪಣೆಗೊಳಿಸಿದ್ದಾರೆ. ಈ ವೇಳೆ ನಡೆದ ಸುತ್ತೂರು ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಬಗ್ಗೆ ತಮಾಷೆ ಮಾಡಿ ಮಾತನಾಡಿದ್ದಾರೆ. ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ, ಬಸವರಾಜ ಬೊಮ್ಮಾಯಿ ಅವರಿಗೆ ಈ ಮುಖ್ಯಮಂತ್ರಿ ಪಟ್ಟ ಬಂದಿದೆ. ಹಿಂದಿನ ದಿನ ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಈ ರೀತಿಯಾಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಬಂದಿದೆ ಎಂದರು.

ಇನ್ನು ಇದೇ ವೇಳೆ ವೇದಿಕೆಯಲ್ಲಿ ಕೂರಲು ಅವಕಾಶ ಇದ್ದರು ವೇದಿಕೆಗೆ ಬಾರದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜನರೊಂದಿಗೆ ಕೂತಿದ್ದರು. ಮೊದಲಿಗೆ ಬಸವೇಶ್ವರ ಭಾವಚಿತ್ರವನ್ನು ನೆನಪಿನ‌ ಕಾಣಿಕೆಯಾಗಿ ಸುತ್ತೂರು ಮಠದ ಶ್ರೀಗಳು ನೀಡಿದ್ದು ಭಾವಚಿತ್ರಕ್ಕೆ ಪ್ರಧಾನಿ ಮೋದಿ ನಮಸ್ಕಾರ ಮಾಡಿದ್ರು. ಬಸವೇಶ್ವರ ಭಾವಚಿತ್ರದ ಜೊತೆಗೆ ಪ್ರಧಾನಿ‌ ಮೋದಿ ತಮ್ಮ ತಾಯಿ ಜೊತೆ ಇರುವ ಭಾವಚಿತ್ರ ಉಡುಗೊರೆ ನೀಡಿದ್ರು. ಮರದ ತುಂಡುಗಳ‌ ಮೂಲಕ ನಿರ್ಮಾಣವಾಗಿರುವ ಸುಂದರ ಭಾವಚಿತ್ರ ನೋಡುತ್ತಿದ್ದಂತೆ ಖುಷಿ ವ್ಯಕ್ತಪಡಿಸಿ ಸುತ್ತೂರು ಶ್ರೀಗಳಿಗೆ ಮೋದಿ ಕೈ ಮುಗಿದ್ರು.

TV9 Kannada


Leave a Reply

Your email address will not be published.