ನವದೆಹಲಿ: ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ ಬಯೋಲಾಜಿಕಲ್-ಇ ಈ ಹಿಂದೆ ಕೋವಿಡ್ ವ್ಯಾಕ್ಸಿನ್ ತಯಾರಿಸಲು ಕೇಂದ್ರ ಸರ್ಕಾರದಿಂದ 1,500 ಕೋಟಿ ಮುಂಗಡ ಹಣಕ್ಕಾಗಿ ಮನವಿ ಮಾಡಿತ್ತು. ಅದರಂತೆ ಕೇಂದ್ರ ಸರ್ಕಾರ ಇಂದು 30 ಕೋಟಿ ವ್ಯಾಕ್ಸಿನ್ ಡೋಸ್​​ಗಳನ್ನ ತಯಾರಿಸಲು ಮುಂಗಡ ಹಣ ನೀಡಲು ತೀರ್ಮಾನಿಸಿದೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಬಯೋಲಾಜಿಕಲ್-ಇ ಕಂಪನಿ ಸೆಂಟ್ರಲ್ ಡ್ರಗ್ಸ್ ಅಂಡ್ ಸ್ಟ್ಯಾಂಡರ್ಸ್ ಕಂಟ್ರೋಲ್ ಆರ್ಗನೈಸೇಷನ್(CDSCO)ನಿಂದ ತನ್ನ ವ್ಯಾಕ್ಸಿನ್​ನ ಮೂರನೇ ಹಂತದ ಪ್ರಯೋಗಕ್ಕಾಗಿ ಅನುಮತಿ ಪಡೆದುಕೊಂಡಿತ್ತು.

ಬಯೋಲಾಜಿಕಲ್-ಇ ಲಿಮಿಟೆಡ್ ಬೇಯ್ಲರ್ ಕಾಲೇಜ್ ಆಫ್ ಮೆಡಿಸಿನ್, ಯುಎಸ್​ ಜೊತೆಗೂಡಿ ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದೆ. ಇದರ ಜೊತೆಗೆ ಬಯೋಲಾಜಿಕಲ್ ಕಂಪನಿ ಎರಡು ವಿದೇಶಿ ಕಂಪನಿಗಳ ಜೊತೆಗೆ ಅವುಗಳ ವ್ಯಾಕ್ಸಿನ್​ಗಳನ್ನ ಭಾರತದಲ್ಲಿ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ.

ಅಲ್ಲದೇ ಮಂಗಳವಾರ ಕೆನಡಾ ಮೂಲದ ಕಂಪನಿಯೊಂದಿಗೆ mRNA ಕೊರೊನಾ ವ್ಯಾಕ್ಸಿನ್ ತಯಾರಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಇದಲ್ಲದೇ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಜೊತೆಗೂ ಒಪ್ಪಂದ ಮಾಡಿಕೊಂಡು ಅದರ ವ್ಯಾಕ್ಸಿನ್ ತಯಾರಿಸಲು ಮುಂದಾಗಿದೆ.

The post ಬಯೋಲಾಜಿಕಲ್-ಇ ಕಂಪನಿಯಿಂದ 30 ಕೋಟಿ ವ್ಯಾಕ್ಸಿನ್ ಖರೀದಿಗೆ ಮುಂದಾದ ಕೇಂದ್ರ appeared first on News First Kannada.

Source: newsfirstlive.com

Source link