ಬರಗೂರು ರಾಮಚಂದ್ರಪ್ಪ ಸಮಿತಿ ಎಡವಟ್ಟು ಬಯಲು: ವೀರ ಯೋಧನ ಪಠ್ಯಕ್ಕೆ ಕೊಕ್ | The Baraguru Ramachandrappa Committee is Awkward: Coke to the heroic warrior text


ಬರಗೂರು ರಾಮಚಂದ್ರಪ್ಪ ಸಮಿತಿ ಎಡವಟ್ಟು ಬಯಲು: ವೀರ ಯೋಧನ ಪಠ್ಯಕ್ಕೆ ಕೊಕ್

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾಠದ ಬದಲು ಬ್ಲಡ್ ಗ್ರೂಪ್ ಪಠ್ಯ ಸೇರ್ಪಡೆ.

ರೋಹಿತ್ ಚಕ್ರತೀರ್ಥ ಸಮಿತಿ ಬಳಿಕ ಈಗ ಬರಗೂರು ಸಮಿತಿ ಎಡವಟ್ಟು ಬಯಲಾಗಿದ್ದು, ವೀರ ಸೇನಾನಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾಠವನ್ನ ಬರಗೂರು ಸಮಿತಿ ಕೈಬಿಟ್ಟಿದ್ದೆ.

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ ಇನ್ನು ಶಾಂತವಾಗಿಲ್ಲ. ರೋಹಿತ್ ಚಕ್ರತೀರ್ಥ ಸಮಿತಿ ಬಳಿಕ ಈಗ ಬರಗೂರು ರಾಮಚಂದ್ರಪ್ಪ ಸಮಿತಿಯ ಎಡವಟ್ಟು ಬಯಲಾಗಿದ್ದು, ವೀರ ಸೇನಾನಿಯ ಪಠ್ಯವನ್ನೇ ಬರಗೂರು ಸಮಿತಿ ಕೈಬಿಟ್ಟಿದೆ ಎನ್ನಲಾಗಿತ್ತಿದೆ. ಮುಂಬೈ ದಾಳಿಯ ಉಗ್ರರ ವಿರುದ್ಧ ಹೋರಾಡಿದ್ದ ವೀರ ಯೋಧನ ಪಠ್ಯಕ್ಕೆ ಕೊಕ್ ನೀಡಿದ್ದು, ಬ್ಲಡ್ ಗ್ರೂಪ್ ಪಠ್ಯವನ್ನ ಬರಗೂರು ಸಮಿತಿ ಸೇರ್ಪಡೆಗೊಳಿಸಿದೆ. 8ನೇ‌ ತರಗತಿ ದ್ವಿತೀಯ ಭಾಷೆ ಕನ್ನಡದಲ್ಲಿದ್ದ ಗದ್ಯ ಪಾಠದಲ್ಲಿ ಉನ್ನಿಕೃಷ್ಣನ್ ಬಗ್ಗೆ ಕರಾಳ ರಾತ್ರಿ ಎಂಬ ಹೆಸರಿನ ಪಠ್ಯ ಇತ್ತು. ಮುಂಬೈ ಮೇಲೆ​ ಉಗ್ರರು ಹೇಗೆ ಅಟ್ಯಾಕ್ ಮಾಡಿದರು. ಉಗ್ರರನ್ನು ಭಾರತೀಯ ಯೋಧರು ಹೇಗೆ ಹೊಡೆದುರುಳಿಸಿದರು, ಉನ್ನಿಕೃಷ್ಣನ್ ಆಪರೇಷನ್ ಹೇಗಿತ್ತು ಎಂಬುದರ ಬಗ್ಗೆ ಪಠ್ಯದಲ್ಲಿ ಉಲ್ಲೇಖಿಸಲಾಗಿತ್ತು. ಮುಡಂಬಡಿತ್ತಾಯ ಸಮಿತಿ ಅಳವಡಿಸಿದ್ದ ಪಠ್ಯ ತೆಗೆದಿದ್ದ ಸಮಿತಿ, ಯಾವ ಕಾರಣಕ್ಕೆ ಪಠ್ಯ ಕೈಬಿಡಲಾಗಿದೆ ಎಂಬ ಬಗ್ಗೆ ವಿವರ ಇಲ್ಲ.

TV9 Kannada


Leave a Reply

Your email address will not be published.